ಹೊಸ ಪ್ರಯಾಣಕ್ಕೆ ಸರ್ಕಾರಿ ಬಸ್ ಸಿದ್ಧವಾಗಿತ್ತು. ಹೊಸ ಸಾರಥಿ ಸ್ಟೇರಿಂಗ್ ಹಿಡಿಯಲು ಸಜ್ಜಾಗಿದ್ದರು. ಬಸ್ ಹತ್ತಲು ಪ್ರಯಾಣಿಕರ ನೂಕುನುಗ್ಗಲು.

‘ಹೊಸಬರಿಗೆ ಆದ್ಯತೆ ಕೊಡ್ತೀನಿ, ಅವರೂ ಪ್ರಯಾಣಸುಖ ಅನುಭವಿಸಲಿ. ಸೀಟು ಉಳಿದರೆ ಹಳೆ ಪ್ರಯಾಣಿಕರಿಗೆ ಅವಕಾಶ ಕೊಡ್ತೀನಿ’ ಎಂದು ಡ್ರೈವರ್ ನಿಷ್ಠುರವಾಗಿ ಹೇಳಿದರು.

‘ಸಾರ್, ರಸ್ತೆಯಲ್ಲಿ ಹಳ್ಳ–ಹಂಪ್ಸ್ ಇರ್ತವೆ. ಅಲುಗಾಡ
ದಂತೆ ಸುರಕ್ಷಿತವಾಗಿ ಕರೆದೊಯ್ಯಿರಿ’ ಪ್ರಯಾಣಿಕರ ಮನವಿ.

‘ನನ್ನ ಡ್ರೈವಿಂಗ್ ಬಗ್ಗೆ ನಂಬಿಕೆ ಇರುವವರು ಕುಳಿತುಕೊಳ್ಳಿ, ಇಲ್ಲವಾದವರು ಇಳಿದುಹೋಗ್ರೀ...’ ಚಾಲಕ ಸಿಟ್ಟಾದರು.

‘ಸಾರ್, ನಮಗೂ ಬಸ್ ಹತ್ತಲು ಅವಕಾಶ ಮಾಡಿಕೊಡಿ’ ಎಂದು ಕೆಲವರು ಗೋಗರೆದರು.

‘ಫಿಲಪ್ ಆಗಿದೇರೀ, ಸೀಟು ಇಲ್ಲ’.

‘ಸೀಟು ಇಲ್ಲದಿದ್ದರೂ ಪರ್ವಾಗಿಲ್ಲ ಸ್ಟಾಂಡಿಂಗ್ ಬರ್ತೀವಿ. ಮಾರ್ಗಮಧ್ಯೆ ಸೀಟು ಖಾಲಿಯಾದರೆ ಕೂರುತ್ತೇವೆ’.

‘ಸ್ಟಾಂಡಿಂಗ್ಗೆ ಅವಕಾಶವಿಲ್ಲ, ಮುಂದಿನ ಟ್ರಿಪ್ಗೆ ಟ್ರೈ ಮಾಡಿಹೋಗ್ರಿ...’ ರೇಗಿದರು.

‘ನಡುದಾರಿಯಲ್ಲಿ ಬಸ್ ಕೆಟ್ಟರೆ ಯಾರು ರಿಪೇರಿ ಮಾಡ್ತಾರೆ ಸಾರ್?’

‘ರಿಪೇರಿನೂ ಮಾಡ್ತೀನಿ, ಪಂಚರ್ರೂ ಹಾಕ್ತೀನಿ, ಮುಂದಿನ ಸೀಟಿಗೆ ಗುದ್ದಿಕೊಂಡು ಮುಖಮೂತಿ ಜಜ್ಜಿಕೊಂಡವರಿಗೆ ಟಿಂಚರ್ರೂ ಹಾಕಿ ಬ್ಯಾಂಡೇಜೂ ಕಟ್ತೀನಿ, ನಟ್ಟುಬೋಲ್ಟ್ ಟೈಟ್ ಮಾಡಿ ಇಡೀ ಬಸ್ ಕಂಟ್ರೋಲು ಮಾಡ್ತೀನಿ...’

ಪ್ರಯಾಣಿಕರು ಖುಷಿಯಾದರು.

‘ಬಸ್ನಲ್ಲಿ ತೆಪ್ಪಗಿರಬೇಕು. ತಂಟೆತಕರಾರು ಮಾಡಕೂಡದು. ಆ ರೂಟಿನಲ್ಲಿ ಹೋಗು, ಈ ರೂಟಿನಲ್ಲಿ ಹೋಗು ಅಂತ ಯಾರೂ ಹೇಳಕೂಡದು. ನಾನೇ ಬೇರೆ ನನ್ನ ರೂಟೇ ಬೇರೆ...’ ಖಡಕ್ಕಾಗಿ ಹೇಳಿದರು.

‘ಫ್ರಂಟ್ ಸೀಟ್ ಬೇಕು, ಕಿಟಕಿ ಸೀಟು ಬೇಕು, ಬ್ಯಾಕ್ ಸೀಟು ಬೇಡ...’ ಎಂದು ಪ್ರಯಾಣಿಕರು ಜಗಳಕ್ಕೆ ಬಿದ್ದರು.

‘ಶ್! ಸೈಲೆನ್ಸ್... ಸಿಕ್ಕಿರುವ ಸೀಟಿನಲ್ಲಿ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ, ಗಲಾಟೆ ಗಿಲಾಟೆ ಮಾಡಿದರೆ ನಡುರಸ್ತೆಯಲ್ಲೇ ಬಸ್ ಇಳಿಸಿಬಿಡ್ತೀನಿ, ಹುಷಾರ್!’ ಚಾಲಕ ಎಚ್ಚರಿಸಿದರು. ಎಲ್ಲರೂ ಗಪ್ಚುಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.