ಗುದ್ಲಿಂಗ ಗುಂಡುತೋಪಲ್ಲಿ ಮರ ಕಡಿಯುತ್ತಿದ್ದಾಗ ಕೊಡಲಿ ಜಾರಿ ಕೆಳಗಿದ್ದ ಬಾವಿಗೆ ಬಿದ್ದು ಹೋಯಿತು. ಕಾವು ಕೈಲಿ ಹಿಡ್ಕೊಂಡು ಪೇಚಾಡುತ್ತಿರುವಾಗ ಮರದೇವತೆ ಪ್ರತ್ಯಕ್ಷವಾದಳು.

‘ಯಾರು ನೀನು? ಮರವನ್ನೇಕೆ ಕಡಿಯುತ್ತಿರುವೆ?’ ಕೇಳಿದಳು ದೇವತೆ.

‘ಸಿಲಿಂಡರ್ ಖಾಲಿಯಾಗಿ ಗ್ರಾಸ್ ದರಿದ್ರ ತಾಂಡವವಾಡ್ತೈತೆ ದೇವಿ. ಸೌದೆಯೇ ಗತಿ, ಅದಕ್ಕಾಗಿ ಮರ ಕಡೀತಿದ್ದೆ. ಹಿಂದಿನಂಗೇ ಚಿನ್ನದ್ದೋ, ಬೆಳ್ಳಿದೋ ಒಂದು ಕೊಡ್ಲಿ ತೆಕ್ಕೊಡು. ಪಂಚಾಯ್ತಿ ಮಾಡ್ದೆ ಸುಮ್ಕೆ ತಕಂಡು ಓಯ್ತಾ ಇರ್ತೀನಿ’ ಎಂದ ಗುದ್ಲಿಂದ.

‘ಮೂರ್ಖ, ಚಿನ್ನದ ಬುಗುಡಿ, ಬೆಳ್ಳಿ ಡಾಬಿಲ್ಲದೆ ಪ್ಲಾಸ್ಟಿಕ್ ಬೆಂಡೋಲೆ ನೇತಾಡಿಸಿಕೊಂಡು ಬಿಚ್ಚೋಲೆ ಗೌರಮ್ಮನಾಗಿ ಬಂದಿರುವುದು ಕಾಣುತ್ತಿಲ್ಲವೇ! ಕೊಡಲಿ ಆಸೆ ಬಿಡು. ಇಡ್ಲಿ ಹೋಟ್ಲು ಹಾಕುವ ಪರಿಸ್ಥಿತಿಯೂ ಇಲ್ಲ. ಧೈರ್ಯ ಮಾಡಿ ಕೆಳಗಿಳಿ’.

‘ಅಯ್ಯೋ! ನಂಗೆ ಈಜು ಬರಕಿಲ್ಲ, ಉಸಿರು ಕಟ್ಟಿ ಸಾಯ್ತೀನಿ ಅಷ್ಟೇ!’

‘ಮೂರ್ಖ, ಸಾವಿರ ಅಡಿ ಕೊರುದ್ರೂ ಹನಿ ನೀರು ಜಿನುಗಲ್ಲ, ಸುಮ್ನೆ ನನ್ ಮಾತು ಕೇಳಿ ಕೆಳಗಿಳಿ’.

ಗುದ್ಲಿಂಗ ಧೈರ್ಯ ಮಾಡಿ ಕೆಳಗಿಳಿದ. ತನ್ನ ಕೊಡಲಿ ಸಮೇತ ಒಳಗಿದ್ದ ವಸ್ತುಗಳನ್ನೆಲ್ಲಾ ಈಚೆ ತಂದ: ‘ಬರೀ ಖಾಲಿ ಬಾಟ್ಲುಗಳು!’ ಎನ್ನುತ್ತಾ ಮುಖ ಹಿಂಡಿದ.

‘ಇದು ಎಣ್ಣೆ ಬಾವಿ! ಸಂಜೆ ಇಲ್ಲಿ ಕೂತ್ಕೊಂಡು ಕುಡಿದು ಬಾವಿ ಒಳಗೆ ಬಾಟಲ್ ಎಸೆದು ಹೋಗ್ತಾರೆ. ಒಂದು ಕಡ್ಡಿಗೀರು. ಅಳಿದುಳಿದ ಎಣ್ಣೆ ಹೊಗೆಯಾಡುತ್ತೆ. ತೈಲ ಬಾವಿ ಅಂತ ಹೇಳು. ಅವರು ತಲೆ ಕೆಡಿಸ್ಕೊಂಡು ಹುಡುಕ್ತಾರೆ. ನೀನು ಅವರು ತಂದ ಗುಂಡು, ತುಂಡು ಫಿನಿಶ್ ಮಾಡು. ಸೌದೆ ಕಡಿಯೋ ಗೋಜೇ ಇಲ್ಲ’.

‘ಆಹಾ! ಎಂತಹ ಘನಾಂದಾರಿ ಐಡಿಯಾ ಕೊಟ್ಟೇಮ್ಮ? ಯಾರವ್ವಾ ನೀನು?’

‘ನಾನಾ? ಹಳೇಪೇಪರ್, ಖಾಲಿ ಸೀಸ!’ ಎಂದು ನಕ್ಕು, ಸೀಸೆ ತುಂಬ್ಕಂಡು ಗುದ್ಲಿಂಗನ ಕೈಲಿದ್ದ ಕೊಡ್ಲಿ, ಕಾವು ಎರಡನ್ನೂ ಕಿತ್ಕೊಂಡು ಹೋದ್ಲು. ಗುದ್ಲಿಂಗ ಇಂಗು ತಿಂದ ಮಂಗನಂತೆ ಮುಖ ಮಾಡಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.