‘ರೀ... ಎಲ್ಲ ಕಡಿ ನಾಯಕತ್ವ, ಯಜಮಾನಿಕಿ ಬದಲಾಗ್ತ ದಾವು, ನೀವ್ಯಾವಾಗ ನಂಗೆ ಮನಿ ಯಜಮಾನಿಕಿ ಬಿಟ್ಟು ಕೊಡೋದು?’ ಹೆಂಡತಿಯ ದಿಢೀರ್ ಪ್ರಶ್ನೆಗೆ ತಬ್ಬಿಬ್ಬಾದ ತೆಪರೇಸಿ, ‘ಅಲ್ಲೇ ನೀನೇ ಮನಿ ಯಜಮಾನಿ, ನಿನಗೇನ್ ಬಿಟ್ಟು ಕೊಡೋದೈತಿ?’ ಎಂದ.

‘ಇವೆಲ್ಲ ನಾಟಕ ಸಾಕು, ಮದುವ್ಯಾಗಿ ಎಂಟು ವರ್ಷಾತು, ನೀವೇ ಅಧಿಕಾರ ನಡೆಸ್ತಿದೀರಿ, ಈಗಾದ್ರು ನಂಗೆ ಬಿಟ್ ಕೊಡ್ರಿ...’

‘ಅಲ್ಲ, ಅದೂ...’

‘ಅಲ್ಲನೂ ಇಲ್ಲ, ಬೆಲ್ಲನೂ ಇಲ್ಲ. ನಾ ನಿಮ್ಮ ಅರ್ಧಾಂಗಿ ಅಂದಮ್ಯಾಲ ಅರ್ಧ ಅಧಿಕಾರ ನಂಗೂ ಐತಿ. ನಾನೂ ನಿಮ್ ಸಮಕ್ಕೆ ದುಡುದು ಈ ಮನಿ ನಡೆಸೀನಿ, ಹೌದಿಲ್ಲೋ?’

ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲಪ ಅಂದುಕೊಂಡ ತೆಪರೇಸಿ, ‘ಆತು, ಅಧಿಕಾರ ಬಿಟ್ಟು ಕೊಡ್ತೀನಿ, ಆದ್ರೆ ಕಂಡೀಶನ್ಸ್ ಅಪ್ಲೈ...’ ಎಂದ.

‘ಕಂಡೀಶನ್ಸಾ? ಏನವು?’

‘ವೆರಿ ಸಿಂಪಲ್, ನೀನು ಯಾವುದೇ ನಿರ್ಧಾರ ಮಾಡೋ ಮುಂಚೆ ನನ್ ಪರ್ಮಿಶನ್ ತಗಾಬೇಕು. ನನ್ ಕೇಳದೆ ರೊಕ್ಕ ಖರ್ಚು ಮಾಡಬಾರದು, ನನ್ನ ಮಕ್ಕಳನ್ನ ಟಾರ್ಗೆಟ್ ಮಾಡಬಾರದು, ಅವರು ಕೇಳಿದಾಗೆಲ್ಲ ರೊಕ್ಕ ಕೊಡ್ಬೇಕು, ನಾನು ರಾತ್ರಿ ಲೇಟಾಗಿ ಬಂದ್ರೂ ಕೇಳಬಾರದು...’

‘ಅಷ್ಟೇನಾ, ಇನ್ನೇನರೆ ಐತಾ?’

‘ರೊಕ್ಕ ಸಿಕ್ಕಾವು ಅಂತ ಗುಡಿ–ಗುಂಡಾರ ಸುತ್ತೋದು, ನೀರು ಕಂಡಲ್ಲಿ ಮುಳುಗೋದು... ಶಾಸ್ತ್ರ, ಭವಿಷ್ಯ ಕೇಳಾದು ಇದೆಲ್ಲ ಮಾಡಬಾರದು...’

‘ಸರಿ, ಮತ್ತ?’

‘ಪದೇಪದೇ ಸಿಟ್ಟಾಗೋದು, ನಟ್ಟು–ಬೋಲ್ಟು ಟೈಟ್ ಮಾಡ್ತೀನಿ ಅನ್ನೋದು ಮಾಡಬಾರದು. ಆವಾಗಾವಾಗ ನನ್ ಕಾಲಿಗೆ ಬಿದ್ದು ಆಶೀರ್ವಾದ ತಗೋತಿರಬೇಕು...’

‘ಅಲ್ಲ, ನೀವೇನು ನಂಗೆ ಯಜಮಾನಿಕಿ ಕೊಡ್ತಿದೀರೋ ಅಥ್ವ ಜವಾನಿಕಿ ಮಾಡಿಸ್ತಿದೀರೋ? ಇಂಥ ಅಧಿಕಾರ ನೀವೇ ಇಟ್ಕಳ್ರಿ, ಇಲ್ಲಿಮಟ ನೀವು ಏನೇನು ಹೇಳಿದ್ರಲ್ಲ, ಇನ್ ಮುಂದಕೆ ಅವೇ ಕಂಡೀಶನ್ಸ್ ನಿಮ್ಗೂ ಅಪ್ಲೈ ಆಗ್ತಾವು... ಬರ್ರೀ ಅಖಾಡಕ್ಕೆ, ನಾನೂ ನೋಡ್ತೀನಿ...’

ಹೆಂಡತಿ ಕಟ್ಟಾ ರೋಪಿಗೆ ತೆಪರೇಸಿ ಒಳಗೇ ಬೆವೆತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.