‘ಸ್ವೀಟ್ ತಗೊಳಿ ಸಾರ್...’ ಕೈಗೆ ಕೆಂಪು ದಾರ ಕಟ್ಟಿಕೊಂಡು, ಹಣೆಗೆ ತಿಲಕ ಇಟ್ಟುಕೊಂಡು ಬಂದ ಮುದ್ದಣ್ಣ, ಮೈಸೂರ್ಪಾಕ್ ಕೊಟ್ಟ.

‘ಏನ್ ವಿಶೇಷ ಮುದ್ದಣ್ಣ’ ಸ್ವೀಟ್ ತಿನ್ನುತ್ತಲೇ ಕೇಳಿದ ವಿಜಿ.

‘ಒಂದೆರಡು ದಿನಗಳಲ್ಲೇ ನಮ್ ಸಾಹೇಬ್ರು ಸಿಎಂ ಆಗ್ತಾರೆ ಸಾರ್’.

‘ಆರು ತಿಂಗಳಿಂದ ಇದನ್ನೇ ಹೇಳ್ತಿದೀರಿ, ಗ್ಯಾರಂಟಿ ಆಗಲ್ಲ’.

‘ಏನ್ ಸಾರ್! ಗ್ಯಾರಂಟಿಗಳು ಇರಲ್ಲ ಅಂದ್ರಾ?’

‘ಗ್ಯಾರಂಟಿಗಳದ್ದು ಗೊತ್ತಿಲ್ಲಪ್ಪ, ರಾಜ್ಯದಲ್ಲಿ ಸಿಎಂ ಚೇಂಜ್ ಆಗ್ತಾರೋ ಇಲ್ಲವೋ ಡೌಟು ಅಂದೆ’.

‘ಚೇಂಜ್ ಆಗೇ ಆಗ್ತಾರೆ ಸಾರ್. ಇನ್ಮೇಲೆ ರಾಜ್ಯದಲ್ಲಿ ಬದಲಾವಣೆ ಪರ್ವ ಶುರುವಾಗುತ್ತೆ, ನೋಡ್ತಾ ಇರಿ’.

‘ಓಹೋ, ಅಷ್ಟೊಂದು ಬದಲಾವಣೆ ತರ್ತಾರಾ?’

‘ಹೂಂ ಸಾರ್, ಬದಲಾವಣೆ ಆಗಲೇಬೇಕಲ್ಲ, ಸಚಿವ ಸಂಪುಟ ಬದಲಾಗಬೇಕು, ಶಾಸಕರು ಬಣ ಬದಲಾಯಿಸಬೇಕು, ಸಲಹೆಗಾರರು ಚೇಂಜ್ ಆಗಬೇಕು... ಜಾಹೀರಾತುಗಳಲ್ಲಿ ನಮ್ ಸಾಹೇಬ್ರುದು ಒಬ್ಬರದೇ ಫೋಟೊ ಬರಬೇಕು’.

‘ಓಹ್, ನೀನು ಈ ಬದಲಾವಣೆ ಹೇಳ್ದಾ... ಅದ್ ಸರಿ, ನಿನಗ್ಯಾಕಿಷ್ಟು ಖುಷಿ?’

‘ಇದೆಲ್ಲ ಬದಲಾದ ಮೇಲೆ, ನಿಗಮ–ಮಂಡಳಿ ಅಧ್ಯಕ್ಷರು ಬದಲಾಗಲ್ವ ಸಾರ್, ಆಗ ನನಗೊಂದು ಚಾನ್ಸ್ ಸಿಗಲ್ವ ಸಾರ್?’ ಎಂದು ವಿಜಿ ಆಶಾಭಾವದಿಂದ ಕೇಳಿದ.

‘ಓಹೊಹೊ ದೂರಾಲೋಚನೆ... ಅದಕ್ಕೆ ಈಗಿರೋರು ಹುದ್ದೆ ತ್ಯಾಗ ಮಾಡಿ, ರಾಜ್ಯಸಭೆಯ ರಾಜ ಆಗಬಹುದು ಅಥವಾ ನಿಮ್ಮ ಸಾಹೇಬ್ರಿಗೇ ನೀನೇ ತ್ಯಾಗರಾಜ ಆಗು ಅಂತ ಹೇಳಿ, ಅವರೇ ರಾಜ್ಯದ ರಾಜರಾಗಿ ಮುಂದುವರಿಯಬಹುದು...’

‘ಅಯ್ಯೋ, ಹಿಂಗೂ ಆಗಬಹುದು ಅಂತೀರಾ?’

‘ಹೂಂ ಮತ್ತೆ, ಈಗಿರೋರು ರಾಜ್ಯಸಭೆಗೆ ಏನಾದರೂ ಹೋದರೆ, ಒಂದು ಸಮನ್ವಯ ಸಮಿತಿ ಮಾಡಿ, ಮೈಸೂರಿನ ಮರಿ ಹುಲೀನ ಅದರ ಅಧ್ಯಕ್ಷನನ್ನಾಗಿ ಮಾಡಿದ್ರೂ ಮಾಡಬಹುದು...’

‘ಏಯ್ ಸುಮ್ನಿರಿ ಸಾರ್, ಬರೀ ಅಪಶಕುನ ಮಾತಾಡ್ತೀರಿ. ಹಂಗೆಲ್ಲ ಏನೂ ಆಗಲ್ಲ’ ಎಂದು ಸಿಹಿ ಡಬ್ಬಿ ಎತ್ತಿಕೊಂಡು ಹೊರಹೋದ ಮುದ್ದಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.