‘ನೋಡ್ರೀ… ನಾನು ಯಾರ್ ತಂಟೆಗೂ ಹೋಗಲ್ಲ, ನನ್ನ ತಂಟೆಗೆ ಬಂದ್ರೆ ಸುಮ್ನಿರಲ್ಲ’ ಎಂದು ಇರಾನ್ ರೀತಿ ಎಚ್ಚರಿಕೆ ಕೊಟ್ಟಳು ಹೆಂಡತಿ.

‘ನಾನೂ ಅಷ್ಟೇ, ನನ್ನ ತಂಟೆಗೆ ಬಂದ್ರೆ ಸುಮ್ನಿರಲ್ಲ, ನನ್ನ ತಂಟೆಗೆ ಬರದಿದ್ದರೂ ಸುಮ್ನಿರಲ್ಲ. ಈ ಮನೆಯ ಯಜಮಾನ ನಾನು, ನಾನು ಹೇಳಿದಂತೆಯೇ ನಡೆಯಬೇಕು’ ಅಮೆರಿಕ ರೀತಿಯಲ್ಲಿಯೇ ನಾನು ಎಚ್ಚರಿಕೆ ಕೊಟ್ಟೆ.

‘ಅದ್ಯಾಕೆ, ನನಗೂ ಸ್ವಾಭಿಮಾನ ಇದೆ, ಹಕ್ಕಿದೆ. ನಾನೂ ಈ ಮನೆ ಯಜಮಾನಿ. ನನ್ನ ಮಾತಿಗೂ ಈ ಮನೆಯಲ್ಲಿ ಬೆಲೆ ಇರಬೇಕು’ ಎಂದು ಹೆಂಡತಿ ಹಟದಲ್ಲಿ ಹೇಳಿದಳು.

‘ನಮ್ಮ ಮನೆಯವರ ಬಗ್ಗೆ ಹೀಯಾಳಿಸಿ ಮಾತಾಡ್ತೀಯ. ಎಷ್ಟು ಸಲ ವಾರ್ನಿಂಗ್ ಕೊಟ್ಟಿಲ್ಲ ನಿನಗೆ, ಆದರೂ ಮಾತಾಡ್ತೀಯ’.

‘ನೀವೂ ನಮ್ಮ ಮನೆಯವರ ಬಗ್ಗೆ ಮಾತಾಡಲ್ವ, ಆಗ ನನಗೆ ಸಿಟ್ಟು ಬರಲ್ವ...’

‘ಇನ್ನೊಮ್ಮೆ ಮಾತನಾಡಿದರೆ ನಿನ್ನನ್ನ ನಿನ್ನ ತವರು ಮನೆಗೆ ಕಳಿಸಿಬಿಡ್ತೀನಿ’ ಯುದ್ಧ ಘೋಷಿಸುವಂತೆ ಮಾತನಾಡಿದೆ.

‘ಹೌದಾ, ಅದು ಹೇಗ್ ಕಳಿಸ್ತೀರಿ ಕಳಿಸಿ ನೋಡೋಣ’ ಎಂದು ದೊಡ್ಡದಾಗಿ ಕಣ್ಣುಬಿಟ್ಟಳು.

‘ಹೋಗ್ಲಿ ಬಿಡಮ್ಮ, ಸುಮ್ಮನೆ ನಮ್ಮ ನಡುವೆ ಜಗಳ ಯಾಕೆ, ಹೊಂದಿಕೊಂಡು ಹೋಗೋಣ’ ಎಂದೆ ಮೆತ್ತಗೆ.

‘ನೀವೇನ್ರೀ ಒಳ್ಳೆ ಟ್ರಂಪ್ ರೀತಿ ಆಡ್ತೀರಿ, ಇರಾನ್ನ ನಾಶ ಮಾಡ್ತೀನಿ ಅಂತ ಹೇಳಿದ್ ಮರುದಿನವೇ ಕದನ ವಿರಾಮ ಘೋಷಿಸ್ತೀನಿ ಅಂತ ಹೇಳ್ದಂಗಾಯ್ತಿದು’ ಎಂದು ಜೋರಾಗಿ ನಕ್ಕಳು.

‘ಏನ್ ಮಾಡೋದು, ಟ್ರಂಪ್ ಮಾಡ್ತಿರೋದೆಲ್ಲ ನೊಬೆಲ್ ಶಾಂತಿ ಪ್ರಶಸ್ತಿಗಾಗಿ...’

‘ಮತ್ತೆ ನೀವು?’

‘ನಾನು ಮಾಡ್ತಿರೋದೂ ಅದಕ್ಕೆ, ಶಾಂತಿಗಾಗಿ...’

‘ಓಹೋಹೋ, ಜಗಳ ಏನೋ ಮಾಡಿದ್ರಿ... ನಮ್ಮಿಬ್ಬರಲ್ಲಿ ಯಾರು ಗೆದ್ದಂತಾಯ್ತು ಈಗ?’

‘ನಾನೇ ಗೆದ್ದಿದ್ದು ಅಂತ ನಾನು ಹೇಳ್ಕೊಂಡು ಬರ್ತೀನಿ, ನೀನೇ ಗೆದ್ದಿದ್ದು ಅಂತ ನೀನು ಹೇಳ್ಕೊಂಡ್ ಓಡಾಡು’ ಎಂದು ಹೊರಗಡಿಯಿಟ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.