‘ನಾಳೆಯಿಂದ ಚಾ, ತಿಂಡಿ ರೇಟು ಜಾಸ್ತಿ’ ಎಂದಳು ಮಂಜಮ್ಮ.

‘ಯಾಕೋ...?’ ತೆಪರೇಸಿ ಆಕ್ಷೇಪಿಸಿದ.

‘ಯುದ್ಧ ನಡೀತಿಲ್ವಾ? ಪೆಟ್ರೋಲು, ಗ್ಯಾಸು ಎಲ್ಲ ದುಬಾರಿ ಆಗುತ್ತೆ...’

‘ಇದೊಳ್ಳೆ ಕತಿಯಾತಪ, ಅಲ್ಲೆಲ್ಲೋ ಮಳಿಯಾದ್ರೆ ನಾವು ಇಲ್ಲಿ ಪಂಚೆ ಎತ್ತಿ ಕಟ್ಕಾಬೇಕಾ? ನಾವು ಒಪ್ಪಲ್ಲ, ಪ್ರತಿಭಟನೆ ಮಾಡ್ತೀವಿ’ ಎಂದ ದುಬ್ಬೀರ.

‘ಈ ಪ್ರತಿಭಟನೇಲಿ ನಾನಿಲ್ಲ, ನಾನು ಸೆಂಟ್ರಲ್ ಗೌರ್ಮೆಂಟ್ ತರ, ತಟಸ್ಥ...’ ಎಂದ ಗುಡ್ಡೆ.

‘ಉದ್ರಿ ಗಿರಾಕಿ ನೀನು, ಎಷ್ಟ್ ರೇಟಾದ್ರೆ ನಿಂಗೇನು...’ ದುಬ್ಬೀರ ನಕ್ಕ.

‘ಅದಿರ್ಲಿ, ಎರಡು ದಿನ ಎಲ್ಲಿ ನಾಪತ್ತೆ ಆಗಿದ್ಯೋ ಗುಡ್ಡೆ?’ ಮಂಜಮ್ಮ ಕೇಳಿದಳು.

‘ಗ್ರಹಣ ಅಲ್ವ ಮಂಜಮ್ಮ, ಪ್ರಳಯ ಆಗುತ್ತೆ ಅಂದಿದ್ರು ನಮ್ ಬ್ರಹ್ಮಾಂಡ ಗುರುಗಳು...’

‘ಮತ್ತೆಲ್ಲಿ ಪ್ರಳಯ ಆಗ್ಲೇ ಇಲ್ಲ?’

‘ಆಗುತ್ತೆ ನೋಡ್ತಿರು, ಜಗತ್ತಲ್ಲಿ ಒಂದು ದೊಡ್ಡ ಹತ್ಯೆ ಆಗುತ್ತೆ ಅಂತ ನಮ್ ಗುರುಗಳು ಹೇಳಿದ್ದು ನಿಜ ಆಗಿಲ್ವಾ?’

‘ಅಬಾಬಬ... ನಿಮ್ ಗುರುಗಳಿಗೆ ಮುಂದಾಗೋದೆಲ್ಲ ಗೊತ್ತಾಗುತ್ತಾ?’

‘ನಮ್ ಗುರುಗಳು ತ್ರಿಕಾಲ ಜ್ಞಾನಿಗಳು, ಯುದ್ಧ ಆಗೋದನ್ನೂ ಮುಂಚೇನೆ ಹೇಳಿದ್ರು...’

‘ಹೌದಾ? ಅಲ್ಲಿ ಅಮೆರಿಕ, ಇರಾನ್ ಯುದ್ಧ ಹಂಗಿರ್ಲಿ, ಇಲ್ಲಿ ನಮ್ ಡಿಕೆಶಿ, ಸಿದ್ರಾಮಣ್ಣ ನಡುವಿನ ಹಾಲು ಜೇನಿನ ಅಂತರ್ ಯುದ್ಧ ಏನಾಗಬಹುದು?’

‘ಅದೂ...’ ಗುಡ್ಡೆ ತಲೆ ಕೆರೆದುಕೊಂಡ.

‘ಹೋಗ್ಲಿ, ಸಿದ್ರಾಮಣ್ಣ ಕುರ್ಚಿ ಬಿಟ್ ಕೊಡ್ತಾರೋ ಅಥ್ವ ಸ್ಟ್ರೀಟ್ ಫೈಟ್ ಆಗುತ್ತೋ?’

‘ಅದು ಹೈಕಮಾಂಡ್ಗೆ ಬಿಟ್ಟದ್ದು...’

‘ಓಕೆ, ಹೈಕಮಾಂಡ್ ತಲೇಲಿ ಏನಿದೆ ಅಂತ ನಿಮ್ ಗುರೂಜಿ ಹೇಳ್ತಾರಾ?’ ಮಂಜಮ್ಮ ಪಟ್ಟು ಬಿಡಲಿಲ್ಲ.

‘ಹೇಳ್ತಾರೆ, ಆದ್ರೆ...’

‘ಆದ್ರೆ ಏನು?’

‘ಹೈಕಮಾಂಡ್ ಅಂದ್ರೆ ಯಾರು? ರಾಗಾನೋ ಸೋಗಾನೋ ಪ್ರಿಗಾನೋ... ಯಾರು?’ ಗುಡ್ಡೆ ತಲೆ ಓಡಿಸಿದ.

ಗುಡ್ಡೆಯ ಮಿಲಿಯನ್ ಡಾಲರ್ ಪ್ರಶ್ನೆಗೆ ಎಲ್ಲರೂ ಗಡ್ಡ ಕೆರೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.