ಕೈಕಮಾಂಡ್ ಕುಲದೈವಗಳು ‘ಕೊಟ್ಟ ಮಾತಿನಂತೆ ನೀವು ಸಿಂಹಾಸನ ತ್ಯಾಗ ಮಾಡಬೇಕು ಪಿತಾಮಹರೆ’ ಎಂದು ಆದೇಶಿಸಿದಾಗ ಎದುರಾಡದೇ ಪಿತಾಮಹರು ಕುಸ್ತಿನಾಪುರಕ್ಕೆ ವಾಪಸ್ ಬಂದಿದ್ದರು. ತಾವು ಅಧಿಕಾರ ಬಿಟ್ಟು ಶರಶಯ್ಯೆಯಲ್ಲಿ ಮಲಗುವುದಾಗಿ ಘೋಷಿಸಿದಾಗ ಅವರ ಹಿಂಬಾಲಕರು, ಅಭಿಮಾನಿಗಳಲ್ಲಿ ಕಣ್ಣೀರು, ಮಹಾಮೌನ.

ಕುಸ್ತಿನಾಪುರದ ಕೈ ಸಂತತಿಯ ಸಭೆಯಲ್ಲಿ ಪಿತಾಮಹರು ಕುಲದೈವಗಳು ಮತ್ತು ಸಂಧಾನ ಚತುರರ ಪ್ರೇರಣೆಯಂತೆ ‘ನಾನು ಸಿಂಹಾಸನಕ್ಕೆ ಮುಂದಿನ ಉತ್ತರಾಧಿಕಾರಿಯಾಗಿ ಯುವರಾಜ ಕುಮಾರಶಿವರನ್ನು ಸೂಚಿಸುತ್ತಿದ್ದೇನೆ’ ಅಂತಂದು ಕಿರೀಟವನ್ನು ಕುಮಾರಶಿವರ ಶಿರದ ಮೇಲಿಟ್ಟು ಕೂತರು.

ಕೈಪರಿವಾರ ಸಂತತಿಯೆಲ್ಲ ಕೂಡಲೇ ಯುವರಾಜರ ಕಡೆಗೆ ತಿರುಗಿ ‘ಮೂಲಕಾಂಗೈಧರ ಬಂಡೆಗಂಭೀರ, ಸರಳಗುಣ ಹೃದಯ ಗುಣಭರಿತ ಯುವೋದಯ. ಧರಣಿಪ ನೇತಾ, ಕೀರ್ತಿ ಸಮೇತಾ. ಪರಮಪುರುಷ ಭೂವರ. ಪೊರೆಯೋ ಕನಕಾಧಿಪತೇ’ ಎಂದು ಪ್ರಾರ್ಥಿಸಿದರು. ತಲೆದೂಗಿದ ನವ ಮಹಾರಾಜರು ‘ಕುಸ್ತಿನಾಪುರ ಕಾಳಗದಲ್ಲಿ ದಾಯಾದಿಗಳನ್ನು ಸದೆಬಡಿದ ಮಹಾಪಾಪ ಪರಿಹಾರಕ್ಕಾಗಿ ದೇವಗುರುಗಳ ಸಲಹೆಯಂತೆ ಅಶ್ವಮೇಧ ಯಾಗವನ್ನು ಕೈಗೊಳ್ಳಲಿದ್ದೇನೆ’ ಎಂದಾಗ ಖುಷಿ–ಮುನಿಗಳು ತಮಗೆ ಒದಗಿ ಬರಲಿರುವ ಭಾಗ್ಯವನ್ನು ನೆನೆನೆನೆದು ರೋಮಾಂಚಿತರಾದರು.

ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹರು ತಮ್ಮ ಕಳ್ಳುಬಳ್ಳಿಗಳನ್ನೆಲ್ಲ ಕರೆಕರೆದು ಮಾತನಾಡಿಸಿ ‘ನಿಮಗ್ಯಾವ ಅಧಿಕಾರ ಬೇಕು, ನಿಮಗೆಷ್ಟು ಮೀಸಲಾತಿ ಬೇಕು’ ಎಂದು ಕೇಳತೊಡಗಿದ್ದರು. ಇದನ್ನು ಕಂಡು ಕಣ್ಣೀರಾದ ಹಿರಿಕಿರಿ ಸ್ತೋತ್ರಧಾರರು ‘ಅವರೇ ನಮ್ಮ ನಾಯಕರು. 2028ರ ಅಂತಿಮ ಯುದ್ಧದವರೆಗೂ ಅವರದ್ದೇ ನಾಯಕತ್ವ’ ಎನ್ನುತ್ತಾ ಅಧಿಕಾರ ಪ್ರಾಪ್ತಿಗಾಗಿ ಕಚ್ಚಾಟ ಆರಂಭಿಸಿದರು.

ಕುಸ್ತಿನಾಪುರದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದಾಗ ಮಿಥ್ಯಜ್ಞಾನಿ ತುರೇಮಣೆ ‘ಮಹಾಭಾರತದಲ್ಲೂ ಸಿಂಹಾಸನಕ್ಕಾಗಿ ಯುದ್ಧವಾಯ್ತು. ಈಗಲೂ ಆಗಿದೆ. ಆ ಪಿತಾಮಹರಿಗೆ ಚುಚ್ಚಿದ್ದು ಅರ್ಜುನನ ಬಾಣಗಳು. ಈವತ್ತಿನ ಕುಲದೈವಗಳ ಬಾಣಗಳನ್ನು ಬಿಟ್ಟ ಪೋಲ್ ಸ್ಟ್ರಾಟಜಿಸ್ಟ್ ಯಾರು ಅಂತ ತಿಳಿಯಿರಿ’ ಎಂದು ಕುರುಡು ಮತದಾರರನ್ನು ಎಚ್ಚರಿಸುವ ಲೈವ್ ಕಟುವಾಸ್ತವದ ದರ್ಶನ ಮಾಡಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.