‘ರಾಣಿಬೆನ್ನೂರಲ್ಲಿ ರತಿ ಮನ್ಮಥರ ನಗಿಸಕ್ಕೆ 13 ಲಕ್ಷ ರೂಪಾಯಿ ಬಹುಮಾನ ಮಡಗಿದ್ರಂತೆ. ಆದ್ರೂ ಯಾರ್ ಕೈಲೂ ಆಗ್ಲಿಲ್ವಂತೆ ಕಣ್ರಲಾ’ ಎಂದ ಗುದ್ಲಿಂಗ ಹರಟೆಕಟ್ಟೇಲಿ!

‘ವೂ ಕಣ್ಲಾ, ಪೇಪರ್ರಲ್ಲಿ ಓದ್ದೆ. ಸಿಂಗಲ್ ಮೀನಿಂಗ್, ಡಬ್ಬಲ್ ಮೀನಿಂಗ್ ಯಾವ್ದಕ್ಕೂ ಜಪ್ಪಯ್ಯ ಅಂದಿಲ್ವಂತೆ! ಪರಪರ ತಲೆ ಕೆರ್ಕಂಡು, ಅಂಗಿ ಹರ್ಕಂಡು ಮಂಗನ್ ತರ ತಿಪ್ಪರ್ಲಾಗ ಆಕುದ್ರೂ ಅವರು ಮಾತ್ರ ಕಿಸಕ್ ಅನ್ನಲ್ವಂತೆ’ ಎಂದ ಮಾಲಿಂಗ!

‘ಟ್ರಂಪ್ ಪ್ರಪಂಚಕ್ಕೇ ಬೆಂಕಿ ಹಾಕಿ ಶಾಂತಿ ನೊಬೆಲ್ ತಗೋಬೇಕು ಅಂತಾವ್ನಲ್ಲ, ಅದ್ನ ಯೋಳಿದ್ರೆ ನಗ್ತಿದ್ರೇನೋ?’

‘ಅಥವಾ ನಮ್ ಮಲ್ಲೇಶಣ್ಣಂದು ಒಂದು ಚುರುಮುರಿ ಒಗೆದಿದ್ರೆ ಬಿದ್ ಬಿದ್ ನಗ್ತಿದ್ರೇನೋ?’

‘ಇಂಗೇ ಬಾಳಾ ಜನ ಅವ್ರೆ... ಯಥಾ ರಾಜಾ, ತಥಾ ಪ್ರಜಾ!’

‘ಅಂಗಂದ್ರೇನ್ಲಾ?’

‘ಕೆಲವ್ರು ರಾಜಕೀಯದೋರು ನಗಕೇ ಇಲ್ಲ ಕಣ್ಲಾ! ನೋವು ನೀಗ್ಸಾದು ಇರಲಿ, ಕನಿಷ್ಠ ನಗುಸ್ಬಾರ್ದ? ಬೇಸಿದ ಗೆಣಸಿನ್ ತರ ಮುಖ ಕಿವುಚ್ಕಂಡಿರ್ತಾರೆ, ನಾನ್ ಲಾಪಿಂಗ್ ಬುದ್ಧೂಸ್’.

‘ಜಗಣ್ಣ ಜೋಶಿ, ಪಟೇಲಣ್ಣ ಬುಟ್ರೆ ಮನಮೋಹನ್ನು, ಕಾರೆಟ್ಟು, ಮಮತಾ, ರಾಜನಾಥಸಿಂಗ್, ನಮ್ ದೊಡ್ ಗೌಡ್ರು, ಧರ್ಮಣ್ಣ, ಸಿದ್ದಣ್ಣ... ಯಾರಾದ್ರೂ ಒಬ್ರು ಒಂದೆರೆಡು ಜೋಕ್ ಯೋಳವ್ರಾ? ಲಾಫಿಂಗ್ ಬುದ್ಧ ಫೇಮಸ್ಸು. ಆದ್ರೆ ಬುದ್ಧದೇವ ಭಟ್ಟಾಚಾರ್ಯ ಅಂತ ಹೆಸರಿಟ್ಕೊಂಡು ನಗುಸ್ಲೇ ಇಲ್ಲ’ ಎಂದ ಕಲ್ಲೇಶಿ.

‘ರಾಜಾವುಲಿ ಒಂದ್ಸಾರಿ ಈ ರತಿ ಮನ್ಮಥರನ್ನ ವಿಧಾನಸೌಧಕ್ಕೆ ಕರ್ಕೊಂಡ್ ಓಗಿತ್ತಂತೆ’.

‘ಮುಗೀತು ಬುಡು. ಸದನದಲ್ಲಿ ತಲೆ ತಲಾಂತರಗಳಿಂದ ನಗ್ದೇ ಮೂತೀನ ಹಲಸಿನಕಾಯ್ ತರ ಹಾಕ್ಕಂಡು ಕುಂತ್ಕಳೋ ಮುತ್ಸದ್ದಿಗಳು ಶಾನೆ ಅವ್ರೆ! ರಂಗನ್ ಮುಂದೆ ಸಿಂಗನಾ? ಅವರನ್ನೆಲ್ಲಾ ನೋಡ್ಕಂಡು ಬಂದ್ಮೇಲೆ ಇವರು ಜನ್ಮೇಪಿ ನಗಕಿಲ್ಲ’ ಎಂದು ರೂಲಿಂಗ್ ಕೊಟ್ಟ ಪರ್ಮೇಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.