‘ಹಲೋ... ಏನಲೆ ಇದೂ, ಜಡ್ಜ್‌ಮೆಂಟ್ ಹಿಂಗಾಗೋಯ್ತು?’

‘ಅದೇ ನಂಗೂ ಆಶ್ಚರ್ಯ, ಮುಂದೆ ಏನಾಕ್ಕತೋ ಏನೋ’.

‘ರಾಜೀನಾಮೆ ಕೊಡ್ತಾರೆ ಅಂತೀಯ?’

‘ಏನೋಪ್ಪ, ಎಫ್ಐಆರ್ ಬೇರೆ ಹಾಕ್ತಾರಂತೆ. ಹೈಕಮಾಂಡ್ ಏನಂತತೋ ಗೊತ್ತಿಲ್ಲ’.

‘ಅಲ್ಲ, ಸಾಹೇಬ್ರು ಬಾಳ ಟೆನ್ಷನ್‌ನಲ್ಲಿದ್ರು. ಟಿ.ವಿ.ಯೋರು ಬೇರೆ ಅವ್ರ ಮುಖಾನೇ ಜೂಮ್ ಮಾಡಿ ತೋರಿಸ್ತಾ ಇದ್ರು’.

‘ಮತ್ತೆ ಟೆನ್ಷನ್ ಆಗದೇ ಇರುತ್ತಾ? ಕುರ್ಚಿ ವಿಷ್ಯ ಅಂದ್ರೆ ಸುಮ್ನೇನಾ?’

‘ಅಲ್ಲ, ಬಾಳ ಜನ ಕುರ್ಚಿ ಮೇಲೆ ಕಣ್ಣಿಟ್ಟಿದ್ರು. ಎಲ್ಲೆಲ್ಲೋ ಹೋಗಿ ಟವೆಲ್ ಹಾಕಿ ಬಂದಿದ್ರು. ಪ್ರಮಾಣವಚನಕ್ಕೆ ಬಟ್ಟೆ ಪಟ್ಟೆ ಹೊಲಿಸ್ಕಂಡಿದ್ರು. ಅವ್ರೆಲ್ಲ ಸುಮ್ನಿರ್ತಾರಾ?’

‘ಟಿ.ವಿಯೋರ ಮುಂದೆ ‘ಯಾವ ಕಾರಣಕ್ಕೂ ರಾಜೀನಾಮೆ ಕೊಡ್ಸಲ್ಲ’ ಅಂತಾರೆ, ಒಳಗೊಳಗೆ ನಾನೇ ಸೀನಿಯರ್ ಅಂತ ಕುರ್ಚಿ ಮೇಲೆ ಟವೆಲ್ ಹಾಕಿರ್ತಾರೆ’.

‘ಒಬ್ರಂತೂ ‘ರಾಜೀನಾಮೆ ಮಾತೇ ಇಲ್ಲ, ಹೋರಾಡ್ತೀವಿ, ನಮ್ಮನ್ನು ಯಾರೂ
ಅಲ್ಲಾಡ್ಸಕ್ಕಾಗಲ್ಲ’ ಅಂತಿದ್ರಪ್ಪ’.

‘ಅವರೇ ಮೊದ್ಲು ಟವೆಲ್ ಹಾಕಿರೋದು’.

‘ಹೌದಾ? ಆಮೇಲೆ ವಿರೋಧ ಪಕ್ಷದೋರು ಬಾಳ ಖುಷೀಲಿದಾರಂತೆ? ಆಪರೇಷನ್ ಮಾಡಾಕೆ ಕತ್ತಿ ಪತ್ತಿ ಮಸೀತಿರಬೋದು’.

‘ಏನೋಪ್ಪ, ಇದು ಕೇಜ್ರಿವಾಲ್- 2 ಕತಿ ಆಗುತ್ತಾ ಅಂತ’.

‘ಅಲ್ಲ, ಹಂಗೇನರೆ ಅಕಸ್ಮಾತ್ ರಾಜೀನಾಮೆ ಕೊಟ್ರೆ ನಿನ್ ಬೋರ್ಡ್ ಅಧ್ಯಕ್ಷ ಸ್ಥಾನ ಉಳೀತತಾ?’

‘ನನ್ ಬೋರ್ಡ್‌ದು ಹಂಗಿರ್‍ಲಿ, ಎಲ್ಲ ಗಬ್ಬೆದ್ದು ಹೋಗ್ತತಿ’.

‘ಆದ್ರೂ ನೀನು ಪಾಕಡ ಬಿಡಲೆ, ಅಂದರಿಕಿ ಮಂಚಿವಾಳ್ಳು. ಯಾರೇ ಕುರ್ಚಿ ಹಿಡಿದ್ರೂ ಅವರ ಮುಂದೆ ಬಕೆಟ್ ಹಿಡ್ಕಂಡ್ ನಿಂತಿರ್ತೀಯ’.

‘ಇದು ರಾಜಕೀಯ ಕಣಲೆ, ಮತ್ತೆ ಬದುಕಬೇಕಲ್ಲ. ಅದಿರ್‍ಲಿ, ನನ್ ಮಾತು ರೆಕಾರ್ಡ್ ಮಾಡ್ಕಂತಿದೀಯೋ ಹೆಂಗೆ?’

‘ಏಯ್, ದೇವ್ರಾಣಿ ಇಲ್ಲಪ್ಪ’.

‘ಈಗಿನ ಕಾಲದಾಗೆ ಯಾರನ್ನೂ ನಂಬಕ್ಕಾಗಲ್ಲ, ಅದ್ಕೆ ಕೇಳಿದೆ. ಸರಿ, ಇಡು ಫೋನು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.