‘ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‌ಗೆ ಪಿ.ಟಿ.ಉಷಾ ಅಧ್ಯಕ್ಷರು ಅನ್ನೋದು ನೆನಪಿರಲಿ...’ ಹೆಣ್ಮಕ್ಕಳ ಪರ ಅತ್ತೆ ನಿಂತರು.
‘ನಾ ಹೇಳಿದ್ದು ಅದಲ್ಲ, ಐಐಎಂನ ಸಾಮಾನ್ಯ ದಾಖಲಾತಿ ಪರೀಕ್ಷೇಲಿ ಈ ಬಾರಿ ಪುರುಷ ಅಭ್ಯರ್ಥಿಗಳದ್ದೇ ಮೇಲುಗೈ, ಬಾಸ್ ಭಾವಮೈದುನನ ಯಶಸ್ಸು, ಅದರ ಜೊತೆ ವರ್ಷಾಂತ್ಯದ ಆಚರಣೆ ಸಲುವಾಗಿ ಆಫೀಸಲ್ಲಿ ಗಿಫ್ಟ್ಸ್ ಕೊಟ್ರು’ ಕಂಠಿ ಕ್ಲಾರಿಫೈ ಮಾಡಿದ.
‘ಈ ವರ್ಷ ಆಸ್ಕರ್‌ಗೆ ನಾಲ್ಕು ಚಿತ್ರಗಳು ಅಂತಿಮ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿವೆ, ವರ್ಷಾಂತ್ಯ ಕ್ಕೊಂದು ಸಂತೋಷದ ವಿಷಯ ಅಲ್ವೇ?’ ಅತ್ತೆ ದಿಢೀರ್ ಅಂತ ಸಿನಿಮಾ ಸುದ್ದಿ ಕೊಟ್ಟರು.
‘ಒಟಿಪಿ ಬಂದಿರ್ಬೇಕು ನೋಡಿ’ ಎನ್ನುತ್ತ ನನ್ನವಳು ಬಿಸಿ ಬಿಸಿ ಕಾಫಿ ತಂದಳು.