‘ಏನ್ ಸಾಹೇಬ್ರೆ... ಗೋವಾ ಟೂರ್ ಪ್ಲ್ಯಾನ್ ಮಾಡ್ತಿದೀರಿ. ಆದರೆ ನನ್ ಹತ್ರ ಆಫೀಸ್ ಮೀಟಿಂಗ್ ಅಂತ ಹೇಳಿದ್ರಿ’ ಡಿಟೆಕ್ಟಿವ್ ಥರ ಕೇಳಿದಳು ಹೆಂಡತಿ.

‘ನನ್ನ ಫ್ರೆಂಡ್ಸ್ ಜೊತೆ ಮಾತ್ರ ಡಿಸ್ಕಸ್ ಮಾಡಿದ್ದು ನಿನಗೆ ಹೇಗ್ ಗೊತ್ತಾಯ್ತಮ್ಮ, ನನ್ ಫೋನ್ ಕದ್ದಾಲಿಸ್ತಿದ್ದೀಯೋ ಹೇಗೆ?’ ಅಚ್ಚರಿಯಿಂದ ಕೇಳಿದೆ.

‘ಕದ್ದು ಕೇಳೋದೇ ಬೇಡ, ಅವರವರ ಮುಖಭಾವ ನೋಡಿ ಹೇಳ್ ಬಿಡ್ತೀನಿ, ಯಾರ ಮನಸಲ್ಲಿ ಏನಿದೆ ಅಂತ’.

‘ಓಹ್, ಅಷ್ಟೊಂದ್ ಪವರ್ ಇದೆಯಾ ನಿನಗೆ? ಈಗ ನಮ್ಮ ಸಿಎಂ ಸಾಹೇಬ್ರು ಮೊದಲ ಬಾರಿ ಎಮ್ಮೆಲ್ಲೆ ಆದವರಿಗೆ ಮಂತ್ರಿ ಸ್ಥಾನ ಇಲ್ಲ ಅಂತ ಹೇಳಿದ್ರು, ಅವರ ಮನಸಲ್ಲಿ ಏನಿರಬಹುದು?’

‘ಮುಂದೆ ಇದೇ ನಿಯಮ ಅಪ್ಲೈ ಮಾಡಿ, ಮೊದಲ ಬಾರಿ ಡಿಸಿಎಂ ಆದವರಿಗೆ ಸಿಎಂ ಆಗೋ ಅವಕಾಶ ಇಲ್ಲ ಅಂತಾನೂ ಹೇಳಬಹುದು’ ಎಂದಳು.

‘ಅದ್ ಸರಿ, ನಮ್ಮ ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಎಮ್ಮೆಲ್ಲೆ ಮನದಲ್ಲಿ ಈಗ ಏನಿರಬಹುದು?’ ಎಂದೆ.

‘ಸಿಂಪಲ್. ಸಿಎಂ ಹೇಳಿದ ರೂಲ್ಸೇ ನಮ್ಮ ಪಾರ್ಟಿಗೂ ಅನ್ವಯಿಸಬೇಕಿತ್ತು. ಮೊದಲ ಬಾರಿ ಎಮ್ಮೆಲ್ಲೆ ಆದವರಿಗೆ ರಾಜ್ಯ ಅಧ್ಯಕ್ಷ ಸ್ಥಾನ ಇಲ್ಲ ಅಂತ ಹೇಳಿದ್ರೆ ನಾನಾದರೂ ನಮ್ಮ ಪಕ್ಷದ ಸ್ಟೇಟ್ ಪ್ರೆಸಿಡೆಂಟ್ ಆಗಿರ್ತಿದ್ದೆ ಅಂತ ಯೋಚಿಸ್ತಿದ್ದಾರೆ’ ಎಂದಳು ನಗುತ್ತಾ.

‘ಸ್ಟೇಟ್ ಬೇಡ. ಇಂಟರ್ ನ್ಯಾಷನಲ್ ಲೆವೆಲ್ಗೆ ಹೋಗೋಣ. ಟ್ರಂಪ್ ಮನದಲ್ಲಿ ಈಗ ಏನಿರಬಹುದು?’

‘ನಾನಿಷ್ಟೆಲ್ಲ ಮಾಡ್ತಿದ್ರು, ಸಾಕು ಸುಮ್ನಿರಯ್ಯ, ಜಗದ ಶಾಂತಿ ಹಾಳು ಮಾಡಬೇಡ, ನಿನಗೆ ನೊಬೆಲ್ ಪೀಸ್ ಪ್ರಶಸ್ತಿ ಕೊಡ್ತೀವಿ ಅಂತ ಈವರೆಗೂ ಯಾರೂ ಹೇಳ್ತಿಲ್ವಲ್ಲ ಅಂತ ಚಡಪಡಿಸ್ತಿರಬಹುದು’.

‘ವಾವ್, ಏನಮ್ಮ ನಿನ್ನ ಶಕ್ತಿ... ಎಲ್ಲರ ಮನದಲ್ಲಿರೋ ದನ್ನ ಹಂಗಂಗೇ ಹೇಳ್ತೀಯ’ ಎಂದು ಹೆಂಡತಿಯ ಬೆನ್ನು ತಟ್ಟುತ್ತಾ, ಗೋವಾ ಬದಲು ಥಾಯ್ಲೆಂಡ್ ಫ್ಲೈಟ್ ಏರಲು ಹೊರಟು ನಿಂತೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.