‘ಅಬ್ಬಬ್ಬ... ಇಡೀ ಭೂಮಂಡಲದಲ್ಲಿ ಮನುಷ್ಯನೇ ಅತ್ಯಂತ ನೀಚ ಪ್ರಾಣಿ! ಕಾಡೊಳಗಿರೋ ಪ್ರಾಣಿಗಳಿಗೆ ಕ್ರೂರ ಪ್ರಾಣಿ
ಅಂತ ಬಿರುದಾವಳಿ ಕೊಡತೀರಲ್ಲ... ಈಗ ನೀವು ಮಾಡದೇನು?’ ಎನ್ನುತ್ತ ಬೆಕ್ಕಣ್ಣ ಮೂತಿ ಮುರಿಯಿತು.

‘ಅಂಗೈ ಹುಣ್ಣಿಗೆ ಕನ್ನಡಿ ಯಾಕಲೇ? ಈಗ ಹೊಸದಾಗಿ ನೀ ಹೇಳದೇನು?’ ಎಂದೆ.

‘ಈ ಟ್ರಂಪಣ್ಣ–ನೆತನ್ಯಾಹು ಯುದ್ಧೋನ್ಮಾದ ಮುಗಿಯಂಗೇ ಕಾಣಂಗಿಲ್ಲ. ಅತ್ತಾಗೆ ಇರಾನೂ ತಲೆಕೆಟ್ಟಂಗೆ ಆಡತೈತಿ! ಹೊರ್ಮುಜ್ ಜಲಸಂಧಿ ತೆಗೆದೀವಿ ಅಂದರು. ಸ್ವಲ್ಪ ಹೊತ್ತಿಗೇ ಜಲಸಂಧಿ ಮುಚ್ಚಿ, ನಮ್ ಹಡಗುಗಳ ಮೇಲೆ ಗುಂಡು ಹಾರಸ್ಯಾರೆ...’ ಎಂದು ಬೆಕ್ಕಣ್ಣ ಗುರುಗುಟ್ಟಿತು.

‘ನೋಡಲೇ... ಈ ಯುದ್ಧದ ಮುಂಚೂಣಿಯಲ್ಲಿ ಇರೋರು, ವಿನಾಶದ ನಿರ್ಧಾರ ಮಾಡೋರು ಯಾರು? ಎಲ್ಲಾರೂ ಗಂಡಸರು... ಹಿಂಗಾಗಿ ಮನುಷ್ಯಪ್ರಾಣಿಗಳಲ್ಲಿ ಗಂಡುಪ್ರಾಣಿಯೇ ಕ್ರೂರ ಅಂತ ಹೇಳಿಕೆ ಬದಲಿಸಿಕೋ’ ಎಂದೆ.

‘ಅದೂ ಖರೇ. ಯುದ್ಧ ನಿರ್ಧಾರ ಮಾಡಿದ ಪುರುಷಪುಂಗವರಿಗೆ ಗನ್ ಕೊಟ್ಟು, ನೀವೇ ಎದುರಾಬದುರಾ ನಿಂತು ಈಗ ಯುದ್ಧ ಮಾಡ್ರಪ್ಪ ಅನ್ನಬಕು.’

‘ಅದಕ್ಕೇ ಮಹಿಳೆಯರು ಹೆಚ್ಚೆಚ್ಚು ರಾಜಕೀಯಕ್ಕೆ ಬರಬಕು’ ಎಂದೆ.

‘ನಮ್ ಮೋದಿಮಾಮರು ಮಹಿಳಾ ಮಸೂದೆ ಜಾರಿಗೆ ತರತೀನಿ ಅಂದ್ರೆ ಎಲ್ಲಾ ವಿಪಕ್ಷಗಳು ಸೇರಿ ಮಸೂದೆಯನ್ನು ಸೋಲಿಸಿದ್ರು. ಮತ್ತ ನೀವು ಎಲ್ಲಿ ಆಳತೀರಿ? ಅಡುಗೆ ಮನ್ಯಾಗೆ ಅಳತೀರಿ ಅಷ್ಟೆ!’ ಬೆಕ್ಕಣ್ಣ ನಕ್ಕಿತು.

‘ಮೋದಿಮಾಮಾರು ಎಂಪಿಗಳ ಸಂಖ್ಯೆಯನ್ನು 850ಕ್ಕೆ ಏರಿಸಿ, ಅದ್ರಾಗೆ ಶೇ 33ರಷ್ಟು ಅಂದ್ರಲ್ಲ... ಸಂಖ್ಯೆ ಏರಿಸಾದು ಬ್ಯಾಡ. ಈಗಿರೋ 543ರಾಗೆ ಹೆಣ್ಮಕ್ಕಳಿಗೆ ಪಾಲು ಕೊಡಂದ್ರು ವಿಪಕ್ಷಗಳು. ತಪ್ಪೇನು?’ ನಾನು ವಾದಿಸಿದೆ.

‘ನನ್ನ ನಾರೀಶಕ್ತಿ ಮಸೂದೆಯನ್ನು ವಿಪಕ್ಷಗಳು ಸೋಲಿಸ್ಯಾರಂತ ಮೋದಿಮಾಮಾ ನಿನ್ನೆ ಭಾವನಾತ್ಮಕ ಭಾಷಣ ಕುಟ್ಟಿದಾರೆ. ನಾರೀಶಕ್ತಿ ಮಸೂದೆ ಬಿದ್ದೋದರೆ ಏನಾತು... ನಾರೀಮತಗಳು ಮೋದಿ ಮಾಮಾನ ಬುಟ್ಟಿಗೇ ಬೀಳತಾವು’ ಎಂದು ಬೆಕ್ಕಣ್ಣ ಕಣಿ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.