ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವೈಲೆಂಟ್ ಪ್ರೋಗ್ರಾಂ!

Last Updated 6 ಜೂನ್ 2022, 19:30 IST
ಅಕ್ಷರ ಗಾತ್ರ

‘ಕಾಶ್ಮೀರದೇಲಿ ಪಂಡಿತರನ್ನ ಬಲವಂತವಾಗಿ ಕೂಡಾಕ್ಯವ್ರಂತೆ. ಪಂಡಿತರು ‘ನಾವು ಊರು ಬುಟ್ಟು ಎಲ್ಲಿಗಾರ ಹೊಂಟೋಯ್ತಿವಿ ಬುಟ್ಬುಡಿ ನಿಮ್ಮ ದಮ್ಮಯ್ಯ’ ಅಂತ ಲಬೊಲಬೋ ಮಾಡ್ತಾವ್ರೆ’ ಅಂತಂದೆ.

‘ಅದು ವೈಲೆಂಟ್ ಫೈಲ್ಸ್ ಕನೋ!’ ಅಂತು ಯಂಟಪ್ಪಣ್ಣ.

‘ಕರ್ನಾಟಕದೇಲಿ ಸೈಲೆಂಟ್ ವೈಲೆನ್ಸ್ ಪ್ರಯೋಗ ನಡಿತಾ ಅದೆ ಕಯ್ಯಾ. ಸರ್ಕಾರ ಹೇಳ್ತದೆ ‘ಪೂಜಾ ಸ್ಥಳದೇಲಿ ಮೈಕು ಹಾಕಬ್ಯಾಡಿ ಸೈಲೆಂಟಾಗಿರಿ, ಚನ್ನಾಗಿರ ಪಠ್ಯಪುಸ್ತಕ ಕೊಟ್ಟುದವಿ ಸೈಲೆಂಟಾಗಿ ಒಪ್ಪಿಕ್ಯಳಿ, ಪೆಟ್ರೋಲ್- ಡೀಜೆಲ್ ರೇಟು ಜಾಸ್ತಿ ಮಾಡ್ತೀವಿ ತಗಂಡ್ರೆ ತಗಳಿ ಬುಟ್ರೆ ಬುಡಿ, ಗ್ಯಾಸ್ ಸಬ್ಸಿಡಿ ಇನ್ನು ಕೊಡಂಗಿಲ್ಲ ಸೈಲೆಂಟಾಗಿರಿ, ರಾಜ್ಯಸಭೆಗೆ ಕಾಸಿರೋರು ಹೋಯ್ತರೆ ಸೈಲೆಂಟಾಗಿರಿ. ನಾಡಗೀತೆಯ ನಮಗೆ ಬೇಕಾದಂಗೆ ಬದ್ಲಾಸಿ ಕೊಡ್ತೀವಿ ಸೈಲೆಂಟಾಗಿ ಹಾಡಿಕ್ಯಳಿ! ಕೆಲಸಾಗಬಕಾ ಸೈಲೆಂಟಾಗಿ ಕಾಸು ಕೊಡಿ! ಲೊಟ್ಟೆಲೊಸಕು ಅಂತ ನಿಮ್ಮ ಬ್ಯಾಡ್ ಬಾಯ್ ಏನಾದ್ರೂ ತಗುದ್ರೋ ನಾವು ವೈಲೆಂಟಾಯ್ತಿವಿ’ ಅಂತ ಜನಕ್ಕೆ-ಸಾಹಿತಿ ಗಳಿಗೆ ಖಟ್‍ನಿಟ್ ಮಾಡ್ಯವುರಲ್ಲೋ!’ ಅಂತ ಉಸುರೂದರು.

‘ಕಾಂಗ್ರೆಸ್ಸೂ ಕಮ್ಮಿ ಇಲ್ಲ ಸಾ ‘ರಾಜ್ಯದೇಲಿ ಮುಂದೆ ನಮ್ಮದೇ ಸರ್ಕಾರ, ಸೈಲೆಂಟಾಗಿರಿ’ ಅಂದ್ರೆ, ಕುಮಾರಣ್ಣ ‘ನಾವು ಒಂದು ಎರಡು ಮೂರು ಸೀಟು ಗೆದ್ದು ಸರ್ಕಾರ ಮಾಡ್ತೀವಿ, ಸೈಲೆಂಟಾಗಿರಿ’ ಅಂದದೆ’ ಅಂತ ಮಾಹಿತಿ ಕೊಟ್ಟೆ.

‘ಮೋದಿ ಮಾವಾರು ‘ಸೈಲೆನ್ಸ್, ಸೈಲೆನ್ಸ್, ಸೈಲೆನ್ಸ್! ಐ ಡೋಂಟ್ ಲೈಕ್ ವಯಲೆನ್ಸ್. ಬಟ್ ವಯಲೆಂಟ್ಸ್ ಲೈಕ್ಸ್ ಮಿ’ ಅಂದುಲ್ಲವಂತೆ ಸಾ! ನಮ್ಮ ಕತೆಯೂ ಪಂಡಿತರ ಥರವೇ ಆಗ್ಯದೆ. ವೈಲೆನ್ಸ್ ಯಂಗೆ ಕಮ್ಮಿ ಮಾಡದು?’ ಅಂದೆ.

‘ವೈಲೆಂಟಾದ್ರೇ ಸೈಲೆಂಟ್ ರಾಜಕೀಯ! ಸೈಲೆನ್ಸ್ ಬುಟ್ಟೋರಿಗೆ ‘ಅಕ್ಸೆಪ್ಟ್ ಟೂಲ್ ಕಿಟ್ ಕೈ ಕಟ್- ಬಾಯ್ ಮುಚ್’ ಅಂತ ಸವೆದು ತುಂಡಾಗಿರೋ ಮೋಟು ಗುಳವ ಕಾಯಿಸಿ ಬಾಯಿಗೆ ಬರೆ ಹಾಕೋ ವೈಲೆಂಟ್ ಪ್ರೋಗ್ರಾಂ ತಯಾರಾಗ್ಯದಂತೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT