‘ಗ್ಯಾಸ್ ಸಿಲಿಂಡರ್ ಖಾಲಿ ಆಗಿದೆ. ಹೋಟೆಲ್ನಿಂದಲೂ ಏನೂ ತಂದು ಕೊಡ್ತಿಲ್ಲ ನೀವು’ ಎಂದು ಹೆಂಡತಿಯ ಸುಪ್ರಭಾತ ಶುರುವಾಯಿತು.

‘ಯುದ್ಧ ನಡೀತಿರೋದ್ರಿಂದ ಇಡೀ ದೇಶದಲ್ಲೇ ಯಾರಿಗೂ ಗ್ಯಾಸ್ ಸಿಗ್ತಿಲ್ಲಮ್ಮ’ ಸಿಟ್ಟಿನಲ್ಲೇ ಹೇಳಿದೆ.

‘ಆಯ್ತು, ಈಗ ಏನ್ ಅಡುಗೆ ಮಾಡಿ ಹಾಕ್ಲಿ ಹೇಳಿ...’

‘ಬೇಯಿಸದೇ ಇರೋ ಅಡುಗೆ ಏನಾದರೂ ಮಾಡಿಕೊಡು. ಇಂತಹ ಸಂದರ್ಭದಲ್ಲಿ ದೇಶಕ್ಕಾಗಿ ಇಷ್ಟು ಮಾಡದಿದ್ರೆ ಹೇಗೆ’ ಮಾತಲ್ಲಿ ವ್ಯಂಗ್ಯ ಇಣುಕಿತು.

‘ನಿಂಬೆಹಣ್ಣು, ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ನೀರಿನಲ್ಲಿ ತೊಳೆದುಕೊಡ್ತೀನಿ, ಹಂಗಂಗೆ ನುಂಗಿ’ ಎಂದು ಮುಖಕ್ಕೆ ತಿವಿದಳು.

‘ಸರಿ ಬಿಡು, ನಮ್ ಆಫೀಸ್ ಕ್ಯಾಂಟೀನ್ನಲ್ಲೇ ಊಟ ಮಾಡ್ತೀನಿ’ ಎಂದು ಹೊರಬಂದು ನೋಡಿದರೆ, ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿತ್ತು. ‘ಅಯ್ಯೋ, ಈ ಯುದ್ಧದಿಂದಾಗಿ ಪೆಟ್ರೋಲ್ ಕೂಡ ಸಿಗ್ತಿಲ್ಲ. ಆಫೀಸ್ಗೆ ಹೇಗೆ ಹೋಗ್ಲಿ’ ಎಂದೆ.

‘ನಡೆದುಕೊಂಡೇ ಹೋಗಿ. ದೇಶಕ್ಕಾಗಿ ಅಷ್ಟೂ ಮಾಡೋಕಾಗಲ್ವ’ ತಿರುಗೇಟು ಕೊಟ್ಟಳು.

‘ದೇಶದಲ್ಲಿ ಏನಾದರಾಗಲಿ, ನಮ್ ರಾಜ್ಯದಲ್ಲಿ ಯಾರಿಗೂ ತೊಂದರೆಯಾಗದಂಗೆ ನಮ್ಮಣ್ಣ ನೋಡ್ಕೊತಾರೆ’ ಎಂದೆ.

‘ಯಾರಪ್ಪ ಅದು, ನಿಮ್ಮಣ್ಣ?’

‘ನಮ್ ಶಿವಣ್ಣ. ಈಗ ನಮ್ ಪಕ್ಷದ ಅಧ್ಯಕ್ಷ ಆಗಿ ಆರು ವರ್ಷ ಮುಗಿದಿದೆ. ಅವರ ಕೆಪಾಸಿಟಿಗೆ ಸಿಗಬೇಕಾಗಿರೋ ಸ್ಥಾನ ಸಿಕ್ಕರೆ ಮುಂದೆ ಕಥೇನೆ ಬೇರೆ ಇರುತ್ತೆ’ ಎಂದೆ.

ಮರು ವಾರ. ಹೆಂಡತಿ ಫೋನ್ ಮಾಡಿದಳು. ‘ರೀ, ಮನೆಗೆ ಎರಡೆರಡು ಗ್ಯಾಸ್ ಸಿಲಿಂಡರ್ ತಂದು ಕೊಟ್ರು ರೀ. ಪೆಟ್ರೋಲ್ ಬಂಕ್ಗಳಲ್ಲಿಯೂ ಆಯಿಲ್ ತುಂಬಿರೋ ಲಾರಿಗಳು ಬಂದು ನಿಂತಿವೆ. ಏನ್ರೀ ಮ್ಯಾಜಿಕ್ ಇದು?’ ಖುಷಿಯಿಂದ ಕೇಳಿದಳು.

‘ಎಲ್ಲ ನಮ್ಮಣ್ಣ ಮಾಡಿಸಿರೋದು. ಡೈರೆಕ್ಟ್ ಬೆಂಗಳೂರಿಗೆ ಕತಾರ್ನಿಂದ ಗ್ಯಾಸ್ ಪೈಪ್ಲೈನ್, ಹೊರ್ಮುಜ್ ಜಲಸಂಧಿಯಿಂದ ತೈಲ ಪೈಪ್ಲೈನ್ ಕನೆಕ್ಷನ್ ಕೊಡಿಸಿದ್ದಾರೆ’.

‘ವಾವ್, ಈ ದಿಢೀರ್ ಬೆಳವಣಿಗೆಗೆ ಏನು ಕಾರಣ..?’

‘ಏನಿಲ್ಲ, ನಿಮ್ಮನ್ನ ಸಿಎಂ ಮಾಡಬೇಕಂದ್ರೆ ನಿಮ್ ರಾಜ್ಯಕ್ಕೆ ಪೆಟ್ರೋಲು, ಗ್ಯಾಸು ಸಿಗೋ ಹಂಗೆ ಮಾಡಿ ಅಂತ ಹೈಕಮಾಂಡ್ನವರು ಹೇಳಿದ್ರಂತೆ!’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.