‘ರೀ... ಇಲ್ನೋಡ್ರೀ ಈ ಸುದ್ದಿ, ಎಲೆಕ್ಷನ್ ಕಮಿಷನ್ ಲೆಟರ್ನಲ್ಲಿ ಬಿಜೆಪಿ ಸೀಲ್ ಹಾಕಿದ್ರಂತೆ’ ಪೇಪರ್ ಹಿಡಿದು ಬಂದಳು ಹೆಂಡತಿ.

‘ಸತ್ಯವನ್ನು ಹೆಚ್ಚು ದಿನ ಮುಚ್ಚಿಡೋಕೆ ಆಗಲ್ಲ ಬಿಡು’ ಎಂದೆ ನಗುತ್ತಾ.

‘ಯಾವ ಸತ್ಯ ರೀ, ಏನಕ್ಕೆ ಬಿಜೆಪಿ ಸೀಲ್ ಹಾಕಿದ್ರಂತೆ?’

‘ಏನಿಲ್ಲ, ಅದು ಕ್ಲರಿಕಲ್ ಎರರ್ ಅಂತೆ’.

‘ಓಹ್, ಆ ಎರರ್ ಮಾಡಿರೋರ್ಯಾರೋ ತುಂಬಾ ಪ್ರಭಾವಿ ಕ್ಲರ್ಕೇ ಆಗಿರಬೇಕು’ ಎಂದಳು ಎಲ್ಲವೂ ಹೊಳೆದಂತೆ.

‘ಅದು ಹೋಗ್ಲಿ ಬಿಡು. ಗ್ಯಾಸ್ ಸಿಲಿಂಡರ್ ಬಂತಾ, ಇನ್ನೂ ಇಲ್ವಾ?’

‘ಬಂದಿಲ್ಲ ರೀ... ಗ್ಯಾಸ್ ಸ್ಟಾಕ್ ಇಲ್ಲ ಅಂತಾರೆ. ಯಾವುದು ಸತ್ಯವೋ, ಯಾವುದು ಸುಳ್ಳೋ ಒಂದೂ ಗೊತ್ತಾಗ್ತಿಲ್ಲ’.

‘ಅದರಲ್ಲೂ ಒಂದು ಟ್ವಿಸ್ಟ್ ಇದೆ. ಕಾಂಗ್ರೆಸ್ನವರ ಪ್ರಕಾರ ಗ್ಯಾಸ್ ಸಿಲಿಂಡರ್ ಸಿಗ್ತಿಲ್ಲ, ಬಿಜೆಪಿಯವರ ಪ್ರಕಾರ ಸಿಗ್ತಿದೆ’.

‘ಅಲ್ಲ, ನಾವು ವಿಶ್ವಗುರುವಾಗಿ ಯಃಕಶ್ಚಿತ್ ಒಂದು ಗ್ಯಾಸ್ ಸಿಲಿಂಡರ್ಗೆ ಪರದಾಡುವಂತಾಗಿಬಿಡ್ತಲ್ಲ. ಇದು ಹೀಗೇ ಮುಂದುವರಿದು, ಪೆಟ್ರೋಲ್–ಡೀಸೆಲ್ ಸಿಗದೆ ಎಲ್ಲ ಸ್ತಬ್ಧ ಆಗಿ ಕೋವಿಡ್ ಲಾಕ್ಡೌನ್ ಸ್ಥಿತಿ ಬಂದುಬಿಟ್ಟರೆ ಹೇಗೆ?’ ಆತಂಕದಿಂದ ಕೇಳಿದಳು.

‘ಏನ್ ಮಾಡೋಕಾಗುತ್ತೆ, ಮನೆಯಲ್ಲೇ ತಟ್ಟೆ ತಟ್ಟುತ್ತಾ, ಗಂಟೆ ಬಾರಿಸುತ್ತಾ ಇದ್ದರಾಯ್ತು’.

‘ಎಷ್ಟು ಕೂಲ್ ಆಗಿ ಹೇಳ್ತೀದಿರಲ್ರೀ, ನಿಮ್ ಕೆಲಸವೇ ಹೋಗಿಬಿಟ್ರೆ ಏನ್ ಮಾಡ್ತೀರಾ?’

‘ಅದಕ್ಯಾಕಮ್ಮ ಯೋಚನೆ ಮಾಡ್ತೀಯ? ನಾವಿರೋದು ಕರ್ನಾಟಕದಲ್ಲಿ. ಇಲ್ಲಿರೋದು ಕಾಂಗ್ರೆಸ್ ಸರ್ಕಾರ. ತಿಂಗಳಿಗೆ ಆರು ಲಕ್ಷ ರೂಪಾಯಿ ಸಂಬಳದ ಕೆಲಸ ಕೊಡ್ತಾರೆ ನಂಗೆ’.

‘ಅದ್ಯಾವುದು ರೀ, ತಿಂಗಳಿಗೆ ಆರು ಲಕ್ಷ ರೂಪಾಯಿ ಸಂಬಳ ಸಿಗೋ ಕೆಲಸ?’ ಕುತೂಹಲದಿಂದ ಕೇಳಿದಳು ಹೆಂಡತಿ.

‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನವೆಂಬ ಸರ್ಕಾರಿ ಜಾಬ್’ ಕಾಲರ್ ಮೇಲೇರಿಸಿಕೊಳ್ಳುತ್ತಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.