‘ಏಯ್, ಕದನ ವಿರಾಮ ಅಂದ್ರೂ ಯುದ್ಧದ್ ಕಿರಿಕಿರಿ ತಪ್ಪಂಗಿಲ್ಲ’ ಎಂದ ಗುದ್ಲಿಂಗ.

‘ವೂ! ನ್ಯೂಸ್ ಚಾನೆಲ್ಲೋರು ಮುಂದೆ ಯುದ್ಧ ಇನ್ನೂ ಎಷ್ಟು ಭಯಾನಕ ಆಗ್ಬಹುದು ಅಂತ ಟ್ರಂಪ್ನ ಮೈಮೇಲೆ ಆವಾಹನೆ ಮಾಡ್ಕಂಡು ತೋರುಸ್ತಾವ್ರೆ. ತಲೆ ಕೆಟ್ಟು ಚಾನೆಲ್ ಚೇಂಜ್ ಮಾಡುದ್ರೆ ‘ಭೂಮಿ ಮ್ಯಾಲೆ ನಮ್ಮ ಬಾಳು ಯುದ್ಧಕಾಂಡ ಕೇಳು’ ಅಂತ ಹಾಡು ಬತ್ತಿತ್ತು. ಟಿವಿಗೆ ಮಕ್ ಉಗುದು ಈಚೆ ಬಂದೆ’ ಎಂದ ಮಾಲಿಂಗ.

‘ಖಾಲಿ ಪೆಟ್ರೋಲ್ ಪಂಪು, ಎಣ್ಣೆ ಒತ್ತಿದರೂ ನೆತ್ತಿ ಆಗದು ತಂಪು, ಸುಳಿಯದು ನಿದ್ದೆಯ ಜೊಂಪು, ಎಲ್ಲಕ್ಕೂ ಕಾರಣ ಹಾಳಾದವ ಟ್ರಂಪು’ ಎಂದು ಕವನ ಕೊರೆದ ಕಲ್ಲೇಶಿ.

‘ಟೆರೇಸ್ ಮೇಲಿದ್ದ ಪೇಣಿ ತರಕ್ ಓದ್ರೂ ನನ್ ಹೆಂಡ್ತಿ ಹಿಂದೇನೆ ಬಂದು ಯಾವ್ದಾರ ಕೆಟ್ ಕ್ಷಿಪಣಿ ತಲೆ ಮೇಲೆ ಬಿದ್ದಾತು ಅಂತ ಎಳ್ಕಂಡು ಬಂದ್ಲು’ ಎಂದ ಭದ್ರ.

‘ನೀನು ಪೇಣಿನಲ್ಲ, ಪಕ್ಕದ ಮನೆ ನಾಗವೇಣಿ ನೋಡಕ್ ಹೋಗಿದ್ದೆ ಅಂತ ನಿನ್ ಹೆಂಡ್ತಿಗೆ ಗೊತ್ತು ಬಿಡು. ನಾನೂ ಮನೇಲಿರಕ್ಕಾಗ್ದೆ ಈಚೆ ಬಂದು ನೋಡುದ್ರೆ ಸಿಲಿಂಡರಿಗೆ ಘೋರ ಯುದ್ಧ ನಡೀತಿತ್ತು’.

‘ನಾನು ನಿದ್ದೇಲೇ ಶಾಂತಿ ಬೇಕು ಶಾಂತಿ ಅಂತ ಕನವರಿಸ್ತಿದ್ದೆ. ನನ್ ಹೆಂಡ್ತಿ ತಿವಿದು ಎಬ್ಸಿ ಯಾವಾಳ್ರೀ ಅವಳು ಶಾಂತಿ? ಅಂತ ಅವಾಜ್ ಹಾಕುದ್ಲು’.

‘ಅಸಲಿ ಕದನ ಆಗ ಶುರುವಾಗುತ್ತೆ ಬುಡು. ಈ ಯುದ್ಧದ್ ಕಿರಿಕಿರಿ ತಪ್ಪುಸ್ಕೊಬೇಕು ಅಂದ್ರೆ ಆರತಿ ಮಿಸ್ ಹತ್ಕಂಡು ಚಂದ್ರನ ಕಡೆ ಓಯ್ಬಿಡ್ಬೇಕು’.

‘ಲೇಯ್, ಅದು ಆರತಿ ಮಿಸ್ ಅಲ್ಲ ಕಣಲೇ! ಆರ್ಟಿಮಿಸ್! ಅದರಲ್ಯಾಕ್ ಹೋಗ್ಬೇಕು? ಯಾವ್ದಾರೂ ವಿಮಾನಕ್ಕೆ ಎಟಿಸಿ ಕ್ಲಿಯರೆನ್ಸ್ ಸಿಕ್ದಿದ್ರೆ ಚಂದ್ರ, ನವಗ್ರಹ, ಸ್ವರ್ಗ ಎಲ್ಲಾ ಕಾಣ್ತದೆ’ ಎಂದ ಪರ್ಮೇಶಿ.

ಎಲ್ಲಾ ಗೊಳ್ಳನೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.