‘ಲೇ ತೆಪರ, ಏನಲೆ ಇವತ್ತಿನ ಬ್ರೇಕಿಂಗು? ಏನೈತಿ ಹೊಸ ಸುದ್ದಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.

‘ಹೊಸ ಸುದ್ದೀನಾ? ದೀದಿ ವರ್ಸಸ್ ಮೋದಿ, ಸಿಎಂ ವರ್ಸಸ್ ಡಿಸಿಎಂ, ಗುಡ್ಡೆ ವರ್ಸಸ್ ಮಂಜಮ್ಮ...’ ಎಂದ ತೆಪರೇಸಿ.

‘ಗುಡ್ಡೆ ವರ್ಸಸ್ ಮಂಜಮ್ಮನಾ? ಯಾಕೆ?’

‘ಯಾಕಂದ್ರೆ ಗುಡ್ಡೆ ಬಾಕಿ ಗುಡ್ಡ ಆಗೇತಲ್ಲ, ಅದ್ಕೆ...’ ಮಂಜಮ್ಮಗೆ ಕೋಪ.

‘ಎಲೆಕ್ಷನ್ ರಿಸಲ್ಟ್ ಬರ್ಲಿ ಇರು ಮಂಜಮ್ಮ, ವಿಜಯೋತ್ಸವ, ಹಾರ–ತುರಾಯಿ, ಪಟಾಕಿ, ಇದ್ರಲ್ಲೆಲ್ಲ ಕಮಾಯಿ ಆಗುತ್ತೆ, ನಿನ್ ಬಾಕಿ ತೀರಿಸ್ತೀನಿ, ಡೋಂಟ್ ವರಿ’ ಎಂದ ಗುಡ್ಡೆ.

‘ನಿನ್ ಪಾರ್ಟಿ ಗೆಲ್ಲದಿದ್ರೆ ಏನ್ಮಾಡ್ತೀಯ?’

‘ಯಾರು ಗೆದ್ರೂ ಪಟಾಕಿ ಹೊಡೆಯೋದು ನಾನೇ... ರೊಕ್ಕ ಸಿಗ್ತತಿ ಅಂದ್ರೆ ಯಾರ ಬಾವುಟ ಆದ್ರೂ ಕಟ್ತೀನಿ, ಯಾರಿಗೆ ಬೇಕಾದ್ರೂ ಜೈ ಅಂತೀನಿ...’ ಗುಡ್ಡೆ ನಕ್ಕ.

‘ಥು ನಿನ್ ಮಕ್ಕೆ’ ಎಂದ ಮಂಜಮ್ಮ, ‘ಎಜ್ಜಿಟ್ ಪೋಲ್ ನೋಡಿದ್ರೇನ್ರೋ? ದೀದಿ ಕತೆ ಮುಗೀತು, ಬಂಗಾಳದಲ್ಲಿ ನಮ್ ಮೋದಿನೇ ಗೆಲ್ಲೋದು’ ಎಂದಳು.

‘ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆ ಸೋಲು ಬಯಸ್ತೀಯಲ್ಲ ಮಂಜಮ್ಮ, ಇದು ನ್ಯಾಯನಾ?’ ಗುಡ್ಡೆ ಆಕ್ಷೇಪಿಸಿದ.

‘ನಮಗೆ ದೇಶ ಮುಖ್ಯ...’

‘ಹೌದಾ? ಮತ್ತೆ ಫ್ರೀ ಅಕ್ಕಿ, ಫ್ರೀ ಕರೆಂಟು, ಎರಡು ಸಾವಿರ ರೊಕ್ಕ ಇವೆಲ್ಲ ಮುಖ್ಯ ಅಲ್ವಾ?’

‘ಥೋ, ಇವ್ನು ಎಲ್ಲಿಂದೆಲ್ಲಿಗೋ ಹೋದ. ರಿಸಲ್ಟ್ ಬರ್ಲಿ ತಡಿಯೋ... ಈಗ ಡಿಕೆಶಿ ಸಿಎಂ ಆಗ್ತಾರಾ ಇಲ್ವಾ ಅದನ್ನೇಳು’ ಎಂದ ದುಬ್ಬೀರ.

‘ನಂಗೊತ್ತಿಲ್ಲ, ನಾನೇನ್ ಗಿಳಿ ಶಾಸ್ತ್ರ, ಕವಡೆ ಶಾಸ್ತ್ರ ಹೇಳ್ತೀನಾ?’ ಗುಡ್ಡೆಗೆ ಸಿಟ್ಟು ಬಂತು.

‘ಆತು ಬಿಡಪ್ಪ, ಗಿಳಿ ಶಾಸ್ತ್ರ ಬ್ಯಾಡ, ‘ಹಸ್ತ’ ಭವಿಷ್ಯ ಹೇಳು. ಹಸ್ತದಾಗಿನ ಗೆರೆಗಳು ಡಿಕೆಶಿ ಕಡಿಗೆ ವಾಲ್ತದಾವ, ಗ್ರಹಗಳೆಲ್ಲ ಖುಷಿಯಾಗಿದಾವ, ನಾವು ಪಟಾಕಿ ಹೊಡೀಬೋದಾ... ಸ್ವಲ್ಪ ನೋಡಿ ಹೇಳು...’ ಎಂದ ಕೊಟ್ರ. ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.