‘ನೋಡಿಲ್ಲಿ... ನಮ್ ಸಂತೋಷದ ಸೂಚ್ಯಂಕ ಎರಡು ಪಾಯಿಂಟ್ ಹೆಚ್ಚಾಗೈತಿ!’ ಬೆಕ್ಕಣ್ಣ ಭಯಂಕರ ಖುಷಿಯಿಂದ ವದರಿತು.

‘ಎಷ್ಟನೇ ರ್ಯಾಂಕಿಂಗ್?’ ಸಂಭ್ರಮದಿಂದ ಕೇಳಿದೆ.

‘ಸಮೀಕ್ಷೆ ನಡೆಸಿದ 147 ದೇಶಗಳಲ್ಲಿ ನಾವು 116ನೇ ಸ್ಥಾನದಾಗೆ ಅದೀವಿ. ಹೋದ್ವರ್ಸ 118ನೇ ಸ್ಥಾನದಾಗೆ ಇದ್ದಿವಿ’ ಬೆಕ್ಕಣ್ಣ ಬೀಗಿತು.

‘ನಮ್ ಪಕ್ಕದ ದೇಶಗಳೇ ವಾಸಿ! ನೇಪಾಳ 99ನೇ ಸ್ಥಾನದಾಗೆ, ಪಾಕಿಸ್ತಾನ 104ನೇ ಸ್ಥಾನದಾಗೆ ಅದಾವು’ ಎಂದೆ ವರದಿ ಓದುತ್ತ.

‘ನಮ್ ಮೋದಿಮಾಮಾನೆ ಇನ್ನಾ ಹತ್ ವರ್ಸ ಪ್ರಧಾನಿಯಾಗಿದ್ದರೆ, ಎಲ್ಲಾ ರಾಜ್ಯದಾಗೆ ಡಬ್ಬಲ್ ಎಂಜಿನ್ ಸರ್ಕಾರ ಬಂದರೆ ನಮ್ ಸಂತೋಷದ ಮಟ್ಟ ಇನ್ನೂ ಹೆಚ್ಚತೈತಿ!’ ಬೆಕ್ಕಣ್ಣ ಮೀಸೆ ತಿರುವಿತು.

‘ಡಬ್ಬಲ್ ಎಂಜಿನ್ ಸರ್ಕಾರಕ್ಕೂ ಜನರ ಸಂತೋಷಕ್ಕೂ ಸಂಬಂಧ ಇಲ್ಲಲೇ. ಜಿಡಿಪಿ, ಸಾಮಾಜಿಕ ಬೆಂಬಲ, ಆರೋಗ್ಯವಂತ ಬದುಕು, ನಿರ್ಧಾರದ ಸ್ವಾತಂತ್ರ್ಯ, ಔದಾರ್ಯ, ಭ್ರಷ್ಟಾಚಾರ, ಹಿಂಗೆ ಸಂತೋಷದ ಅಳತೆಗೋಲು ಬ್ಯಾರೆ ಇರತಾವು’ ಎಂದೆ.

‘ಕೈಪಕ್ಷದೋರು ಇದ್ದಾಗ ಎಲ್ಲಾ ಕಡಿಗಿ ಅತೃಪ್ತಿ, ಜಗಳ, ದೊಂಬಿ ಇರತಿದ್ದವು. ಆವಾಗ ಸಂತೋಷದ ಮಟ್ಟ ಕುಸಿದಿತ್ತು. ಈಗ ಎರಡು ದಶಕದಲ್ಲಿ ಸಂತೋಷ ಹೆಚ್ಚಾಗೈತಿ.’ ಬೆಕ್ಕಣ್ಣ ವಾದಿಸಿತು.

‘2012ರಲ್ಲಿ ಮೊದಲನೇ ಸಲ ಸಮೀಕ್ಷೆ ಮಾಡಿದ 155 ದೇಶಗಳಲ್ಲಿ 111ನೇ ಸ್ಥಾನದಲ್ಲಿ ಇದ್ವಿ. 2013ರಲ್ಲೂ ಅದೇ ಸ್ಥಾನದಲ್ಲಿ ಇದ್ವಿ. ಅಮೇಲೆ ಕುಸಿತ ಶುರುವಾತು. 2020ರಲ್ಲಿ ಸಮೀಕ್ಷೆ ಮಾಡಿದ 153 ದೇಶಗಳಲ್ಲಿ ನಾವು 144ನೇ ಸ್ಥಾನಕ್ಕೆ ಕುಸಿದಿದ್ದಿವಿ.’ ನಾನು ಹಿಂದಿನ ವರದಿಗಳನ್ನು ತೋರಿಸಿದೆ.

‘ಸಂತೋಷದ ಮಾನದಂಡಗಳನ್ನ ಬದಲಿಸಬಕು. ನಮ್ ಸಂಸ್ಕೃತಿಗೆ ಹೊಂದುವ ಮಾನದಂಡಗಳಿರಬಕು’ ಎಂದು ಬೆಕ್ಕಣ್ಣ ತರ್ಕ ಮಂಡಿಸಿತು.

‘ಹೌದಾ... ಏನವು?’

‘ನಿರ್ಧಾರದ ಸ್ವಾತಂತ್ರ್ಯ, ಔದಾರ್ಯ ಇಂಥವನ್ನ ಕೈಬಿಡಬಕು. ದೇಶಭಕ್ತಿ, ಭವ್ಯ ನವಇತಿಹಾಸದಲ್ಲಿ ನಂಬಿಕೆ, ವಿಶ್ವಗುರುವಿನಲ್ಲಿ ಗೌರವ, ದನಿಯೆತ್ತಬೇಕಾದಲ್ಲಿ ಮೌನ, ಆಧ್ಯಾತ್ಮಿಕ ಆನಂದ, ಇವನ್ನು ಸಂತೋಷದ ಮಾನದಂಡ ಮಾಡಬಕು’ ಎಂದು ಬೆಕ್ಕಣ್ಣ ಗುರುಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.