‘ಅಬ್ಬಾ! ಅಂತೂ ‘ವೋಟಾಟ ಟೂರ್ನಮೆಂಟ್’ ಮುಗಿಯಿತು, ಕುತೂಹಲ, ಕೋಲಾಹಲಕ್ಕೆ ತೆರೆ ಬಿತ್ತು...’ ನ್ಯೂಸ್ ಪೇಪರ್ ಓದುತ್ತಾ ಸುಮಿ ನಿಟ್ಟುಸಿರುಬಿಟ್ಟಳು.

‘ಕುತೂಹಲ ಮುಗಿದರೂ ಕೋಲಾಹಲ ಮುಗಿಯಲ್ಲ, ಗೆದ್ದವರು ತೊಡೆ ತಟ್ಟುತ್ತಾರೆ, ಸೋತವರು ಹೆಡೆ ಎತ್ತುತ್ತಾರೆ. ಹೀಗಾಗಿ ಕೂಗಾಟ, ಬೈದಾಟ ಮುಂದುವರಿಯುತ್ತದೆ’ ಅಂದ ಶಂಕ್ರಿ.

‘ವೆಸ್ಟ್ ಬೆಂಗಾಲ್ ಪಂದ್ಯ ಹೈ ವೋಲ್ಟೇಜ್ ಪಂದ್ಯ ಆಗಿತ್ತು. ಹಾಲಿ ಚಾಂಪಿಯನ್ ಕೋಲ್ಕತ್ತ ರೈಡರ್ಸ್ ವಿರುದ್ಧ ಎನ್ಡಿಎ ಟೈಗರ್ಸ್ ಡಬ್ಬಲ್ ಸೆಂಚುರಿ ಬಾರಿಸಿ ಭರ್ಜರಿ ಗೆಲುವು ಪಡೆದರು’.

‘ದೆಹಲಿ ಪರಿಣತ ಕೋಚ್ಗಳ ಕ್ರೀಡಾ ತಂತ್ರಗಾರಿಕೆ ಎನ್ಡಿಎ ಪಡೆ ಗೆಲುವಿಗೆ ಕಾರಣವಂತೆ. ಸಾಲದ್ದಕ್ಕೆ ಕೋಲ್ಕತ್ತ ರೈಡರ್ಸ್ ನಿಖರವಾದ ಬೌಲಿಂಗ್ ಮಾಡಲಿಲ್ಲವಂತೆ, ಕ್ಯಾಚುಗಳನ್ನು ಕೈಚೆಲ್ಲಿದರು, ಕ್ಷೇತ್ರ ರಕ್ಷಣೆಯಲ್ಲೂ ಎಡವಿದರಂತೆ’.

‘ತಮಿಳುನಾಡು ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶ! ಪದಾರ್ಪಣೆ ಪಂದ್ಯದಲ್ಲೇ ದಳಪತಿ ತಂಡ ಅದ್ಭುತ ಯಶಸ್ಸು ಕಂಡಿದೆ. ಕ್ಯಾಪ್ಟನ್ ದಳಪತಿ ಆಲ್ರೌಂಡರ್ ಆಟವಾಡಿ ತಂಡವನ್ನು ಮೇಲೆತ್ತಿದ್ದಾರೆ’.

‘ಹೌದು. ದಳಪತಿಯನ್ನು ಕ್ರೀಡಾಕೂಸು ಅಂತ ನಿರ್ಲಕ್ಷ್ಯ ಮಾಡಿದ್ದ ಎದುರಾಳಿ ತಂಡದ ಘಟಾನುಘಟಿಗಳು ಮಣ್ಣು ಮುಕ್ಕಿದರು. ದಳಪತಿ ಬಾರಿಸಿದ ಎಲ್ಲಾ ಬಾಲ್ಗಳನ್ನು ಗ್ಯಾಲರಿಯ ಪ್ರೇಕ್ಷಕರು ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದರಂತೆ’.

‘ಕೇರಳಂ ಟೂರ್ನಿಯಲ್ಲಿ ಕೈ ಪಡೆ ಕಪ್ ಗೆದ್ದಿದೆ. ಹಾಲಿ ಚಾಂಪಿಯನ್ ಜಾಗ ಖಾಲಿ ಮಾಡಿದೆ. ಅಸ್ಸಾಂ, ಪುದುಚೆರಿ ಪಂದ್ಯಾವಳಿ ಅಷ್ಟಾಗಿ ಕುತೂಹಲ ಕೆರಳಿಸಲಿಲ್ಲ’.

‘ಕುತೂಹಲವಿದ್ದ ಲೋಕಲ್ ಟೂರ್ನಿಯ ಎರಡೂ ಪಂದ್ಯಗಳನ್ನು ಕೈ ಪಡೆ ಗೆದ್ದಿದೆ. ಗೆದ್ದರೂ ಕಪ್ ಸಿಗೋದಿಲ್ಲ, ಕೇವಲ ಸರ್ಟಿಫಿಕೇಟ್ ಅಷ್ಟೆ ಎಂದು ಕಮಲ ಪಡೆ ಪಂದ್ಯವನ್ನು ಕೈ ಚೆಲ್ಲಿತೆ?’

‘ಏನನ್ನೂ ಚೆಲ್ಲಲಿಲ್ಲ, ಮುಂದಿನ ಮಹಾಟೂರ್ನಿ ಗೆಲ್ಲಲು ಪಿಚ್ ಸ್ಟಡಿ ಮಾಡಿಕೊಂಡು ಸಜ್ಜಾಗಿದ್ದೇವೆ ಎನ್ನಬಹುದು ಅಲ್ವಾ?’ ಅಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.