'ಮುಖ ತೊಳೆದು, ಫ್ರೆಷ್ ಆಗಿ. ಈರುಳ್ಳಿ ಇಲ್ದಿರೋ ಉತ್ತಪ್ಪ ಮಾಡ್ಕೊಂಡು ಬರ್ತಿನಿ' ಎನ್ನುತ್ತಾ ಒಳಗೆ ಹೋದಳು ಮಡದಿ. 'ಏನಿವತ್ತು ಟ್ರೀಟ್ಮೆಂಟ್ ಸಿಗ್ತಿದೆ' ಎಂದುಕೊಳ್ಳುತ್ತಾ, ಪಕ್ಕದಲ್ಲೇ ಇದ್ದ ಲ್ಯಾಪ್‌ಟಾಪ್ ಮೇಲೆ ಕಣ್ಣು ಹಾಯಿಸಿದೆ. ವೈಫ್ ಟ್ಯಾಗ್ ಅಂತಿದ್ದ ಫೋಲ್ಡರ್ ಎದ್ದು ಕಾಣ್ತಿತ್ತು. ಅದರ ಮೇಲೆ ಕ್ಲಿಕ್ ಮಾಡಿದ್ದೇ ತಡ ಬೆವರು ಕಿತ್ತು ಬರತೊಡಗಿತು!
‘ನಿಮ್ಮ ಗಂಡ ಇಂದು ಡಿಲೀಟ್ ಮಾಡಿದ ಮೆಸೇಜ್‌ಗಳು 25, ವಾಟ್ಸ್‌ಆ್ಯಪ್ ವಿಡಿಯೊ ಕಾಲ್ 5... ಅತಿಹೆಚ್ಚು ಕರೆ ಮಾಡಿರೋದು ಈ ನಂಬರ್‌ಗೆ... ಇಷ್ಟ್ ಗಂಟೆಯಿಂದ ಅಷ್ಟ್ ಗಂಟೆಯವರೆಗೂ ಈ ಪಾರ್ಕ್‌ನಲ್ಲಿ ಓಡಾಡಿದಾರೆ...'
ಅಚ್ಛೇ ದಿನ್ ಕನಸು ಕಾಣುತ್ತಿದ್ದ ನನಗೆ ಕ್ರಿಟಿಕಲ್ ಟೈಮ್ ಪ್ರಾರಂಭವಾಯಿತು. ನಮ್ಮ ಒಳ್ಳೆಯದಕ್ಕೆ ಎಂದು ತೋರುವ ಎಲ್ಲವೂ ಹೇಗೆ ಕೊರಳು ಕೊಯ್ದುಬಿಡುತ್ತವೆ ಎಂದು ಮೊದಲ ಬಾರಿಗೆ ಸೀರಿಯಸ್ ಆಗಿ ಯೋಚಿಸತೊಡಗಿದೆ.