‘ಕಾರ್ಮಿಕರ ದಿನಾಚರಣೆ ಶುಭಾಶಯಗಳು’ ಬೆಕ್ಕಣ್ಣ ಬೆಳಗ್ಗೆ ಶುಭ ಕೋರಿತು.

ನಾನು ಮಾತಾಡದೇ ಸುಮ್ಮನಿದ್ದೆ. ‘ನೀವು ಹೆಣ್ಮಕ್ಕಳು ಒಳಗೂ ಕಾರ್ಮಿಕರು... ಹೊರಗೂ ಕಾರ್ಮಿಕರು! ಪಾಪ... ದಿನಾ ಅಡಗಿ ಮಾಡಿ ದಣೀತಿ. ಇವತ್ ಅಡಗಿ ಮನಿಗಿ ರಜಾ ಕೊಡು. ಹೊರಗೆ ಊಟಕ್ಕೆ ಹೋಗೂಣು’ ಎಂದಿತು ಬೆಕ್ಕಣ್ಣ.

‘ಬಿಲ್ ನಾನೇ ಕೊಡಬೇಕಲ್ಲ... ಈಗ ಹೋಟೆಲ್ ಊಟ, ತಿಂಡಿ ಎಲ್ಲ ತುಟ್ಟಿ ಆಗ್ಯಾವು’ ಎಂದು ಸಿಡುಕಿದೆ.

‘ಮತ್ತ ಕಾರ್ಮಿಕರ ದಿನಾಚರಣೆ ಸ್ಪೆಶಲ್ ಏನು?’

‘ನಿಮ್ ಮೋದಿಮಾಮಾರೆ ಸ್ಪೆಶಲ್ ಗಿಫ್ಟ್ ಕೊಟ್ಟಾರಲ್ಲ! ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದ್ದಲ್ಲದೇ ಬಡವ್ರು ಬಳಸೋ ಸಣ್ಣ ಸಿಲಿಂಡರ್ ಬೆಲೆನೂ ಗಗನಕ್ಕೆ ಏರಿಸ್ಯಾರೆ’ ಎಂದು ಹಂಗಿಸಿದೆ.

‘ನಮ್ ದೇಶಕ್ಕಷ್ಟೇ ಅಲ್ಲ, ಯುದ್ಧದ ಬಿಸಿ ಎಲ್ಲಾ ದೇಶಗಳಿಗೂ ತಟ್ಟೈತಿ... ಸುಮ್ಸುಮ್ನೆ ಮೋದಿಮಾಮಾರಿಗೆ ಬೈಯಬ್ಯಾಡ’ ಎಂದು ಬೆಕ್ಕಣ್ಣ ಮೂತಿ ತಿರುವಿತು.

‘ಹಂಗಾರೆ ಪಂಚರಾಜ್ಯ ಚುನಾವಣೆ ಮುಗಿಯೂವರೆಗೆ ಕಾದು, ಚುನಾವಣೆ ಮುಗಿದ ಮ್ಯಾಗೆ ಎದಕ್ಕ ಏರಿಸಬಕು?’ ಎಂದು ನಾನು ರೇಗಿದೆ.

‘ಹೋಗ್ಲಿಬಿಡು... ನನಗೆ, ನಿನಗೆ ಎದಕ್ಕೆ ಜಗಳ... ಮಳಿ ಬೆಳಿ ವಿಚಾರ ಮಾತಾಡೂಣು’ ಎಂದು ಮಾತು ಬದಲಿಸಿತು.

‘ಮಳಿ ಬಂದ್ರೆ ಬೆಳಿ ನಷ್ಟ ಆಗೂದು ಬಡರೈತರಿಗೆ. ಮಳಿ ನೀರಾಗೆ ಕೊಚ್ಚಿಕೊಂಡು ಹೋಗೋರು, ಗೋಡೆ ಬಿದ್ದು ಸಾಯೋರು ಬಡವ್ರು... ಒಟ್ಟು ಬಡವ್ರಿಗೆ ಉಳಿಗಾಲವಿಲ್ಲ ಬಿಡು’ ಎಂದೆ ಬೇಸರದಿಂದ.

‘ಬೆಂಗಳೂರಿನ 40,000 ರಸ್ತೆಗುಂಡಿ ತುಂಬಕ್ಕೆ 33
ಕೋಟಿ ರೂಪಾಯಿ ಖರ್ಚು ಮಾಡೀವಂತ ಲೆಕ್ಕ ತೋರಿ ಸ್ತಾರೆ. ಎಲ್ಲಾ ರೊಕ್ಕ ಕಮೀಶನ್ ಗುಂಡಿ ತುಂಬಕ್ಕೇ! ಅತ್ತಾಗೆ
ನೋಡಿದ್ರೆ ‘ಯಾರೇ ಕೆಳಬೀಳಲಿ, ಯಾರದೇ ಪ್ರಾಣ ಹೋಗಲಿ, ನಮ್ ಸಿಎಂ ಕುರ್ಚಿ ಕಿತ್ತಾಟಕ್ಕೆ ಕೊನೆಯಿಲ್ಲ’ ಅಂತ ಹುಲಿ–ಬಂಡೆ ಸೇರಿ ಹಾಡತಾ ಕುಂತಾರೆ’ ಎನ್ನುತ್ತ ಬೆಕ್ಕಣ್ಣ ಗುರುಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.