‘ನೋಟ್ ಬ್ಯಾನ್ ಮಾಡಿದಂತೆ ಸರ್ಕಾರ ಬಂಗಾರವನ್ನೂ ಬ್ಯಾನ್ ಮಾಡಬೇಕೂರೀ!’ ಎಂದಳು ಸುಮಿ.

‘ಅಂತಹ ಉತ್ತಮ ನಿರ್ಧಾರವನ್ನು ಯಾವ ಸರ್ಕಾರವೂ ಮಾಡುವುದಿಲ್ಲ. ಅಶಕ್ತರು ಒಂದು ವರ್ಷ ಚಿನ್ನ ಕೊಳ್ಳಬೇಡಿ ಎಂದು ಪ್ರಧಾನಿ ಹೇಳಿದ್ದಾರಷ್ಟೆ’ ಎಂದ ಶಂಕ್ರಿ.

‘ಮದುವೆ, ಗೃಹಪ್ರವೇಶಗಳಲ್ಲಿ ಸಂಬಂಧಿಗಳ ಒಡವೆ ಸ್ಪರ್ಧೆಯಲ್ಲಿ ಪ್ರತಿ ಬಾರಿಯೂ ಸೋತು, ನೋವು, ಅವಮಾನ ಅನುಭವಿಸಿ ನನಗೆ ಒಡವೆ ಬಗ್ಗೆ ವೈರಾಗ್ಯ ಮೂಡಿದೆ...’ ಜಿಗುಪ್ಸೆಯಿಂದ ಹೇಳಿದಳು.

ಶಂಕ್ರಿ ಕಳವಳಗೊಂಡ. ಹೆಂಡತಿಯ ಒಡವೆ ವೈರಾಗ್ಯದ ಬಗ್ಗೆ ಫ್ಯಾಮಿಲಿ ವೈದ್ಯರಲ್ಲಿ ಹೇಳಿಕೊಂಡ.

‘ಹೆಣ್ಣುಮಕ್ಕಳಲ್ಲಿ ಒಡವೆ ವೈರಾಗ್ಯ ಮೂಡುವುದು ಅಪಾಯಕಾರಿ! ಉಳ್ಳವರು ಒಡವೆ ಕೊಳ್ಳುವರು, ನಿಮ್ಮಂಥ ಶಕ್ತಿಹೀನರ ಕುಟುಂಬದ ಮಹಿಳೆಯರಲ್ಲಿ ಒಡವೆ ವೈರಾಗ್ಯ ಸಹಜ’ ಎಂದರು ವೈದ್ಯರು.

‘ವೈರಾಗ್ಯ ರೋಗಕ್ಕೆ ಚಿಕಿತ್ಸೆ ಇಲ್ವೆ ಡಾಕ್ಟ್ರೆ?’

‘ನಿಮ್ಮ ಹೆಂಡತಿಯನ್ನು ಜುವೆಲ್ಲರಿ ಅಂಗಡಿಗೆ ಕರೆದುಕೊಂಡು ಹೋಗಿ ಒಡವೆಗಳನ್ನು ತೋರಿಸಿ, ವ್ಯಾಮೋಹ ಬೆಳೆಸುವ ಪ್ರಯತ್ನ ಮಾಡಿ’ ಎಂದರು.

ವೈದ್ಯರ ಸಲಹೆ ಮೇರೆಗೆ ಹೆಂಡತಿ ಜೊತೆ ಒಡವೆ ಅಂಗಡಿಗೆ ಬಂದ ಶಂಕ್ರಿ, ಆಕೆಯ ಸಮಸ್ಯೆ ಬಗ್ಗೆ ಅಂಗಡಿ ಓನರ್ಗೆ ಹೇಳಿ, ಸಹಕರಿಸಿ ಎಂದು ಕೇಳಿಕೊಂಡ.

‘ಹೆಂಡತಿಗೆ ಒಡವೆ ತೋರಿಸಲು ಬಂದ ಇವತ್ತಿನ ಹದಿನಾರನೇ ಕೇಸು ನೀವು, ನಿಮ್ಮ ಹೆಂಡತಿಯ ವೈರಾಗ್ಯ ನಿವಾರಣೆಯಾಗಿ ಚಿನ್ನದ ವ್ಯಾಮೋಹ ಬೆಳೆಯಲಿ’ ಎಂದು ಹಾರೈಸಿದರು.

‘ಅಂಗಡಿಯ ಆಕರ್ಷಕ ಡಿಸೈನಿನ ಒಡವೆಗಳಿಗೆ ಸುಮಿ ಮನಸೋತಳು. ಕೇಳಿದ ಒಡವೆಗಳನ್ನು ಸೇಲ್ಸ್ ಗರ್ಲ್ ಷೋಕೇಸ್ನಿಂದ ತೆಗೆದುಕೊಟ್ಟಳು. ಒಂದೊಂದನ್ನೂ ಧರಿಸಿಕೊಂಡು, ‘ರೀ, ಹೇಗೆ ಕಾಣ್ತಿದ್ದೀನಿ?’ ಎಂದಳು.

‘ಚೆನ್ನಾಗಿ ಕಾಣ್ತೀಯಾ’ ಎಂದು ಶಂಕ್ರಿ ಮೊಬೈಲ್ನಲ್ಲಿ ಅವಳ ಫೋಟೊ ತೆಗೆದುಕೊಂಡ.

ಫೋಟೊಗಳನ್ನು ಫೇಸ್ಬುಕ್, ವಾಟ್ಸ್ಆ್ಯಪ್ನಲ್ಲಿ ಗೆಳತಿಯರೊಂದಿಗೆ ಹಂಚಿಕೊಂಡು ಸುಮಿ ಸಂಭ್ರಮಿಸಿದಳು, ಸುಧಾರಿಸಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.