ಟಿ.ವಿಯ ಲೈವ್ ಪ್ರೋಗ್ರಾಂನಲ್ಲಿ ಪ್ರತ್ಯಕ್ಷರಾಗಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಗುರೂಜಿಯು ಸುಮಿಯ ಪಾಲಿನ ಪ್ರತ್ಯಕ್ಷ ದೇವರು! ಏನೇ ಕಷ್ಟಗಳಿದ್ದರೂ ಹೇಳಿಕೊಂಡು ಅವರಿಂದ ಪರಿಹಾರ ಪಡೆದುಕೊಳ್ಳುತ್ತಾಳೆ.

ಇವತ್ತೂ ಫೋನ್ ಮಾಡಿದ ಸುಮಿ, ‘ಗುರೂಜಿ, ಗ್ಯಾಸ್ ಸಿಲಿಂಡರ್ ಸಮಸ್ಯೆ, ಗ್ಯಾಸ್ ಇಲ್ಲದೆ ಸಂಸಾರ ಮಾಡೋದು ಹೇಗೆ ಅಂತ ಚಿಂತೆಯಾಗಿದೆ...’ ಎಂದು ದುಃಖ ತೋಡಿಕೊಂಡಳು.

‘ಕೊಲ್ಲಿ ಯುದ್ಧ ಮುಗಿಯುವವರೆಗೂ ಮನೆಯಲ್ಲಿ ಒಲೆ ಹಚ್ಚಬೇಡ ತಾಯಿ!’ ಎಂದರು.

‘ಒಲೆ ಹಚ್ಚದೆ ಅಡುಗೆ ಮಾಡೋದು ಹೇಗೆ ಗುರೂಜಿ, ಊಟವಿಲ್ಲದೆ ಬದುಕುವುದು ಹೇಗೆ?’

‘ಹಸು–ಎಮ್ಮೆ ಇಡ್ಲಿ, ದೋಸೆ, ಚಿತ್ರಾನ್ನ ತಿನ್ನುತ್ತವಾ? ಹುಲ್ಲು ತಿನ್ಕೊಂಡು ಆರೋಗ್ಯವಾಗಿ ಬಾಳ್ತಿಲ್ವಾ?’

‘ಹಸು ಹುಲ್ಲು ತಿನ್ನುತ್ತೆ, ಬೆಕ್ಕು ಇಲಿ ಹಿಡಿದು ತಿನ್ನುತ್ತೆ, ನಾಯಿ ಇನ್ನೇನೋ ತಿನ್ನುತ್ತೆ ಎಂದು ನಾವೂ ಹಾಗೆ ಮಾಡಲಾಗುತ್ತಾ ಗುರೂಜಿ?!’

‘ಗ್ಯಾಸ್ ಟ್ರಬಲ್ ಸಂದರ್ಭದಲ್ಲಿ ನಮಗೆ ಪ್ರಾಣಿ, ಪಕ್ಷಿಗಳ ಬದುಕು ಮಾದರಿಯಾಗಬೇಕು. ಪಕ್ಷಿಗಳು ಗೂಡಿನಲ್ಲಿ ಅಡುಗೆ ಮನೆ, ಬಾತ್ ರೂಮ್ ಕಟ್ಟಿಕೊಂಡಿರುತ್ತವೆಯೆ?’ ಗುರೂಜಿ ನಕ್ಕರು.

‘ನಾವು ಏನನ್ನು ತಿನ್ನಬೇಕು?’

‘ಗ್ಯಾಸ್ ಪ್ರಾಬ್ಲಮ್ ಬಗೆಹರಿಯುವವರೆಗೂ ಗೆಡ್ಡೆ–ಗೆಣಸು ತಿನ್ನಿ...’

‘ನಾಲಿಗೆ ರುಚಿ ಕೇಳುತ್ತದೆ ಗುರೂಜಿ!’

‘ನಾಲಿಗೆಯನ್ನು ಸೈಡಿಗಿಟ್ಟು ಹಣ್ಣು, ಹಸಿ ತರಕಾರಿ, ಸೊಪ್ಪುಸೆದೆ ತಿನ್ನಿರಿ, ಆರೋಗ್ಯ, ಸೌಭಾಗ್ಯ ವೃದ್ಧಿಸುತ್ತದೆ’ ಎಂದರು.

ಅಷ್ಟರಲ್ಲಿ ಫೋನ್ ಸಂಪರ್ಕ ಕಡಿತವಾಯ್ತು.

‘ಇನ್ನೊಬ್ಬರು ಕಾಲರ್ ರೆಡಿಯಿದ್ದಾರೆ...’ ಎಂದ ನಿರೂಪಕಿ, ‘ಗುರೂಜಿ ಲೈನ್ನಲ್ಲಿದ್ದಾರೆ ಮಾತನಾಡಿ’ ಎಂದಳು.

‘ಹೇಳಿ ತಾಯಿ, ಏನು ಸಮಸ್ಯೆ?’ ಗುರೂಜಿ ಕೇಳಿದರು.

‘ತಾಯಿ ಅಲ್ಲಾರೀ, ನಿಮ್ಮ ಹೆಂಡ್ತಿ ಮಾತನಾಡ್ತಿದ್ದೀನಿ, ಆನ್ಲೈನ್ನಲ್ಲಿ ಸೌದೆಒಲೆ ಬುಕ್ ಮಾಡಿದ್ದೇನೆ, ಟಿ.ವಿ ಪ್ರೋಗ್ರಾಂ ಮುಗಿಸಿ ಬರ್ತಾ ಒಂದು ಹೊರೆ ಸೌದೆ ತನ್ನಿ...’ ಎಂದು ಹೇಳಿ ಗುರೂಜಿಯ ಹೆಂಡತಿ ಫೋನ್ ಕಟ್ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.