‘ಏನ್ರಪ್ಪೋ. ನಮ್ ಸಂಸದರ ಸಂಖ್ಯೆ ಜಾಸ್ತಿ ಮಾಡ್ತಾವ್ರಂತೆ’ ಮಾತಿಗೆಳೆದ ಗುದ್ಲಿಂಗ ಹರಟೆಕಟ್ಟೇಲಿ.

‘ವೂ ಕಣ್ಲಾ, ಬರೋಬ್ಬರಿ 273 ಸೀಟು ಜಾಸ್ತಿ ಆಯ್ತಾ ಅವೆ. ಎಂಪಿಗಳು ಜಾಸ್ತಿ ಆಯ್ತಾವ್ರೆ ಅಂದ್ರೆ ಖರ್ಚೂ ಜಾಸ್ತಿ ಬತ್ತದೆ ಅನ್ನು’ ಎಂದ ಮಾಲಿಂಗ.

‘ವೂ ಮತ್ತೆ, ಓದ ವರ್ಷ ಸಂಬ್ಳ ಜಾಸ್ತಿ ಮಾಡ್ಕಂಡವ್ರೆ ಕಣ್ರಲಾ, ಈಗ್ಲೇ ಸಂಬಳ, ಭತ್ಯೆ, ಫೋನು, ಫ್ಯಾನು ಎಲ್ಲಾ ಸೇರಿ ಹತ್ತತ್ರ ತಿಂಗಳಿಗೆ 3 ಲಕ್ಷ ತಕತಾವ್ರೆ. ಇನ್ಮುಂದೆ ವರ್ಷಕ್ಕೆ 100 ಕೋಟಿ ಎಚ್ಚಾಯ್ತದೆ’

‘ಈ ಖರ್ಚು ಅಂಗಿರ್ಲಿ, ಎಲೆಕ್ಷನ್ ಖರ್ಚೇನು ಒಸಿ ಬತ್ತದಾ? ಒಬ್ಬೊಬ್ರೂ 10-20 ಕೋಟಿ ಚಚ್ಚಬೇಕಲ್ಲ’ ಎಂದ ಕಲ್ಲೇಶಿ.

‘ಅದ್ಕೇ ಕಣ್ಲಾ, ದೊಡ್ ಕ್ಷೇತ್ರ ಆದ್ರೆ ಒಬ್ರಿಗೇ ಭಾರ
ಆಯ್ತದೆ, ಎಣ್ಣೆ ಪಣ್ಣೆ ಹಂಚಾದು ಕಷ್ಟ ಅಂತ ಕ್ಷೇತ್ರ ತುಂಡಾಕ್ತಾವ್ರೆ! ಇದೂ ಒಂಥರಾ ಒಡೆದು ಆಳದೇ ಕಣ್ಲಾ!’

‘ವೂ ಮತ್ತೆ, ನಿಯತ್ತಿಗೊಂದು ಕ್ಷೇತ್ರ.ಬಂಡಾಯಕ್ಕೊಂದು ಕ್ಷೇತ್ರ’

‘ನಮ್ಗೂ 14 ಸೀಟು ಹೆಚ್ಗೆ ಸಿಕ್ತಾ ಅವೆ, ಸಂಸದರ ನಿಧಿನೂ ಹೆಚ್ಗೆ ಬತ್ತದೆ’

‘ನಿಧಿ ಬತ್ತದೆ ಸರಿ, ಆದರೆ ಧನಿ ಬತ್ ಓಗದಲ್ಲ! ನಮ್ಮೋರು ಇಲ್ ರೈಲ್ ಬುಡೋದೇ ಆಯ್ತು, ಅಲ್ ಮಾತಾಡಕಿಲ್ಲ ಅಂತ ಸಿದ್ದಣ್ಣ ಅವಾಗವಾಗ ಮೂತಿ ತಿವಿಯಲ್ವಾ?’

‘ವೂ ಕಣ್ಲಾ, ನೀವು ಚೊಂಬು, ನಾವು ಬಿಂದಿಗೆ ಅಂತ ಬೈದಾಡ್ಕಂಡವ್ರೆ’

‘ಸುಮ್ನೆ ಸದನದಲ್ಲಿ ಕಾಳಗ! ಸಮಯ ಸಿಕ್ರೆ ಎಲ್ರೂ ಹೊತ್ಕಂಡ್ ಓಗೋರೇ ಕೊಳಗ’

‘ಮುಂದೆ ಮಹಿಳಾ ಮೀಸಲಾತಿ ಬತ್ತದೆ. 33 ಪರ್ಸೆಂಟು ಸೀಟು ಹೆಣ್ ಮಕ್ಕಳಿಗೆ ಓಯ್ತದೆ. ಗಂಡುಗಲಿಗಳೆಲ್ಲಾ ಹಳೇಟೈರು, ರಿಟೈರು ಆಯ್ತವೆ. ಬಿಂದಿಗೆ ಕೊಟ್ಟು ಚೊಂಬು ತಗಂಡ್ರು ಡುಂಡುಂ! ಅನ್ನಂಗಾಯ್ತದೆ’ ಎಂದ ಪರ್ಮೇಶಿ.

ಎಲ್ಲಾ ಗೊಳ್ಳನೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.