‘ಇಲ್ಲ, ನಾನಿನ್ನು ವಿದೇಶ ಪ್ರವಾಸ ಮಾಡಲ್ಲ’ ಕಾರು ಇಳಿದ ತಕ್ಷಣ ಸಿಟ್ಟಿನಲ್ಲೇ ಒಳಬಂದರು ಸಾಹೇಬ್ರು.

‘ಯಾಕೆ ಸರ್, ಏನಾಯ್ತು?’ ತಣ್ಣಗೆ ಕೇಳಿದ ಪಿ.ಎ.

‘ನನ್ನ ಟೂರ್ ಪ್ರೋಗ್ರಾಂ ಚಾರ್ಟ್ನಲ್ಲಿ ಆ ದೇಶದ ಹೆಸರನ್ನ ಪರ್ಮನೆಂಟ್ ಆಗಿ ಬ್ಲಾಕ್ ಮಾಡಿ’ ಮತ್ತೆ ಗುಡುಗಿದರು ಸಾಹೇಬ್ರು.

‘ಯಾವ ದೇಶ ಸಾರ್?’ ನಡುಗುತ್ತಲೇ ಕೇಳಿದ ಪಿ.ಎ.

‘ಅದೇ ರೀ, ನಾರ್ವೆ. ಅದೇನೋ ಪತ್ರಿಕಾ ಸ್ವಾತಂತ್ರ್ಯದಲ್ಲಿ ಮೊದಲ ಸ್ಥಾನದಲ್ಲಿದೆಯಂತಲ್ಲ’.

‘ಅಲ್ಲಿಗ್ಯಾಕ್ ಹೋಗಲ್ಲ ಸಾರ್?’

‘ಅಲ್ಲಿನ ಪತ್ರಕರ್ತರಿಗೆ ಒಂದು ಸೌಜನ್ಯ ಅನ್ನೋದೇ ಇಲ್ವಲ್ರೀ, ಒಂದು ದೇಶದ ಮುಖ್ಯಸ್ಥನಾಗಿರುವ ನನಗೆ ಪ್ರಶ್ನೆ ಕೇಳೋ ರೀತಿನಾ ಅದು. ಬೀದೀಲಿ ಹೋಗೋರಿಗೆಲ್ಲ ರಿಯಾಕ್ಟ್ ಮಾಡಬೇಕೇನ್ರೀ ನಾನು’.

‘ಅಲ್ಲ ಸಾರ್, ನೀವು ಪ್ರೆಸ್ಮೀಟೇ ಮಾಡೋದಿಲ್ಲ, ಮತ್ತೆಲ್ಲಿ ಅವರು ನಿಮ್ಮನ್ನ ಪ್ರಶ್ನಿಸಬೇಕು’ ಹೆದರುತ್ತಲೇ ಹೇಳಿದ.

‘ನಾನು ನಮ್ಮ ದೇಶದಲ್ಲೇ ಪ್ರೆಸ್ಮೀಟ್ ಮಾಡಲ್ಲ, ಇನ್ನು ಅಲ್ಲಿ ಮಾಡಬೇಕೇನ್ರೀ? ಆ ದೇಶದವರಿಗಿಂತ ನಮ್ಮ ದೇಶದ ಪತ್ರಕರ್ತರೇ ಎಷ್ಟೋ ವಾಸಿ ಕಣ್ರೀ, ನಾನು ಟಿವಿಲಿ ಬಂದು ಹೇಳಿದ್ದನ್ನೆಲ್ಲ ಚಾಚೂತಪ್ಪದೇ ಬರ್ಕೋತಾರೆ, ಹೀಗೆ ಹಾದೀಲಿ ಬೀದೀಲೆಲ್ಲ ಏನೇನೋ ಕೇಳಿ ಮುಜುಗರ ಮಾಡಲ್ಲ’ ಎಂದರು ಸಾಹೇಬ್ರು.

‘ಅಧಿಕಾರದಲ್ಲಿರುವವರನ್ನ ಪ್ರಶ್ನಿಸೋದೇ ನಿಜವಾದ ಪತ್ರಕರ್ತನ ಕರ್ತವ್ಯ ಅಲ್ಲವಾ ಸಾರ್?’

‘ನಿಮ್ಮ ದೇಶದ ಮುಖ್ಯಸ್ಥನಿಗೆ ವಿದೇಶದಲ್ಲಿ ಅವಮಾನ ಆಗಿದೆ. ಅದನ್ನು ಖಂಡಿಸೋದು ಬಿಟ್ಟು ಅಣಕಿಸುತ್ತಿದ್ದೀರಾ?’

‘ಅಯ್ಯಯ್ಯೋ ನಮ್ ದೇಶಕ್ಕೆ ಅವಮಾನ ಆಗೋದನ್ನ ನಾನೂ ಸಹಿಸಲ್ಲ ಸಾರ್. ಆದರೆ, ಆ ಜರ್ನಲಿಸ್ಟ್ ಪ್ರಶ್ನೆಗೆ ಉತ್ತರ ಕೊಟ್ಟು, ಅಲ್ಲೇ ಅವರ ನೀರಿಳಿಸಿದ್ರೆ ನನ್ನಷ್ಟು ಖುಷಿ ಪಡೋನೇ ಯಾರು ಇರ್ತಿರಲಿಲ್ಲ. ಹೋಗಲಿ ಬಿಡಿ ಸಾರ್, ಒಂದ್ ಕೆಲಸ ಮಾಡಿ, ನೀವು ನಮ್ಮ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಒಂದು ಪ್ರೆಸ್ಮೀಟ್ ಮಾಡಿ’.

‘ಯಾಕ್ರೀ, ಅಲ್ಲಿ ತುಂಬಾ ಪ್ರಶ್ನೆ ಕೇಳ್ತಾರಾ?’

‘ಪ್ರಶ್ನೆ ಕೇಳಲ್ಲ ಸಾರ್... ಕೇಳ್ತಾರಷ್ಟೇ...’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.