‘ಈ ದೇಶದಲ್ಲಿ ಎಂತೆಂಥೋರು ಏನೇನೋ ಆಗೋದ್ರು... ಮನೆ ಕೆಲಸದೋರು, ಕಾರು ಡ್ರೈವರೆಲ್ಲ ಎಮ್ಮೆಲ್ಲೆ ಆದ್ರು. ಚಾ ಮಾರೋರೊಬ್ರು ದೇಶದ ಪ್ರಧಾನಿನೇ ಆದ್ರು. ಚಾದಂಗಡಿ ಇಟ್ಟಿರೋ ನಮ್ ಮಂಜಮ್ಮ ಮಾತ್ರ ಏನೂ ಆಗ್ಲಿಲ್ಲಪ...’ ಹರಟೆಕಟ್ಟೆಯಲ್ಲಿ ದುಬ್ಬೀರ ಬೇಸರ ವ್ಯಕ್ತಪಡಿಸಿದ.

‘ನಾನು ಇದ್ರಲ್ಲೇ ನೆಮ್ಮದಿಯಾಗಿದೀನಿ, ನಂಗೇನೂ ಬ್ಯಾಡ...’ ಮಂಜಮ್ಮ ಚಾ ಸೋಸಿ ಮಸಿ ಬಟ್ಟೆ ಕೊಡವಿದಳು.

‘ಲೇ ಗುಡ್ಡೆ, ನೀನಾದ್ರು ಸಿಎಂ ಆಗೋ...’ ದುಬ್ಬೀರ ಪಕ್ಷ ಬದಲಿಸಿದ.

‘ನಾನು ಸಿಎಂ ಆಗಾಕೆ ಸಿದ್ರಾಮಣ್ಣ ಕುರ್ಚಿ ಬಿಡಬೇಕಲ್ಲ...’

‘ಲೇಯ್, ನಾನೇಳಿದ್ದು ಆ ತರ ಅಲ್ಲಲೆ, ತಮಿಳುನಾಡಿನ ವಿಜಯ್ ತರ...’

‘ಅಲ್ಲಿ ಸಿಎಂ ಆಗ್ಬೇಕಂದ್ರೆ ಎಲ್ಲ ಫ್ರೀ ಕೊಡ್ಬೇಕು, ಈ ಗುಡ್ಡೆ ಹತ್ರ ಏನೈತೆ ಕೊಡಾಕೆ...’ ಕೊಟ್ರೇಶಿ ಕೊಕ್ಕೆ.

‘ಲೇ ಕೊಟ್ರ, ನಾನೇನರೆ ವಿಜಯ್ ಜಾಗದಾಗಿದ್ದಿದ್ರೆ ಅವರಿಗಿಂತ ಡಬ್ಬಲ್ ಭರ್ಜರಿ ಅಂಡ್ ಸರ್ಜರಿ ಕೊಡ್ತಿದ್ದೆ... ಫುಲ್ ಮೆಜಾರಿಟಿ ತಗಾತಿದ್ದೆ. ಮನಿ ಮನಿಗೆ ಅಕ್ಕಿ, ಗೋಧಿ ಫ್ರೀ, ಕರೆಂಟ್ ಫ್ರೀ, ಗ್ಯಾಸ್ ಫ್ರೀ, ಬಸ್ ಫ್ರೀ, ಗಂಡಸರ ಗಾಡಿಗೂ ಬಾಡಿಗೂ ಎಣ್ಣೆ ಫ್ರೀ, ಹೆಣ್ಮಕ್ಕಳಿಗೆ ಚಿನ್ನ ಫ್ರೀ...’

‘ಗುಡ್ಡೆ ಮಾಂಸ? ಅದನ್ಯಾಕೆ ಬಿಟ್ಟೆ?’ ದುಬ್ಬೀರ ನಕ್ಕ.

‘ಲೇ ಗುಡ್ಡೆ, ನೀ ಏನ್ ರೈಲು ಬಿಡ್ತಿದೀಯೋ ರಾಕೆಟ್ ಬಿಡ್ತಿದೀಯೋ? ಅಲ್ಲಲೆ, ಅಟಾಕಂದು ಫ್ರೀ ಕೊಡಾಕೆ ರೊಕ್ಕ ಎಲ್ಲಿಂದ ತರ್ತೀಯಲೆ?’ ತೆಪರೇಸಿ ಕೇಳಿದ.

‘ಸಾಲ ಮಾಡ್ತೀನಿ, ಯಾಕೆ ನಮ್ ಸಿದ್ರಾಮಣ್ಣ ಸಾಲ ಮಾಡಿಲ್ವ? ಮೋದಿ ಸಾಹೇಬ್ರು ಸಾಲ ಮಾಡಿಲ್ವ?’

‘ಸಾಲ ಮಾಡ್ತಿ ಸರಿ, ತೀರ್ಸೋರು ಯಾರು?’

‘ಮುಂದೆ ಸಿಎಂ ಆಗೋರು ತೀರಿಸ್ಕಂತಾರೆ...’

‘ಅಂದ್ರೆ ನೀನು ಸಾಲ ತೀರ್ಸಲ್ಲ...’

‘ಲೇ ತೆಪರ, ಅವನು ಯಾವತ್ತು, ಯಾರ ಸಾಲ ತೀರ್ಸಿದಾನೆ ಹೇಳಲೆ, ಮಂಜಮ್ಮನ ಚಾದಂಗಡಿ ಬಾಕಿನೇ ತೀರ್ಸಿಲ್ಲ, ಇನ್ನು ದೇಶದ ಸಾಲ ತೀರಿಸ್ತಾನಾ?’ ತಿವಿದ ಕೊಟ್ರೇಶಿ.

‘ಕರೆಕ್ಟ್’ ಎಂದಳು ಮಂಜಮ್ಮ.

ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.