ಸುಮಂಗಲಾ

ಬೆಕ್ಕಣ್ಣ ಬೆಳಗ್ಗೆಯಿಂದ ಮೊಬೈಲು ಹಿಡಿದು ಭಾರೀ ಬಿಜಿಯಾಗಿತ್ತು.

‘ನೀ ಹುಟ್ಟಿ ಎಷ್ಟ್ ವರ್ಸಾತು? ನಾಕೈದು ಅಂತೀಯಲ್ಲ... ನಿನಗೇ ಸರಿ ಗೊತ್ತಿಲ್ಲೇನ್? ನಿನ್ನ ಜನ್ಮ ಪ್ರಮಾಣಪತ್ರ ಎಲ್ಲೈತಿ ನೋಡು... ಇಲ್ಲಂದ್ರ ಬ್ಯಾರೆ ಏನರೆ ದಾಖಲೆ ನೋಡಕ್ಕೆ ನಿಮ್ ಮಾಲಕರಿಗೆ ಹೇಳು’.

‘ಯಾರಿಗೆ ಉಪದೇಶ ನೀಡಾಕೆ ಹತ್ತೀ?’ ಎಂದೆ ಅಚ್ಚರಿಯಿಂದ.

‘ಅಬ್ಬಾ ಸಣ್ಣನ ಮನ್ಯಾಗಿರೂ ಬೆಕ್ಕಮ್ಮನಿಗೆ ಹೇಳತಿದ್ದೆ. ಮತ್ತ ನನ್ ಬರ್ತ್ ಸರ್ಟಿಫಿಕೇಟ್ ಎಲ್ಲಿಟ್ಟಿದ್ದಿ ನೀ? ಈಗೇ ಹುಡುಕಿಡು’ ಎಂದು ವರಾತ ಹಚ್ಚಿತು.

ಮರುಕ್ಷಣ ಊರಲ್ಲಿದ್ದ ನನ್ನಮ್ಮನಿಗೆ ಫೋನು ಹಚ್ಚಿತು.

‘ಅಜ್ಜೀ... ನಿನ್ನ ಬರ್ತ್ ಸರ್ಟಿಫಿಕೇಟ್ ಹುಡುಕಿ ಇಟ್ಕ. ಹಂಗೇ ಮನ್ಯಾಗಿರ ಬೆಕ್ಕು, ಎಮ್ಮೆ, ದನ, ಕರು ಎಲ್ಲಾದ್ರಿದ್ದೂ ಬರ್ತ್ ಸರ್ಟಿಫಿಕೇಟ್ ಮಾಡಿಸೀಯೇನ್? ಅವಕ್ಕೂ ಒಟ್ ಏನರೆ ದಾಖಲೆ ಮಾಡಿಸು’ ಎಂದು ಜೋರು ಮಾಡಿತು.

‘ಮುಂಜಾನಿಂದ ಬರ್ತ್ ಸರ್ಟಿಫಿಕೇಟ್ ಭಜನೀ ಮಾಡಾಕೆ ಹತ್ತೀ... ಈಗೆದಕ್ಕೆ ಬೇಕು?’ ನಾನು ತಲೆ ಕೆರೆದುಕೊಂಡೆ.

‘ಗೊತ್ತೈತಿಲ್ಲೋ... ಎಸ್ಐಆರ್ ಗುಮ್ಮ ಇಲ್ಲೂ ವಕ್ಕರಿಸೈತಿ! ನಮ್ಮತ್ರ ಬರ್ತ್ ಸರ್ಟಿಫಿಕೇಟ್ ಇಲ್ಲ ಅಂತ್ಹೇಳಿ ದೇಶದಿಂದ ಹೊರಗೆ ದಬ್ಬಿದ್ರೆ...’ ಬೆಕ್ಕಣ್ಣ ರಾಗವೆಳೆಯಿತು.

‘ಮಂಗ್ಯಾನಂಥವ್ನೆ... ಎಸ್ಐಆರ್ ಮನುಷ್ಯಾರಿಗೆ ಮಾತ್ರ. ಪ್ರಾಣಿ, ಪಕ್ಷಿಗೆಲ್ಲ ಅಗತ್ಯ ಇಲ್ಲಲೇ’ ಎಂದು ನಕ್ಕೆ.

‘ಯಾರಿಗ್ಗೊತ್ತು... ಇಲ್ಲೇ ಹುಟ್ಟಿ ಬೆಳದೀರಂತ ಪ್ರೂವ್ ಮಾಡ್ರಿ ಅಂತ್ಹೇಳಿ ನಮಗೂ ಕೇಳಿದ್ರ ಏನ್ ಮಾಡೂದು?’ ಎಂದಿತು.

‘ಮಾಡೂದೇನು... ನೀವು ಬೆಕ್ಕುಗಳು ಮೋದಿಮಾಮಾರ ಮನಿವಳಗ ಹೆಗ್ಗಣ ಹಿಡಿತೀವಿ ಅಂತ್ಹೇಳಿ ದೆಹಲಿಗೆ ಹೋಗ್ರಿ’ ಎಂದು ನಕ್ಕೆ.

‘ನೀ ಎಲ್ಲಾದಕ್ಕೆ ಕಿಸಿಕಿಸಿ ನಗಬ್ಯಾಡ. ಮೋದಿಮಾಮಾರು ದೇಶದ ಹಿತಕ್ಕೇ ಇದ್ನೆಲ್ಲ ಹೇಳ್ಯಾರೆ! ಈಗ ಪೆನ್ನು, ಪೇಪರು ತಗ. ಮೋದಿಮಾಮಾರ ಥರ ಸರಳ ಜೀವನ ನಡಸೂದು ಹೆಂಗ ಅಂತ ಪಾಯಿಂಟ್ಸ್ ಹೇಳತೀನಿ, ಬರಕೋ!’ ಎಂದು ಅಪ್ಪಣೆ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.