ಅವಘಡೇ ಸಂವತ್ಸರೇ ದುರ್ಭಿಕ್ಷ ಯುಗೇ ಯಮಗಂಡ ಯುದ್ಧ ಕಾಲೇ ಈ ಮಾಸ ಸಿಲಿಂಡರ್ ವ್ರತವನ್ನು ಶ್ರದ್ಧಾಭಕ್ತಿಯಿಂದ ಮಾಡತಕ್ಕದ್ದು.

ರಾತ್ರಿ ‘ರಮ್ಮೇಸ್ಮಿನ್ ಸನ್ನಿಧಿಂ ಕುರು’ ಎಂದು ಎಣ್ಣೆಯಲ್ಲಿ ಮುಳುಗಿದ್ದ ಪತಿದೇವರನ್ನು ತಣ್ಣೀರು ಸುರಿದು ತೊಳೆದು ಪೂಜೆಗೆ ಸಿದ್ಧಪಡಿಸಿಕೊಳ್ಳಬೇಕು. ಪಶ್ಚಿಮ ಏಷ್ಯಾದ ಅಭಿಮುಖವಾಗಿ ಮಂಟಪವನ್ನು ರಚಿಸಿ ಅದರೊಳಗೆ ಖಾಲಿ ಸಿಲಿಂಡರ್ ಇರಿಸಿ, ಅದಕ್ಕೆ ಪಟಾಕಿ, ಬಾಂಬುಗಳನ್ನು ಕಟ್ಟಿ ಸಿಂಗರಿಸಬೇಕು. ಹಾಗೇ ಹಿಟ್ಟಿನಲ್ಲಿ ಡ್ರೋಣು, ಎಫ್–35, ಕ್ಷಿಪಣಿ ಮೊದಲಾದುವುಗಳನ್ನು ಮಾಡಿ ತೋರಣಕ್ಕೆ ತೂಗುಬಿಡಬೇಕು. ಸಗಣಿಯ ಟ್ರಂಪ್ ಪ್ರತಿಕೃತಿಯನ್ನು ನಿರ್ಮಿಸಿ ಇಟ್ಟುಕೊಳ್ಳಬೇಕು.

ಇಂತಿಪ್ಪ ವ್ಯವಸ್ಥೆಯೊಂದಿಗೆ ಭಕ್ತಿಭಾವಗಳಿಂದ ಸಿಲಿಂಡರ್ ದೇವನನ್ನು ಭಜನೆ, ಮಂತ್ರ ತಂತ್ರಗಳಲ್ಲಿ ಹಾಡಿ ಹೊಗಳಬೇಕು. ‘ಕೊಲ್ಲಿ ನಡುವಿನ ಹೊರ್ಮುಜ್ ಸಂಧಿಗೊಂದಿಯಲಿ, ತೈಲ ನೌಕೆಗಳ ಹಿಂಡು ಹಿಂಡಿನಲಿ, ಇಂಡಿಯಾ ಹಡಗು ಮುಂದೆ ನಡೆಯಲಿ, ಯಾವ ಭೂಮಿ ಎಷ್ಟಾದರೂ ಕಾಯಲಿ, ಒಲೆಯೇ ಇಲ್ಲದೆ ಅಕ್ಕಿ ನೀರಿಟ್ಟರೆ ಅನ್ನವಾಗುವಂತೆ ಸೂರ್ಯ ಸುಡಲಿ, ನಮಸ್ತೇ ಕರೆಂಟ್ ಮಾಯೇ ಮಸ್ಕಾಂ ವಿದ್ಯುಲ್ಲತೇ! ಕೈ ಕೊಡದೆ ಅನವರತ ಕಾಯೇ ಕಣ್ಮುಚ್ಚಾಲೆ ಮಾತೆ!’ ಎಂದು ಪ್ರಾರ್ಥಿಸಬೇಕು.

ಟ್ರಂಪ್ ರಾಕ್ಷಸನನ್ನು ಆವಾಹಿಸಿ ‘ಎಲ್ಲಿ ನೋಡಿದರಲ್ಲಿ ತಾನೇ ಎನ್ನುತ ಕೈ ಮಿಲಾಯಿಸುವ ಗಾಂಪನೆಲ್ಲಿ ನೋಡಿದಿರೇ?’ ಹಾವಾದ್ರೂ ಕಚ್ಚಬಾರ್ದಾ ಮಾದರಿಯಲ್ಲಿ ‘ಡ್ರೋಣಾದ್ರೂ ಬೀಳಬಾರ್ದಾ, ಕ್ಷಿಪಣಿಯಾದ್ರೂ ಸಿಡೀಬಾರದಾ?’ ಎಂದು ದರ್ಭೆಯಲ್ಲಿ ಬಡಿಯುತ್ತಾ ಸುಡಬೇಕು.

ಮಧ್ಯೆ ಮಧ್ಯೆ ‘ಶಾಶ್ವತ ಕದನವಿರಾಮ ಪ್ರಾಪ್ತಿರಸ್ತು, ಸಿಲಿಂಡರ್ ವೃದ್ಧಿರಸ್ತು, ಪೆಟ್ರೋಲ್ ಪುಷ್ಟಿರಸ್ತು’ ಎಂದು ಆಶೀರ್ವಾದ ಮಾಡುವ ಜೋಯಿಸರಿಗೆ ಯಥೋಚಿತ ನಗದು ಕಾಣಿಕೆಯೊಂದಿಗೆ ವಿದ್ಯುತ್ ಒಲೆ ದಕ್ಷಿಣೆಯಾಗಿ ನೀಡಿ, ಗಂಡನಿಗೆ ಕಂಕಣ ಕಟ್ಟಿ, ಪೂಜೆಗಿಟ್ಟ ಸಿಲಿಂಡರ್ ಹೆಗಲ ಮೇಲೆ ಹೊರಿಸಿ ಆರತಿ ಮಾಡಿ ಕ್ಯೂನಲ್ಲಿ ನಿಲ್ಲಲು ಕಳಿಸಿಕೊಡುವುದರೊಂದಿಗೆ ಮಾಸ ಸಿಲಿಂಡರ್ ವ್ರತವು ಸಂಪೂರ್ಣವು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.