‘ಏಳು, ಕಾಫಿ ಕುಡಿ’ ಎಂದು ನನ್ನ ಎಬ್ಬಿಸಿದ ಬೆಕ್ಕಣ್ಣ, ಮಹಿಳಾ ದಿನಾಚರಣೆಯ ಶುಭ ಕೋರಿತು.

ಇವತ್ತಾದರೂ ‘ಬೆಡ್ ಕಾಫಿ’ಯ ಅದೃಷ್ಟ ದೊರೆಯಿತಲ್ಲ ಎಂಬ ಖುಷಿಯಿಂದ ‘ಕಾಫಿ ಕಪ್ ಕೊಡು’ ಎಂದೆ.

‘ದಿನಾ ನೀವು ಹೆಣ್ಮಕ್ಕಳು ಮನೆಯವರಿಗೆಲ್ಲ ಮಾಡಿಕೊಟ್ಟು, ಆಮೇಲೆ ಕುಡಿತೀರಿ. ಇವತ್ತು ನಿಮ್ಮದೇ ದಿನಾಚರಣೆ. ಅದಕ್ಕೇ ಮಾಡಿದ ಕೂಡಲೇ ನೀವೇ ಮೊದಲು ಕುಡೀರಿ... ನಿಮ್ಮ ಕಪ್ ನಿಮ್ಮದೇ ಇವತ್ತು!’ ಎಂದಿತು.

‘ಹೋಗಲೇ... ನಾವು ಗಂಡ್ಮಕ್ಕಳ ಹಂಗೇ ಮನುಷ್ಯರು, ಸಮಾನವ್ಯಕ್ತಿಗಳು ಅನ್ನೋದನ್ನು ಮದ್ಲು ತಿಳಕೋರಿ’ ಎಂದು ಬೈದು, ಪೇಪರಿನಲ್ಲಿ ಬಜೆಟ್ ಮುಖ್ಯಾಂಶಗಳನ್ನು ನೋಡತೊಡಗಿದೆ.

‘ಸಿದ್ದು ಅಂಕಲ್ಲು 11ಜಿ ಕೊಟ್ಟಾರಂತಲ್ಲ... ಅದ್ರಾಗೆ ಡಬ್ಲ್ಯು ಅಂದ್ರೆ ವುಮನ್ ಅಂತ ಐತೇನು?’ ಬೆಕ್ಕಣ್ಣ ಕೇಳಿತು.

‘ಮೊದಲನೇ ಜಿ ಅಂದ್ರೆ ಗ್ಯಾರಂಟಿ... ಗ್ಯಾರಂಟಿವಳಗೆ ಗೃಹಲಕ್ಷ್ಮಿ, ಶಕ್ತಿ ಯೋಜನೆ ಮುಂದುವರಿಸ್ಯಾರೆ ಅಷ್ಟೆ’ ಎಂದೆ.

‘ಈ ಬಜೆಟ್ ಕರ್ಣಕಠೋರ ಅಂತ್ಹೇಳಿ ಕುಮಾರಣ್ಣ ಕಿವಿ ಮುಚ್ಚಿಕೊಂಡಾರೆ. ಅಶೋಕಣ್ಣ ಇದು ಖಾಲಿ ಚೊಂಬು ಅಂದಾರೆ. ವಿಪಕ್ಷಗಳಿಗೆ ಭಯಂಕರ ನಿರಾಸೆಯಾಗೈತಿ’ ಎಂದು ಬೆಕ್ಕಣ್ಣ ಲೊಚಗುಟ್ಟಿತು.

‘ನಿರ್ಮಲಕ್ಕ ಕೇಂದ್ರ ಬಜೆಟ್ ಮಂಡಿಸಿದಾಗ್ಲೂ ವಿಪಕ್ಷಗಳಿಗೆ ಭಾರೀ ನಿರಾಸೆಯಾಗಿತ್ತು. ಅದು ಎಲ್ಲಾ ವಿಪಕ್ಷಗಳ ವಾಡಿಕೆ’.

‘ಸಿದ್ದು ಅಂಕಲ್ಲು ಗ್ಯಾರಂಟಿ ಯೋಜನೆಗಳಿಗೆ ಭಾಳ ಸಾಲ ಮಾಡ್ಯಾರೆ. ರಾಜ್ಯದ ಸಾಲ ಎಂಟು ಲಕ್ಷ ಕೋಟಿಗೆ ಏರೈತಿ’.

‘ಕೇಂದ್ರದ ಸಾಲ ಕಡಿಮಿ ಏನಿಲ್ಲ! ನಿರ್ಮಲಕ್ಕನ ಬಜೆಟ್ಟಿನಲ್ಲಿ ₹215 ಲಕ್ಷ ಕೋಟಿ ಸಾಲ ತೋರಿಸ್ಯಾರೆ. ರಾಜ್ಯದ ಸಾಲ ಆರ್ಥಿಕ ಶಿಸ್ತಿನ ಶೇ 25ರ ಒಳಗೆ ಇದ್ದರೆ ಕೇಂದ್ರದ್ದು ಶೇ 55ರಷ್ಟು ಅಂತೆ’ ಎಂದೆ.

‘ಅಂದ್ರ ಶ್ರೀಸಾಮಾನ್ಯರ ತೆಲಿ ಮ್ಯಾಲೆ ರಾಜ್ಯದ್ದು, ಕೇಂದ್ರದ್ದು ಎರಡೂ ಸೇರಿ ಅಂದಾಜು ಎಷ್ಟು ಸಾಲ ಐತಿ?’ ಎಂದು ಬೆಕ್ಕಣ್ಣ ಕೇಳಿದಾಗ ತಲೆ ಕೆರೆದುಕೊಂಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.