ಬೈ ಎಲೆಕ್ಷನ್ ಪ್ರಚಾರ ಮುಗಿಸಿ ನಾಯಕರು ದಣಿದು ಬಂದಿದ್ದರು. ವೇದಿಕೆ ಹತ್ತಿಳಿದು ಮೈ–ಕೈ ನೋವು, ಭಾಷಣ ಮಾಡಿ ಗಂಟಲು ನೋವು ಶುರುವಾಗಿತ್ತು. ಫ್ಯಾಮಿಲಿ ಡಾಕ್ಟರ್ ಸಲಹೆಯಂತೆ ‘ಬೆಡ್ ರೆಸ್ಟ್’ನಲ್ಲಿದ್ದರು.

‘ಉಪ ಚುನಾವಣೆಯ ರಣರಂಗದಲ್ಲಿ ನಿಮ್ಮ ಹೋರಾಟ, ಹಾರಾಟ, ಆರ್ಭಟ ರೋಮಾಂಚನಕಾರಿ ಆಗಿತ್ತು...’ ಎಂದು ಹೊಗಳುತ್ತಾ ಪತ್ನಿ ಕಾಫಿ ತಂದುಕೊಟ್ಟರು.

‘ನನ್ನ ಬೈಗುಳ ಪ್ರತಿಭೆಯಿಂದಲೇ ನಮ್ಮ ಪಕ್ಷ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ನಂಬಿ ಪಕ್ಷದ ಹೈಕಮಾಂಡ್ ನನ್ನನ್ನು ಚುನಾವಣೆಯ ಸ್ಟಾರ್ ಪ್ರಚಾರಕ ಎಂದು ಗುರುತಿಸಿದೆ!’ ನಾಯಕರು ಅಭಿಮಾನಪಟ್ಟರು.

‘ಭಾಷಣಗಳಲ್ಲಿ ಎದುರಾಳಿ ಪಕ್ಷದ ನಾಯಕರನ್ನು ಕೆಟ್ಟದಾಗಿ ಬೈದು ಅವರ ಜನ್ಮ ಜಾಲಾಡುವ ಬೈಯೋಲಜಿ ತಜ್ಞ ನೀವು!’

‘ಇನ್ನೂ ಕೆಟ್ಟದಾಗಿ ಬೈಯುವ ಕಲಾಕೌಶಲ ನನಗಿದೆ. ಸಾರ್ವಜನಿಕ ಕಾರ್ಯಕ್ರಮ ಎನ್ನುವ ಕಾರಣಕ್ಕೆ ನಾಲಿಗೆ ನಿಯಂತ್ರಣ ಮಾಡಿಕೊಂಡೆ’.

‘ನಿಮ್ಮ ನಾಲಿಗೆ ಕತ್ತಿಗಿಂಥ ಹರಿತ, ಚೂರಿಗಿಂಥ ಇರಿತ!’

‘ಹೌದು, ಚುನಾವಣಾ ಯುದ್ಧದಲ್ಲಿ ನಾಲಿಗೆಯೇ ಅಸ್ತ್ರ! ನಾಲಿಗೆಸಜ್ಜಿತನಾಗಿ ಪ್ರಚಾರ ಕಣಕ್ಕಿಳಿದು ವೀರಾವೇಶದಿಂದ ಪ್ರತಿಸ್ಪರ್ಧಿಗಳ ಗ್ರಹಚಾರ ಬಿಡಿಸಿ, ಜನರ ಚಪ್ಪಾಳೆ, ಹೈಕಮಾಂಡ್ ಪ್ರಶಂಸೆ ಗಿಟ್ಟಿಸಿದ್ದೇನೆ’ ನಾಯಕರು ಬೀಗಿದರು.

‘ಪ್ರತಿಸ್ಪರ್ಧಿ ಪಕ್ಷದ ನಾಯಕರು ನಿಮ್ಮನ್ನೂ ಹೀನಾಮಾನವಾಗಿ ಬೈದು ನಮ್ಮ ಕುಟುಂಬದ ಮಾನಹರಣ ಮಾಡಿಬಿಟ್ಟಿದ್ದಾರೆ ಕಣ್ರೀ...’

‘ನಾವು ರಾಜಕಾರಣಿಗಳು ಬಹಿರಂಗದಲ್ಲಿ ಬೈದಾಡ್ತೀವಿ, ಅಂತರಂಗದಲ್ಲಿ ಅನ್ಯೋನ್ಯವಾಗಿರ್ತೀವಿ. ನೀನು ಆತಂಕಪಡಬೇಡ’ ಸಮಾಧಾನ ಹೇಳಿದರು.

‘ಬೈ ಎಲೆಕ್ಷನ್ ಬಹಿರಂಗ ಪ್ರಚಾರ ಮುಗಿದರೂ ಪ್ರಚಾರ ಸಭೆಗಳಲ್ಲಿ ನೀವು ಬೈದ ಬೈಗುಳಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋದು ನಿಂತಿಲ್ಲ. ನಾಲಾಯಕ್ ನಾಯಕ, ಹೀನಸಂಸ್ಕೃತಿ ನಾಯಕ, ಖಳನಾಯಕ... ಇನ್ನೂ ಕೆಟ್ಟದಾಗಿ ಜನ ನಿಮ್ಮನ್ನು ಬೈಯುತ್ತಲೇ ಇದ್ದಾರೆ...’ ಬೇಸರಗೊಂಡ ಪತ್ನಿ ಕಾಫಿ ಕಪ್ ತೆಗೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.