‘ಆಯಿಯೆ... ಆಯಿಯೆ... ಬೈಟಿಯೆ...’ ಶುದ್ಧ ಹಿಂದಿಯಲ್ಲಿ ಆದರದಿಂದ ಸ್ವಾಗತಿಸಿದರು ಉತ್ತರ ಪ್ರದೇಶದ ಎಂಪಿ.

‘ಈ ಉರಿ ಬಿಸಿಲಲ್ಲೂ ನಿಮ್ಮ ಮಧುರ ಮಾತು ಕೇಳಿ ಮನದುಂಬಿ ಬಂತು. ಶುಕ್ರಿಯಾ... ಶುಕ್ರಿಯಾ’ ಎಂದು ಹಿರಿಹಿರಿ ಹಿಗ್ಗುತ್ತಾ ಬಂದು ಕೂತರು ಕರ್ನಾಟಕದ ಸಂಸದ.

ಉತ್ತರದ ಸಂಸದ ಹಿಂದಿಯಲ್ಲೇ ಮಾತು ಮುಂದುವರಿಸಿದರೆ, ಕರ್ನಾಟಕದ ಎಂಪಿ ತಿಣುಕಾಡುತ್ತಾ ಅರ್ಧ ಕನ್ನಡ, ಅರ್ಧ ಹಿಂದಿಯಲ್ಲಿ ಮಾತಾಡತೊಡಗಿದರು.

‘ಇನ್ನೇನು, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಶುರುವಾಗುತ್ತೆ, ನಿಮ್ಮ ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 40ಕ್ಕೆ ಏರಬಹುದು. ಆಪ್ ಕೊ ಬಹುತ್ ಖುಷ್ ಹೈನಾ...?’

‘ಹಾಂ ಜೀ... ಆದರೆ, ನಾರ್ತ್ ಇಂಡಿಯಾ, ಅಂದ್ರೆ ಈ ಹಿಂದಿ ಬೆಲ್ಟ್ನವರ ಸಂಖ್ಯೆ 76 ಪರ್ಸೆಂಟ್ ಜಾಸ್ತಿ ಆದ್ರೆ, ಸೌಥ್ನವರದು ಶೇ 30ರ ಆಸುಪಾಸು ಅಷ್ಟೇ ಜಾಸ್ತಿ ಆಗುತ್ತಲ್ವ?’ ಧೈರ್ಯ ಮಾಡಿ ಕೇಳಿದರು ಕನ್ನಡದ ಎಂಪಿ!

‘ಓ ಐಸಾ ನಹಿ ಹೇ ಜೀ... ನಿಮಗೆ ಸರಿಯಾಗಿ ವಿವರಿಸ್ತೀನಿ ದೇಖೀಯೇ’ ಎಂದವರೆ, ಜನಸಂಖ್ಯೆ ಆಧಾರದಲ್ಲಿ ದೇಶವನ್ನು 9 ಭಾಗ ಮಾಡಿ ಹೇಳತೊಡಗಿದರು, ‘ಏಕ್ ತೇರಾ, ಏಕ್ ಮೇರಾ, ದೋ ತೇರಾ, ದೋ ಮೇರಾ, ತೀನ್ ತೇರಾ, ತೀನ್ ಮೇರಾ... ಬರಾಬರ್, ನೋ ಚೀಟಿಂಗ್...?’ ಎಂದು ತೋರಿಸಿದರು. 6 ಭಾಗ ನಾರ್ತ್ ಇಂಡಿಯಾ ಕಡೆಗಿದ್ದರೆ, 3 ಭಾಗ ದಕ್ಷಿಣ ಭಾರತದ ಕಡೆಗಿತ್ತು.

‘ಬರಾಬರ್, ಬರಾಬರ್...’ ಎಂದು ತಲೆಯಾಡಿಸುತ್ತಾ ಎದ್ದರು ಹೆಮ್ಮೆಯ ಕನ್ನಡಿಗ!

‘ಡೌಟ್ ಹೇಯ್ ತೊ ಆಪ್ ಕೆ ಹೈಕಮಾಂಡ್ ಕೊ ಪೂಛಿಯೇ...’

‘ಅಯ್ಯೋ ಹೈಕಮಾಂಡ್ ಮುಂದೆ ಬಾಯಿ ಬಿಡೋದಾ? ಉಚ್ಚಾಟನೆ ಮಾಡಿಬಿಡ್ತಾರೆ... ಆಪ್ ಕಾ ಬರಾಬರ್ ಹೈ, ಬರಾಬರ್ ಹೈ, ನೋ ಚೀಟಿಂಗ್, ನೋ ಚೀಟಿಂಗ್’ ಎನ್ನುತ್ತಾ ಖುಷಿಯಿಂದ ಹೊರಟರು ಕರ್ನಾಟಕದ ಎಂಪಿ!
.ಎಷ್ಟೇ ಪುಂಗಿ ಊದಿದರೂ ಕಾಂಗ್ರೆಸ್ ಗೆಲ್ಲಲ್ಲ: ವಿಜಯೇಂದ್ರ.ಲವ್ ಜಿಹಾದ್ ಹಿಂದೆ ಕಾಂಗ್ರೆಸ್: ಬಸವರಾಜ ಕ್ಯಾವಟರ್ ಆರೋಪ.ಮತಗಳ್ಳತನ: ಬಿಜೆಪಿ, ಟಿಎಂಸಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ.ಕೊನೆ ಉಸಿರು ಇರುವವರೆಗೂ ಬಾಬಾಸಾಹೇಬರ ಆದರ್ಶ ರಕ್ಷಿಸಲು ಹೋರಾಡುತ್ತೇನೆ: ರಾಹುಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.