‘ಮಂತ್ರಿ ಸ್ಥಾನ ಖಚಿತಪಡಿಸಿಕೊಂಡೇ ವಾಪಸ್ ಮನೆಗೆ ಬರೋದು...’ ಎಂದು ಹೇಳಿ ಶಾಸಕರು ದೆಹಲಿ ಯಾತ್ರೆಗೆ ತೆರಳಿದ್ದರು.

ಶಾಸಕರು ಹೋದಾಗಿನಿಂದ ಅವರ ಪತ್ನಿಗೆ ನಿದ್ರೆ, ನೆಮ್ಮದಿ ಇಲ್ಲದಂತಾಗಿತ್ತು. ದೆಹಲಿಯ ಹವಾಮಾನ, ಅವಮಾನಕ್ಕೆ ಶಾಸಕರು ಹೊಂದಿಕೊಂಡರೋ ಇಲ್ವೋ, ಅವರ ಬಿಪಿ, ಶುಗರ್ ಏರಿದೆಯೋ ಇಳಿದಿದೆಯೋ ಅಂತ ಪತ್ನಿ ಕಳವಳಗೊಂಡಿದ್ದರು.

ಪತಿಗೆ ಫೋನ್ ಮಾಡಿ, ‘ರೀ, ಹೈಕಮಾಂಡ್ ದೇವರ ದರ್ಶನವಾಯ್ತೆ? ದೇವರು ವರ ಕೊಟ್ಟನೆ?’ ಎಂದು ಕೇಳಿದರು.

‘ಒಂದು ದೇವರ ದರ್ಶನ ಆಯ್ತು. ನನ್ನದೇನೂ ಇಲ್ಲ, ದೊಡ್ಡ ದೇವರು ತೀರ್ಮಾನ ಮಾಡ್ತಾರೆ ಎಂದು ಹೇಳಿ ಕಾಫಿ ಕೊಟ್ಟು ಕಳಿಸಿದರು. ದೊಡ್ಡ ದೇವರುಗಳು ಪರರಾಜ್ಯದ ಚುನಾವಣಾ ಪ್ರಚಾರಕ್ಕೆ ಹೋಗಿವೆ. ಬರುವವರೆಗೂ ಕಾಯಬೇಕು’ ಎಂದರು ಶಾಸಕರು.

‘ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮದವರಿಗೆ ಯಾಕ್ರೀ ಹೇಳಿಕೆ ಕೊಟ್ರಿ? ಸಿಎಂ, ಡಿಸಿಎಂ ನಿಮ್ಮ ಮೇಲೆ ಉರಿದುಬಿದ್ದಿದ್ದಾರೆ. ಸಿಟ್ಟಿಗೆದ್ದು ಸಚಿವ ಸಂಪುಟ ವಿಸ್ತರಣೆ ಬದಲು ಸರ್ಕಾರ ವಿಸರ್ಜನೆ ಮಾಡಿಬಿಟ್ಟರೆ ಗತಿ ಏನ್ರೀ?’

ಶಾಸಕರು ಗಾಬರಿಯಾದರು.

‘ನೀವು ಮಂತ್ರಿಯಾಗಬೇಕೆಂದು ನಿತ್ಯ ಮನೆದೇವರಿಗೆ ತುಪ್ಪದ ದೀಪ ಹಚ್ಚಿ ಬೇಡಿಕೊಳ್ಳುತ್ತಿದ್ದೇನೆ. ಅಭಿಮಾನಿ ಕಾರ್ಯಕರ್ತರು ದೇವಸ್ಥಾನಗಳಲ್ಲಿ ನಿಮ್ಮ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸ್ತಿದ್ದಾರೆ. ನೀವು ಅಲ್ಲಿ ಧ್ಯಾನ, ತಪಸ್ಸು ಮಾಡಿ ಹೈಕಮಾಂಡ್ ದೇವರನ್ನು ಒಲಿಸಿಕೊಂಡು ಮಂತ್ರಿ ಸ್ಥಾನದ ವರ ಪಡೆಯಿರಿ’.

‘ನನ್ನ ಸೀನಿಯಾರಿಟಿ, ಸಿನ್ಸಿಯಾರಿಟಿ ಮೆಚ್ಚಿ ದೇವರು ಮಂತ್ರಿ ಭಾಗ್ಯ ಕರುಣಿಸುತ್ತಾರೆ’ ಎಂದು ಶಾಸಕರು ಆತ್ಮವಿಶ್ವಾಸದಿಂದ ಹೇಳಿದರು.

‘ಓವರ್ ವಿಶ್ವಾಸ ಬೇಡ, ನೀವು ಕೇಳಿದಾಕ್ಷಣ ದೇವರು ವರ ಕೊಡೋದಿಲ್ಲ... ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಮಾಡ್ತೀವಿ, ನೀವು ವಾಪಸ್ ಹೋಗಿ ಎಂದು ಹೇಳಿಕಳಿಸುತ್ತಾರೆ ಅಷ್ಟೇ...’ ಎಂದು ಪತ್ನಿ ಫೋನ್ ಕಟ್ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.