ರಾತ್ರಿ ಬೈಕಲ್ಲಿ ಮನೆಗೆ ಹೊರಟಿದ್ದ ಗುಡ್ಡೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿಂದೆ ಯಾರೋ ಕೂತು ಹೆಗಲ ಮೇಲೆ ಕೈ ಇಟ್ಟಂತಾಯಿತು. ತಿರುಗಿ ನೋಡಿದರೆ ಬೇತಾಳ! ‘ನನ್ನ ಹೊಸ ಪ್ರಶ್ನೆಗಳಿಗೆ ಉತ್ತರ ಹೇಳು, ಇಲ್ಲದಿದ್ದರೆ ನಿನ್ನ ತಲೆ ಸಹಸ್ರ ಹೋಳಾದೀತು’ ಎಂದಿತು ಬೇತಾಳ.

‘ನೀನೊಬ್ಬ... ನಂಗೆ ತಲೇನೆ ಇಲ್ಲಪ್ಪ, ಏನೀಗ? ಮನೇಲಿ ನಿನ್ ತರ ಪ್ರಶ್ನೆ ಕೇಳಾಕೆ ಒಬ್ರು ಕಾಯ್ತಿದಾರೆ, ನಾ
ಯಾರಿಗಂತ ಉತ್ತರ ಕೊಡ್ಲಿ? ಸರಿ, ಅದೇನ್ ಕೇಳು...’ ಎಂದ ಗುಡ್ಡೆ.

‘ಏನಿಲ್ಲ, ಈ ಕರ್ನಾಟಕ ಮಾದರಿ ಅಂದ್ರೇನು?’

‘ಅದಾ... ನಾ ಕೊಡಲ್ಲ, ನೀ ಬಿಡಲ್ಲ ಮಾದರಿ ಅಂತ...’

‘ಅರ್ಥ ಆಯ್ತು, ಕೊಟ್ಟ ಕುದುರೆ ಏರದ ಎಚ್ಡಿಕೆ ವೀರನೂ ಅಲ್ಲ, ಶೂರನೂ ಅಲ್ಲ ಅಂತ ಡಿಕೆ ಅಂದ್ರಲ್ಲ, ಯಾಕೆ?’

‘ನಂಗೆ ಕುದುರೆ ಕೊಟ್ಟು ನೋಡ್ಲಿ, ಹೆಂಗೆ ಸವಾರಿ ಮಾಡ್ತೀನಿ ಅಂತ ಅರ್ಥ... ಏನ್ಮಾಡೋದು, ಡಿಕೆಗೆ ಕುದುರೇನೆ ಸಿಗ್ತಿಲ್ಲ...’

‘ಸರಿ, ಕೊಟ್ಟು ಹೋಗಬೇಕು, ಇಲ್ಲ ಬಿಟ್ಟು ಹೋಗಬೇಕು, ತಗಂಡು ಹೋಗಾಕಾಗಲ್ಲ ಅಂತ ಡಿಕೆ ಅಂದ್ರಲ್ಲ, ಏನದು?’

‘ಸಿಎಂ ಕುರ್ಚಿ ಕಣಯ್ಯ, ಅಷ್ಟೂ ಗೊತ್ತಾಗಲ್ವಾ?’

‘ಓ... ಈಗ ಅರ್ಥ ಆಯ್ತು, ಅದಿರ್ಲಿ, ಮೋದಿ ಸಾಹೇಬ್ರು ಇಲ್ಲಿ ಎಲ್ಲದರ ಬೆಲೆ ಏರಿಸಿ ಅಲ್ಲಿ ಇಟಲಿ ಪ್ರಧಾನಿಗೆ ಚಾಕೊಲೇಟ್ ಕೊಡೋದು ಸರೀನಾ?’

‘ಪ್ರಶ್ನೆ ಸರಿ, ಉತ್ತರ ಅವರೇ ಕೊಡ್ಬೇಕು...’

‘ನಿನ್ತಲೆ, ಈಗ ತಮಿಳುನಾಡು ಸಿಎಂ ಸಾಹೇಬ್ರು ಕಚೇರಿಗೆ ಲಂಚ್ ಬಾಕ್ಸ್ ತಗಂಡು ಹೋಗ್ತಾರಂತೆ, ನೀನು ಸಿಎಂ ಆಗಿದ್ರೆ ಏನ್ಮಾಡ್ತಿದ್ದೆ?’

‘ಲಂಚ್ ಬಾಕ್ಸ್ ಬಿಟ್ಟು ಲಂಚದ ಬಾಕ್ಸ್ ತಗಂಡು ಹೋಗ್ತಿದ್ದೆ...’

‘ಭ್ರಷ್ಟ ನೀನು... ಕೊನೇ ಪ್ರಶ್ನೆ, ಮನೇಲಿ ಹೆಂಡ್ತಿದೀರ ಕಾಟ ತಪ್ಪಿಸ್ಕಳಾಕೆ ಏನ್ ಮಾಡ್ಬೇಕು?’

‘ದೇಶದಾದ್ಯಂತ ಬಸ್ ಫ್ರೀ ಮಾಡ್ಬೇಕು!’

ಗುಡ್ಡೆ ಉತ್ತರಕ್ಕೆ ನಗುತ್ತಾ ಬೇತಾಳ ಹಾರಿ ಹೋಗಿ ಹುಣಸೆಮರಕ್ಕೆ ನೇತು ಹಾಕಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.