‘ನಮ್ಮ ಮಂಡ್ಯದಿಂದ ಮಣ್ಣು ತಕ್ಕೋಗಿ ಸೂಪರ್ ಪಿಚ್ಚು ತಯಾರು ಮಾಡ್ಯವುರಂತಲ್ಲಾ ಅಣೈ...’ ನಾನು ಖುಷಿಪಟ್ಟೆ.

‘ನೋಡಪ್ಪೋ, ರಾಜಕೀಯದೋರು ಪುಗಸಟ್ಟೆ ಐಪಿಎಲ್ ಟಿಕೇಟು ಕೊಡ್ಸಿ ಅಂತ ಜುಲುಮೆ ಮಾಡಿ ಮಾನಮರ್ವಾದೆಗೆ ಮಣ್ಣಾಕ್ಕಬುಟ್ರು. ಇವರುನ್ನ ಸಂತೇಲಿ ಹರಾಜಾಕಿದ್ರೂ ಯಾರೂ ತಕ್ಕೋಕಿಲ್ಲ’ ಯಂಟಪ್ಪಣ್ಣ ಸಿಟ್ಟಾಯ್ತು.

‘ಐಪಿಎಲ್ಲಲ್ಲಿ ಕ್ರಿಕೆಟ್ಟಿನೋರ ಹರಾಜು ಹಾಕಿದಂಗೆ ರಾಜಕಾರಣಿಗಳನ್ನೂ ಹರಾಜು ಹಾಕಿದ್ರೆ ಯಂಗಿದ್ದತ್ತು ಅಂತ?’ ತಿಪ್ಪಣ್ಣ ವಿಚಾರ ಸ್ಫೋಟಿಸಿದ.

‘ಕರೆಟ್ಟು ಕಲಾ. ಕೈ ವಾರಿಯರ್ಸ್, ಕಮಲ ಕೇಸರೀಸ್, ದಳ ಸೆಕ್ಯುಲರ್ಸ್ ಅಂತ ಮೂರು ಫ್ರಾಂಚೈಸಿಗಳೂ ಹಾಲಿ–ಮಾಜಿ ಶಾಸಕರ ಕುಟುಂಬಕ್ಕೆ ಚುನಾವಣೆ ಟಿಕೇಟು ಕೊಟ್ಟು, ಉಳಿದ ಸೀಟಿಗೆ ಅನ್–ಕ್ಯಾಪ್ಡ್ ಕ್ಯಾಂಡೀಡೇಟ್ ಖರೂದಿ ಮಾಡ್ತವೆ. ಶಾಸಕರಾದ ಮ್ಯಾಲೆ ಇವು ಸದನಕ್ಕೂ ಬರದೆ ಬಾಯಿಗೆ ಕ್ಯಾಪ್ ಹಾಕ್ಕ್ಯಂದಿರತವೆ’ ಅಂದ್ರು ತುರೇಮಣೆ.

‘ಕ್ಯಾಪ್ಟನ್ಸಿಗೆ ಸ್ಟಾರ್ ಪ್ಲೇಯರ್ಸು ಸಿದ್ದಣ್ಣ–ಡಿಕೆ, ಇಜಿಯಣ್ಣ–ಅಸೋಕಣ್ಣರ ಜಗಳವೇ ಮುಗಿದುಲ್ಲ. ಯಂಗೋ ದಳ ಸೆಕ್ಯುಲರ್ಸಲ್ಲಿ ಮಾತ್ರ ಕ್ಯಾಪ್ಟನ್ಸಿಗೆ ಕಿತ್ತಾಟವಿಲ್ಲ ಬುಡು’ ಅಂತು ಯಂಟಪ್ಪಣ್ಣ.

‘ರವಿಯಣ್ಣ, ಪ್ರಿಯಾಂಕಣ್ಣ, ಚಲವಾದಿ ಇವರೆಲ್ಲಾ ಇಂಪ್ಯಾಕ್ಟ್ ಲೈಯರ್ಸ್ ಆಗಿರತರೆ. ಹಂಗೇ ಫ್ರಾಂಚೈಸಿ ವಿರುದ್ಧ ಅಡ್ಡ ಮಾತಾಡಿದೋರು ಈಸ್ವೂರಣ್ಣ, ಯತ್ನಾಳಾತರೆ ಗೊತ್ತಿರಲಿ’ ಅಂತಂದೆ.

‘ಸುನಿಲಣ್ಣ, ಮಾದೇವಣ್ಣ, ಜಾರಕಿಹೊಳಿ, ಪರಮಣ್ಣ, ಜಮೀರಣ್ಣ ರಿಟೆನ್ಷನ್ ಪ್ಲೇಯರುಗಳು ಅಲ್ವೇನ್ರೋ?’ ಅಂತ ಯಂಟಪ್ಪಣ್ಣ ಪ್ರಶ್ನಿಸಿತು.

‘ಟೀಂ ಕೋಚುಗಳು ಯಾರಣೈ?’ ಅಂದ ತಿಪ್ಪಣ್ಣ.

‘ದಳ ಸೆಕ್ಯುಲರ್ಸಿಗೆ ದೇವಜ್ಜೋರು, ಕಮಲ ಕೇಸರೀಸಿಗೆ ಆಪರೇಷನ್ ಎಕ್ಸ್ಪರ್ಟ್ ರಾಜಾವುಲಿ. ಕೈವಾರಿಯರ್ಸಿಗೆ ಕೋಚು ಯಾರು ಅಂತ ತೀರ್ಮಾನಾಗಿಲ್ಲ’ ತುರೇಮಣೆ ವಿವರಿಸಿದರು.

‘ನನಗೊಂದು ಅನುಮಾನ. ಹಾಲಿ ಶಾಸಕರು, ಸಂಸದರ ಮಕ್ಕಳು–ಮರಿಗಳಿಗೇ ಟಿಕೇಟು ಕೊಟ್ಕಹೋದರೆ
ಕಾರ್ಯಕರ್ತರು ಬಾವುಟ ಕಟ್ಟಕ್ಕಷ್ಟೇ ಲಾಯಕ್ಕೋ? ರಾಜಕೀಯದೇಲಿ ಗುಂಪುಗಾರಿಕೆ ತುಂಬಿ ತುಳುಕುತ್ತಿರೋ ವಾಗ ಸೀಟು ಹರಾಜಿನ ಗೆಜ್ಜೆಪೂಜೆ ಯಾಕೆ?’ ತಿಪ್ಪಣ್ಣನ ಅನುಮಾನಕ್ಕೆ ಯಾರೂ ಉತ್ತರ ಕೊಡ್ಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.