‘ಯಾರೋ ಏನೋ ಅಂದ್ರೆ ನನಗೇನು? ಹೈಕಮಾಂಡ್ ಬುಡು ಅಂದ್ರೆ ಬುಡ್ತೀನಿ, ಅವಕಾಶ ಕೊಟ್ಟರೆ ಸಾಲ ಮಾಡ್ಯಾದ್ರೂ ಸರಿ ಇಂಥವೇ ಇನ್ನೆರಡು ಬಜೆಟ್ ಮಾಡದೇಯ ಅಂದವ್ರೆ ಹುಲಿಯಣ್ಣಾರು’ ಎಂದು ಪತ್ರಕರ್ತರು ನಾಯಕರನ್ನ ಕೆಣಕಿದರು.

‘ಇದಿಯಮ್ಮ ನನ್ನ ಹಣೇಬರಾವಲ್ಲಿ ಸಿಂಹಾಸನ ಅಂತ ಬರೆದಿದ್ರೆ ಅದೇ ಆತದೆ’ ಅಂತ ನಾಯಕರು ಅಂದಾಗ ಪತ್ರಕರ್ತರು, ‘ಅಂದ್ರೆ ನೀವು ಶಸ್ತ್ರತ್ಯಾಗ ಮಾಡಿದ್ದೀರಾ?’ ಅಂತಂದ್ರು.

‘ಶಸ್ತ್ರವೇ ಇಲ್ಲಾ ಕನಾ. ಇನ್ನು ತ್ಯಾಗ ಎಲ್ಲಿ ಬತ್ತು’ ಎಂದು ನಾಯಕರು ತಲೆಯಾಡಿಸಿದರು.

‘ಮಂತೆ ನಾನು ಸ್ಟ್ರೀಟ್ ಫೈಟರ್ ಅಂದ್ರಲ್ಲಾ, ನಿಮ್ಮ ಸ್ಟ್ರಾಟಜಿ ಏನು?’ ಮತ್ತೆ ಕೆಣಕಿದರು ಸುದ್ದಿಗಾರರು.

‘ನಾವು ಎಐ ಕಾಲದಗದೀವಿ ಕನ್ರೀ. ನಮ್ಮ ತಾವೂ ಕಮ್ಯೂನಿಟಿ ಇಂಟೆಲಿಜೆನ್ಸ್ ಅದೆ, ಮೋಸದ್ ಬೇಹುಗಾರಿಕೆಅದೆ, ಸ್ಲೀಪರ್ ಸೆಲ್ ಅದೆ. ಅಂಡರ್ ಕವರ್ ಏಜೆಂಟುಗಳು ಅವ್ರೆ’.

‘ಇರಬೋದು. ಆದರೆ, ಸಿಂಹಾಸನ ಸಂಪಾದನೆಗೆ ಪ್ರತಿರೋಧವೋ ಅಥವಾ ಆಕ್ರಮಣವೋ, ಏನು ಮಾಡ್ತೀರ?’ ಪರ್ತಕರ್ತರು ತಿವಿದರು.

‘ನೋಡ್ರೀ, ಸಿಎಂ ಸೇರಿ ನಮ್ಮ ಜೊತೆಗೆ 139 ಜನರ ಸೈನ್ಯ ಅದೆ. ಈಗ ನಾವೆಲ್ಲಾ ಹಾಲುಜೇನು ಇದ್ದಂಗದೀವಿ. ನಮ್ಮ ಮಧ್ಯೆ ತಂದಾಕಬ್ಯಾಡಿ’ ನಾಯಕರು ವಿನಂತಿಸಿದರು.

‘ಅಯ್ಯೋ ಶಿವನೇ, ನಾವ್ಯಾಕೆ ತಂದಾಕನ ಸಾ. ಈಗ ಕೊನೇದಾಗಿ ನಿಮ್ಮ ನಿಲುವು ಏನೆಂದು ಹೇಳಿಬುಡಿ, ನಾವು ಹೋಂಟೋಯ್ತಿವಿ’ ಎಂದು ಪತ್ರಕರ್ತರು ಜುಲುಮೆ ಮಾಡಿದರು.

‘ನೋಡ್ರೀ ನನಗೂ ಸಿಂಹಾಸನ ಬೇಕಾಗ್ಯದೆ. ಅದು ಮಿಂಚಿನ ಥರ ಹೊಳೆದು ಮಾಯವಾಯ್ತಾ ಇರತದೆ. ಆದರೆ, ಸಿಂಹಾಸನದ ಆಸೆ ಅದಲ್ಲಾ, ಅದು ತಿಗಣೆ ಥರ ದಿನವೆಲ್ಲಾ ಕಚ್ಚುತಾ ಇರುತ್ತೆ. ನಾವು ಅದನ್ನ ಹೊಸಕಿ ಹಾಕ್ತಲೇ ಇರತೀವಿ. ಇದುನ್ನೆ ಅಲ್ಲುವರಾ ವಿಧಿವಿಲಾಸ ಅನ್ನದು?’ ನಾಯಕರು ವಡಪು ಹಾಕಿ ಹೊಂಟೋದರು.

ಪತ್ರಕರ್ತರು ತಮಗೆ ಸಿಕ್ಕಿದ್ದು ಪ್ರಶ್ನೆಯೋ ಇಲ್ಲ ಉತ್ತರವೋ ಗೊತ್ತಾಗದೆ ಗೊಂದಲಕ್ಕೆ ಒಳಗಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.