‘ನಮ್ ಕಾಲ್ದಾಗೆ, ‘ನೋಡಿ ಕಲಿ, ಮಾಡಿ ತಿಳಿ’ ಅಂತಿದ್ರು. ಈಗ ನೋಡಿ ಕಲಿ, ಮಾಡು ನಕಲಿ ಅನ್ನೋ ಅಂಗಾಗೈತೆ. ಮತ್ತೆ ಈ ನಕಲಿ ಸರ್ಟಿಫಿಕೇಟು, ಪಿಎಚ್.ಡಿ ಸದ್ ಮಾಡ್ತಿವೆ’ ಎಂದ ಗುದ್ಲಿಂಗ.

‘ಮತ್ತಿನ್ನೇನ್ಲಾ ಮಾಡಾರು? ಇದ್ದದ್ನೇ ತಿರುಗಿಸಿ ಮುರುಗಿಸಿ ಬರ್ದು ಎಲ್ಲಾ ವಿಷಯ ಕಾಲಿ ಆಗವೆ. ಇನ್ನೆಂಗ್ ಒಸ ಪ್ರಬಂಧ ಬರ್ದು ಪಿಎಚ್.ಡಿ ತಕಾಳಾದು? ಹಾಳಾದ್ದು ಎಐ ಕಾಟ ಬೇರೆ. ಅದು ಒಂದು ಅಕ್ಷರ ಎತ್ತಾಕ್ಕಂಡ್ರೂ ಗಬಕ್ಕಂತ ಹಿಡ್ಕಂಬುಡುತ್ತೆ’ ಎಂದು ಮಾಲಿಂಗ ಪಿಎಚ್.ಡಿ ಪ್ರವೀಣರ ಪರ ವಕಾಲತ್ತು ವಹಿಸಿದ.

‘ಅದ್ರ ಮೇಲೇ ಪ್ರಬಂಧ ಬರುದ್ರಾಯ್ತು. ಯಂತ್ರಗಳ ಕೃತಕ ಬುದ್ಧಿಮತ್ತೆ ಮತ್ತು ಬುದ್ಧಿ ಒತ್ತೆ ಇಟ್ಟ ಮನುಷ್ಯರ ಕೃತ್ರಿಮ ಬುದ್ಧಿಮತ್ತೆ ಅಂತ ಬರೀಬಹುದು’ ಎಂದ ಕಲ್ಲೇಶಿ.

‘ಮೇಲುಗೈ ವಿದ್ಯಾರ್ಥಿನಿಯರ ಹಿಂದಿನ ಕೊಡುಗೈ ವಿದ್ಯಾರ್ಥಿಗಳ ಅಳಲು: ಒಂದು ‘ಫಾಲೋ’ಅಪ್ ಅಧ್ಯಯನ ಅಂತ ಬರೀಬಹುದು’.

‘ರಾಜಕೀಯದಲ್ಲಂತೂ ಮಸ್ತು ವಿಷಯ ಅವೆ. ಕರುನಾಡ ಕಲಿಗಳ ದೆಹಲಿ ದಂಡಯಾತ್ರೆಗಳು: ಒಂದು ಹಾರಿಕೆ ಅಧ್ಯಯನ’, ‘...ದೀ ...ದೀ ಪದದ ಎಲೆಕ್ಷನ್ ಚಲ್ಲಣಗಳು’ ಅಂತ ಬರೀಬಹುದು’.

‘ವೂ ಕಣ್ಲಾ, ಕಾದ ಬಂಡೆ ಮೇಲೆ ನಿಂತ ಕೆಚ್ಚಿನ ಟಗರು: ಸಾಂಸ್ಕೃತಿಕ ಒಳಕರೆಗಳು ಮತ್ತು ಹೊರಬರೆಗಳು’ ಅಂತಾನೂ ಬರೀಬಹುದು.

‘ಈ ನಕಲು ಮಾಡೋ ಬೋಗಸ್ ಪಂಡಿತರ ಮೇಲೆ ‘ಕಾಪಿಚಟ್ ಪರಂಪರೆಯಲ್ಲಿ ಕನ್ನಡದ ಪುಸಿಕ್ಯಾಟ್’ ಅಂತ ಡಬಲ್ ಪಿಎಚ್.ಡಿ ಪ್ರಬಂಧ ಕೊರೀಬಹುದು’.

‘ಪುಸಿಕ್ಯಾಟ್ ಅಲ್ಲ ಹುಸಿಕ್ಯಾಟ್! ಅಲ್ಲಲ್ಲೇ ಹುಟ್ಟಿದಾಗ್ನಿಂದ ಅಪ್ಪ ಅಮ್ಮನ್ ನೋಡಿ ಕಲಿ, ಮೇಷ್ಟ್ರನ್ನ ನೋಡಿ ಕಲಿ ಅಂತ ಪೇಜ್ಗಟ್ಲೆ ಕಾಫಿ ಬರ್ಸಿ, ಈಗ ನಕಲು ಮಾಡ್ಬೇಡ ಅಂದ್ರೆ ಎಂಗ್ಲಾ?’ ಎಂದ ಪರ್ಮೇಶಿ.

ಎಲ್ಲಾ ಏನು ಹೇಳಬೇಕೋ ತಿಳಿಯದೆ ಪರ ಪರ ತಲೆ ಕೆರೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.