‘ಲೀವ್ ಲೆಟರ್, ಪರ್ಮಿಷನ್ ಲೆಟರ್ ಇಲ್ಲದೆ ನಿಮ್ಮ ಮಗ ಸ್ಕೂಲಿಗೆ ಆಬ್ಸೆಂಟ್ ಆಗಕೂಡದು ಎಂದು ಕ್ಲಾಸ್ ಟೀಚರ್ ಹೇಳಿದರು ಕಣ್ರೀ’ ಅಂದಳು ಸುಮಿ.

‘ಸ್ಕೂಲ್ ಡಿಸಿಪ್ಲಿನ್ ಫಾಲೋ ಮಾಡಬೇಕು’ ಅಂದ ಶಂಕ್ರಿ.

‘ಮಂತ್ರಿ, ಶಾಸಕರು ಸದನಕ್ಕೆ ಗೈರುಹಾಜರಾಗ್ತಾರೆ, ನಮ್ಮ ಮಗ ಅಪರೂಪಕ್ಕೆ ಆಬ್ಸೆಂಟ್ ಆದರೆ ದೊಡ್ಡ ತಪ್ಪೇನ್ರೀ?’

‘ದೊಡ್ಡವರು ಸದನಕ್ಕೆ ಗೈರಾಗಬಹುದು, ಸ್ಕೂಲ್ ಮಕ್ಕಳು ಆಗಬಾರದು’.

‘ಸದನದಲ್ಲಿ ಸ್ಪೀಕರ್ ಹಾಜರಾತಿ ಕರೆಯುವಾಗ ‘ಆ ಖಾತೆ ಮಂತ್ರಿ?’ ಎಂದಾಗ ವಿಪಕ್ಷದವರು ಆಬ್ಸೆಂಟ್ ಅಂತ ಕೂಗ್ತಾರೆ. ‘ಈ ಖಾತೆ ಮಂತ್ರಿ?’ ಅಂದರೆ ಗೈರುಹಾಜರಿ ಎನ್ನುತ್ತಾರೆ, ಇನ್ನೊಂದು ಇಲಾಖೆ ಸಚಿವರು ಬಂದಿದ್ದಾರೇನ್ರೀ ಎಂದು ಕೇಳಿದರೆ ಅವರೂ ಬಂದಿಲ್ಲ ಸಾರ್ ಎಂದು ವಿರೋಧ ಪಕ್ಷದವರು ಆಡಿಕೊಂಡು ನಗ್ತಾರೆ’.

‘ಸದನದಲ್ಲಿ ಮಂತ್ರಿ, ಶಾಸಕರು ಸ್ಕೂಲ್ ಮಕ್ಕಳಿಗಿಂಥಾ ಕಡೆಯಾಗಿ ಬೈದಾಡ್ತಾರೆ, ಜಗಳವಾಡ್ತಾರಂತೆ, ಅಶಿಸ್ತು ಮಿತಿಮೀರಿ ಸದನ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂದು ಸ್ಪೀಕರ್ ಸಂಕಟ ತೋಡಿಕೊಂಡಿದ್ದಾರೆ’.

‘230 ಪ್ರಶ್ನೆಗಳ ಪೈಕಿ ಮಂತ್ರಿಗಳು ಬರೀ 84 ಪ್ರಶ್ನೆಗಳಿಗೆ ಉತ್ತರ ಕೊಟ್ಟರಂತೆ. ಇಷ್ಟು ಉತ್ತರದಿಂದ ಪಾಸಿಂಗ್ ಮಾರ್ಕ್ಸ್ ಸಿಗುತ್ತಾ? ಮಂತ್ರಿಗಳು ಪಾಸಾಗ್ತಾರಾ?’

‘ಮಂತ್ರಿಗಳು ಪಾಸಾಗ್ತಾರೋ ಇಲ್ವೊ, ಹೀಗೇ ಮುಂದುವರಿದರೆ ಸದನವಂತೂ ಫೇಲ್ ಆಗ್ತದೆ’.

‘ಸ್ಕೂಲ್ನಲ್ಲಿ ಮಕ್ಕಳು ಪ್ರಶ್ನೆಗೆ ಉತ್ತರ ಕೊಡದಿದ್ದರೆ ‘ಸ್ಟಾಂಡ್ಅಪ್ ಆನ್ ದಿ ಬೇಂಚ್’ ಅಂತ ಟೀಚರ್ ಬೆಂಚ್ ಮೇಲೆ ನಿಲ್ಲಿಸ್ತಾರೆ, ಹಾಗಂತ ಮಂತ್ರಿಗಳಿಗೆ ಸ್ಪೀಕರ್ ಹಾಗೆಯೇ ಹೇಳಬಾರದು, ಅವರು ದೊಡ್ಡವರು...’

‘ಟೀಚರ್ಗಳು ಸಿಟ್ಟಾಗಿ ಮಕ್ಕಳನ್ನು ಕ್ಲಾಸಿನಿಂದ ಆಚೆ ಕಳಿಸ್ತಾರೆ, ಸದನದಲ್ಲಿ ಸ್ಪೀಕರ್ಗೆ ಸಿಟ್ಟು ಬಂದರೆ ತಾವೇ ಸಭಾತ್ಯಾಗ ಮಾಡಿ ಹೋಗಿ ಸಿಟ್ಟು ಶಮನ ಮಾಡಿಕೊಳ್ಳಬೇಕಷ್ಟೇ...’ ಎಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.