ಮಕ್ಕಳ ಮೊಬೈಲ್ ಚಟ ಬಿಡಿಸಲು ಸುಮಿ, ‘ಒಂದೇ ತಿಂಗಳಲ್ಲಿ ಮಕ್ಕಳನ್ನು ಮೊಬೈಲ್ ವ್ಯಸನದಿಂದ ಮುಕ್ತಗೊಳಿಸ್ತೀವಿ’ ಎನ್ನುವ ಸಮ್ಮರ್ ಕ್ಯಾಂಪ್ಗೆ ಮಕ್ಕಳನ್ನು ಸೇರಿಸಿದ್ದಳು. ಕ್ಯಾಂಪ್ ಮುಗಿದರೂ ಮಕ್ಕಳು ಮೊಬೈಲ್ ಮೋಹ ಬಿಡಲಿಲ್ಲ.

‘ಮೊಬೈಲ್ ಕಾಯಿಲೆಗೆ ಮದ್ದಿಲ್ಲ...’ ಶಂಕ್ರಿ ನಿರಾಶೆ ವ್ಯಕ್ತಪಡಿಸಿದ.

‘ನೇತ್ರತಜ್ಞ, ಹೃದಯತಜ್ಞ, ನರರೋಗತಜ್ಞರಂತೆ ಮೊಬೈಲ್ ತಜ್ಞರು ಇದ್ದಿದ್ದರೆ ಮೊಬೈಲ್ ಕಾಯಿಲೆಗೆ ಚಿಕಿತ್ಸೆ ಕೊಡಿಸಬಹುದಾಗಿತ್ತು’ ನೊಂದುಕೊಂಡಳು ಸುಮಿ.

‘ಮಕ್ಕಳ ಮೊಬೈಲ್ ಕಲಿಕೆಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು!’

‘ಅಳುವ ಮಕ್ಕಳಿಗೆ ಮೊಬೈಲ್ನಲ್ಲಿ ವಿಡಿಯೊ ತೋರಿಸಿ ಸಮಾಧಾನ ಮಾಡಿದ್ದು ತಪ್ಪಾ?’

‘ಚಂದ್ರನ ಬದಲು ಮೊಬೈಲ್ ತೋರಿಸಿಕೊಂಡು ಮಕ್ಕಳಿಗೆ ಊಟ ತಿನ್ನಿಸುತ್ತಿದ್ದೆ. ಮಕ್ಕಳು ಯೂಟ್ಯೂಬ್ ಓಪನ್ ಮಾಡಿಕೊಂಡು ರೀಲ್ಸ್ ನೋಡಲು ಶುರು ಮಾಡಿದಾಗ ಅವರ ಜಾಣತನಕ್ಕೆ ನೀನು ಮಾರುಹೋಗಿದ್ದೆ, ಅದರ ಪರಿಣಾಮ ಇದು!’

ಸುಮಿಗೆ ಸಿಕ್ಕಾಪಟ್ಟೆ ಸಂಕಟವಾಯಿತು.

‘ಮೊಬೈಲ್ ವ್ಯಸನ ಸಾರ್ವತ್ರಿಕ ರೋಗವಾಗಿದೆ. ಮಕ್ಕಳನ್ನು ಮೊಬೈಲ್ ಚಟದಿಂದ ಮುಕ್ತಗೊಳಿಸಲು ಸರ್ಕಾರ ಶಾಲೆಗಳ ಪ್ರೇಯರ್ ಟೈಮಿನಲ್ಲಿ ನ್ಯೂಸ್ ಪೇಪರ್ ರೀಡಿಂಗ್ ಕಡ್ಡಾಯ ಮಾಡಿ ಓದುವ ಹವ್ಯಾಸ ಬೆಳೆಸಲು ತೀರ್ಮಾನಿಸಿದೆ’.

‘ಮೊಬೈಲ್ ಚಟ ಬಿಡಿಸುವುದಾದರೆ ನ್ಯೂಸ್ ಪೇಪರ್ ರೀಡಿಂಗ್ ಅನ್ನು ಒಂದು ಸಬ್ಜೆಕ್ಟ್ ಅಂತ ಪರಿಗಣಿಸಲಿ’.

‘ಸಿಲೆಬಸ್ ಹೆವಿ ಆಗುತ್ತೆ’.

‘ಹಿಂದಿ ಹೇರಿಕೆ ತಡೆಯುವ ಪ್ರಯತ್ನದಲ್ಲಿ ಹಿಂದಿ ಬದಲು ನ್ಯೂಸ್ ಪೇಪರ್ ರೀಡಿಂಗ್ ಸಬ್ಜೆಕ್ಟ್ ಸೇರಿಸಿ ಪರೀಕ್ಷೆ ನಡೆಸಿ ಮಕ್ಕಳ ಪ್ರಚಲಿತ ವಿದ್ಯಮಾನಗಳ ಜ್ಞಾನ ಮಾಪನ ಮಾಡಲಿ’ ಎಂದ ಸುಮಿ, ‘ಇನ್ಮೇಲೆ ನೀವೂ ಗಂಭೀರವಾಗಿ ನ್ಯೂಸ್ ಪೇಪರ್ ಓದಿ ಕನ್ನಡ ಭಾಷೆ, ಬರಹ ಸುಧಾರಿಸಿಕೊಳ್ಳಿ, ಮೊನ್ನೆ ನೀವು ಕಾರ್ಪೊರೇಷನ್ಗೆ ಬರೆದ ಅರ್ಜಿಯಲ್ಲಿ ಅರ್ಧಕ್ಕರ್ಧ ಸ್ಪೆಲ್ಲಿಂಗ್ ತಪ್ಪಿದ್ದವು’ ಎಂದು ಕಿಚಾಯಿಸಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.