‘ಅಣೈ, ಮರ್ಯಾದೆ, ಗೌರವ ಅಂದ್ರೆ ಏನು?’ ಅಂತ ತುರೇಮಣೆಗೆ ಕೇಳಿದೆ.

‘ಎರಡೂ ಒಂದೇ ಅಲ್ವೇನ್ಲಾ. ವ್ಯಾಕರಣ ಮರೆತೋಗಿಬುಟ್ಟೇನೋ?’ ಅಂತಂದ್ರು.

‘ಇಲ್ಲ ಕನಣೈ, ಕಂಪನಿಗಳು ‘ಮರ್ಯಾದೆಯಿಂದ ನಿಮ್ಮ ಚಿನ್ನ ನಮಗೇ ಮಾರಬಕು’ ಅಂತ ಜುಲುಮೆ ಮಾಡ್ತವ್ರೆ. ಅದುಕ್ಕೇ ಕೇಳಿದೆ’ ಅಂತಂದೆ.

‘ದಿಟ. ಫೈನಾನ್ಸಿನೋರು, ಬ್ಯಾಂಕಿನೋರೇನು ಕಮ್ಮಿ ಇಲ್ಲಕನೇಳೋ. ಚಿನ್ನ ಅಡ ಮಡಗಿ ಸಾಲ ತಕ್ಕಂದು ಮಜಾ ಮಾಡಿ ಅಂತ ಬೋಧನೆ ಮಾಡ್ತರೆ’ ತುರೇಮಣೆ ಸಮಾಧಾನ ಮಾಡಿದರು.

‘ಹೂ ಕಪ್ಪ, ಈಗ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳು ನಮಗೆ ಸಾಲ ಕೊಟ್ಟು ನಮ್ಮ ಜಲ್ಮ ಜಾಲಾಡ್ತವೆ’ ತಿಪ್ಪಣ್ಣ ಜಾಗರೂಕತೆ ಮಾಡಿದ.

‘ಮನ್ನೆ ಜಿನ ಪೇಪರಲ್ಲಿ ಐಪಿಎಲ್ಲಿನೋರು ಇನ್ನೊಂದು ಟೀಮಿನಿಂದ ಪ್ಲೇಯರುಗಳನ್ನ ಲೋನು ಮ್ಯಾಲೆ ತಕ್ಕಬೈದು ಅಂತ ಬಂದುತ್ತಲ್ಲ. ಪ್ಲೇಯರುಗಳೂ ಲೋನು ಮೇಲೆ ಹೋತರಾ?’ ಯಂಟಪ್ಪಣ್ಣ ಅನುಮಾನದಲ್ಲಿ ಕೇಳಿತು.

‘ದಿಲ್ಲೀಲಿ ಏಳೇಳು ಆಮ್ಆದ್ಮಿಗಳು ಆಪರೇಷನ್ ಮಾಡ್ಸಿಕಂದು ಬದಲಾದ್ರಲ್ಲ ಅದು ಯಾವ ಪ್ರಕಾರ?’ ಅಂತ ಕೇಳಿದೆ.

‘ಇದು ಪೊಲಿಟಿಷಿಯನ್ ಲೋನು ಸಿಸ್ಟಂ ಕಯ್ಯಾ. ಬಿಹಾರದಲ್ಲಿ ನಿತೀಶಣ್ಣನ್ನ, ಇಲ್ಲಿ ಕುಮಾರಣ್ಣನ್ನ, ಮಂಜಣ್ಣ ಡಾಕ್ರುನ್ನ ಲೋನು ಮ್ಯಾಲೆ ತಗಂಡವ್ರಲ್ಲ’ ತುರೇಮಣೆ ವಿಶದಪಡಿಸಿದರು.

‘ಅದ್ನೇ ಏನೋ ಡಿಕೆಶಿ ಅಣ್ಣ ವಡಪಾಕಿ ಬಂದುದ್ದು. ‘ಅಧ್ಯಕ್ಸರೇ ನಾನು ಇಲ್ಲಿಗೆ ಗಾಳಿ ಕುಡಿಯಕ್ಕೆ ಬಂದುಲ್ಲ. ನೀವು ಕುರ್ಚಿ ಇಚಾರ ಬಿರ್ರನೆ ಪೈಸಲ್ ಮಾಡದಿದ್ರೆ ಕಮಲದೋರು ನನ್ನ ಲೋನು ಮ್ಯಾಲೆ ತಗಂದು ಸಿಎಂ ಮಾಡಕ್ಕೆ ತುದಿಗಾಲಲ್ಲಿ ನಿಂತವರೆ ಅಂದದಂತೆ’ ಅಂದ ತಿಪ್ಪಣ್ಣ ಭವಿಷ್ಯ ನುಡಿದ.

‘ಅದ್ಕೇ ಏನೋ, ಇಲ್ಲಿದ್ರೆ ಓಕಳಿ ಇಟ್ಟಾಡುಸ್ತರೆ ಅಂತ ರಾವುಲಣ್ಣ ಪ್ರವಾಸ ಹೋಗಿರದು’ ಯಂಟಪ್ಪಣ್ಣ ಜಯ ಮಂಗಳ ಹಾಡಿತು. ‘ಹಂಗಾದ್ರೆ ಹನಿ ಆಡಕ್ಕೆ ಸುರುವಾಗ್ಯದೆ ಅನ್ನಪ್ಪ’ ತುರೇಮಣೆ ಷರಾ ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.