‘ಛೀ... ಇದೇನ್ರೀ, ನಿಮ್ಮ ಹತ್ತಿರ ಬಂದರೆ ಈರುಳ್ಳಿ ವಾಸನೆ ಬರ್ತಿದೆ, ಯಾಕೆ ಸ್ನಾನ ಮಾಡಿಲ್ವ?’ ಮೂಗು ಮುಚ್ಚಿಕೊಳ್ಳುತ್ತಾ ಹೇಳಿದಳು ಹೆಂಡತಿ.

‘ಥಂಡಾ ಥಂಡಾ ಕೂಲ್ ಕೂಲ್...’ ಜೇಬಿನಲ್ಲಿಟ್ಟುಕೊಂಡಿದ್ದ ಈರುಳ್ಳಿ ತೆಗೆದು ತೋರಿಸಿದೆ.

‘ಥೂ... ನಾನಿಲ್ಲಿ ಅಡುಗೆಗೆ ಇಟ್ಟಿದ್ದ ಈರುಳ್ಳಿ ಕಾಣ್ತಿಲ್ವಲ್ಲ ಅಂತ ಹುಡುಕ್ತಿದೀನಿ, ನೀವು ನೋಡಿದ್ರೆ ಅದನ್ನ ಜೇಬಿನಲ್ಲಿಟ್ಟುಕೊಂಡು ಓಡಾಡ್ತಿದೀರಾ?’

‘ಹೊರಗಡೆ ಎಷ್ಟು ಹೀಟ್ ಇದೆಯಂತ ಗೊತ್ತಾಗ್ತಿಲ್ವ ನಿನಗೆ’ ಬೆವರು ಒರೆಸಿಕೊಳ್ಳುತ್ತಾ ಹೇಳಿದೆ.

‘ಬಿಸಿಲಿಗೂ, ಈರುಳ್ಳಿಗೂ ಏನ್ರೀ ಸಂಬಂಧ?’

‘ನಮ್ ಸೆಂಟ್ರಲ್ ಮಿನಿಸ್ಟರ್ ಸಿಂಧಿಯಾ ಹೇಳಿಲ್ವ, ಬಿಸಿಲ ಧಗೆಯಿಂದ ಪಾರಾಗಬೇಕೆಂದರೆ ಜೇಬಲ್ಲಿ ಈರುಳ್ಳಿ ಇಟ್ಟುಕೊಂಡು ಓಡಾಡಿ ಅಂತ, ಅದನ್ನ ಪಾಲಿಸ್ತಿದೀನಿ’.

‘ತಲೆಗೆ ಸಗಣಿ ಕಟ್ಟಿಕೊಂಡರೆ ಇನ್ನೂ ತಂಪಾಗಿರಬಹುದಲ್ವ? ರೈತರು ನೋಡಿದರೆ ಈರುಳ್ಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಬೀದಿಗೆ ಎಸೆಯುತ್ತಿದ್ದಾರೆ, ಇವರಿಗೆ ಈರುಳ್ಳಿನೇ ಎ.ಸಿ. ಅಂತೆ’ ಹಣೆ ಚಚ್ಚಿಕೊಂಡಳು.

‘ಹಾಂ... ಅದೇ ನಮ್ ಮಿನಿಸ್ಟರ್ ಮಾಸ್ಟರ್ ಸ್ಟ್ರೋಕ್. ಎಲ್ಲರೂ ಈರುಳ್ಳಿನ ಜೇಬಲ್ಲಿ ಇಟ್ಕೊಂಡು ಓಡಾಡೋಕೆ ಶುರು ಮಾಡಿದ್ರೆ ಆಟೊಮೆಟಿಕ್ ಆಗಿ ಉಳ್ಳಾಗಡ್ಡಿಗೆ ಡಿಮಾಂಡ್ ಬಂದೇ ಬರುತ್ತೆ, ರೈತರೂ ಉದ್ಧಾರ ಆಗ್ತಾರೆ’.

‘ಆಗ್ತಾರೆ, ಆಗ್ತಾರೆ... ಈ ಹಿಂದೆಯೂ ನಿಮ್ ನಾಯಕರೇ ಅಲ್ವೇನಪ್ಪ ಗಟಾರ್ ಗ್ಯಾಸ್ ಥಿಯರಿ ಅಂತ ಚರಂಡಿ ನೀರಿನಿಂದ ಗ್ಯಾಸ್ ಉತ್ಪಾದಿಸಿ, ಅದರಿಂದಾನೇ ಚಹಾ ಮಾಡಬಹುದು ಅಂತ ಹೇಳಿದ್ದು, ಹಾಗೆ ಮಾಡೋದು ಬಿಟ್ಟು ಮೊನ್ನೆ ಮತ್ಯಾಕೆ ತಾವು ಗ್ಯಾಸ್ ಸಿಲಿಂಡರ್ಗಾಗಿ ಏಜೆನ್ಸಿ ಮುಂದೆ ಕ್ಯೂ ನಿಂತಿದ್ದು’ ವ್ಯಂಗ್ಯವಾಡಿದಳು.

‘ನೋಡು, ನಮ್ ಡೈರೆಕ್ಟರ್ ಪ್ರೇಮ್ ಅಣ್ಣ ಹೇಳಿಲ್ವ, ನಾವ್ ಸಿನಿಮಾ ಮಾಡಿದೀವಿ, ಜನರೇ ಕಥೆ ಬರ್ಕೊಬೇಕು ಅಂತ. ಹಂಗೆ ನಮ್ ನಾಯಕರು ಹೊಸ ಥಿಯರಿ ಹೇಳ್ತಿರ್ತಾರೆ, ಅದರ ಪರಿಣಾಮನ ನಾವೇ ಬರೆದುಕೊಳ್ತಾ ಇರಬೇಕು’ ಎನ್ನುತ್ತಾ ಮತ್ತೊಂದೆರಡು ಈರುಳ್ಳಿ ಜೇಬಲ್ಲಿಟ್ಟುಕೊಂಡು ಹೊರಗಡಿಯಿಟ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.