‘ಲೇ ಗುಡ್ಡೆ, ಮೊನ್ನಿ ಚುಂಚನಗಿರಿಗೆ ಮೋದಿ ಸಾಹೇಬ್ರು ಬರುವಾಗ ಬೆಂಗಳೂರಲ್ಲಿ ನಮ್ ಸಿದ್ರಾಮಣ್ಣನ ಕಿವಿ ಹತ್ರ ಏನೋ ಗುಸಗುಸ, ಪಿಸಪಿಸ ಅಂತಿದ್ರಲ್ಲ, ಏನದು?’ ದುಬ್ಬೀರ ಕೇಳಿದ.

‘ನಂಗೇನ್ ಗೊತ್ತಲೆ? ಅವ್ರೇನ್ ನನ್ ಕಿವ್ಯಾಗೆ ಹೇಳಿದ್ರಾ? ಈ ತೆಪರನ ಟೀವೀಲಿ ಅವತ್ತು ಏನೇನೋ ತೋರಿಸ್ತಿದ್ರು, ಅವುನ್ನೇ ಕೇಳು’ ಎಂದ ಗುಡ್ಡೆ.

‘ಹೌದಾ? ಏನ್ ತೋರಿಸ್ತಿದ್ರೋ ನಿಮ್ ಟೀವೀಲಿ?’ ಮಂಜಮ್ಮ ಕೇಳಿದಳು.

‘ಅದ್ನ ನಾನು ಹೇಳ್ತೀನಿ, ಈಗ ನಾನೇ ಟೀವಿ ಆ್ಯಂಕರ್ ಅನ್ಕಳಿ, ಕೇಳಿ... ‘ಮೋದಿ ಸಿದ್ದರಾಮಯ್ಯರ ಕಿವೀಲಿ ಏನು ಹೇಳಿದ್ರು ಗೊತ್ತಾ? ಮೋದಿ ಹೇಳಿದ ಕೊನೆಯ ಆ ಎರಡು ಮಾತು ಏನು? ಕೇಂದ್ರಕ್ಕೆ ಹಾರ್ತಾರಾ ಸಿದ್ದರಾಮಯ್ಯ? ಅಶೋಕ್, ವಿಜಯೇಂದ್ರ ಶಾಕ್ ಆಗಿದ್ದೇಕೆ? ಸಿದ್ದರಾಮಯ್ಯ ಕೇಂದ್ರಕ್ಕೆ ಹಾರಿದ್ರೆ ಇಲ್ಲಿ ಜಮೀರ್ ಕತೆ ಏನು? ವೀಕ್ಷಿಸಿ ರಾತ್ರಿ 7.30ಕ್ಕೆ!’

‘ಮಸ್ತ್ ಹೇಳಿದಿ ಕಣಲೆ ಕೊಟ್ರ’ ಎಂದಳು ಮಂಜಮ್ಮ.

‘ಅದಿರ್ಲಿ... ಮೋದಿ ಸಿದ್ದರಾಮಯ್ಯ ಕಿವೀಲಿ ಏನು ಹೇಳಿರಬೋದು?’ ಗುಡ್ಡೆ ಕೇಳಿದ.

‘ನಮ್ ಪಾರ್ಟಿಗೆ ಬನ್ನಿ, ನೀವು ಕೇಳಿದ್ದು ಕೊಡ್ತೀವಿ ಅಂದಿರಬೋದು’.

‘ಅದಕ್ಕೆ ಸಿದ್ದರಾಮಯ್ಯ ಏನು ಹೇಳಿರಬೋದು?’

‘ನೀವು ಚುಂಚನಗಿರಿ ಪ್ರೋಗ್ರಾಂ ಮುಗಿಸ್ಕಂಡ್ ಬನ್ನಿ, ರಾಗಿಮುದ್ದೆ, ನಾಟಿ ಕೋಳಿ ಸಾರು ಮಾಡಿಸಿರ್ತೀನಿ, ಉಂಡ್ಕಂಡ್ ಹೋಗೀರಂತೆ ಅಂದಿರ್ತಾರೆ...’ ತೆಪರೇಸಿ ನಕ್ಕ.

‘ಈಗ ಅದೆಲ್ಲ ಬಿಡ್ರಪ್ಪ, ಮಹಿಳಾ ಮೀಸಲಾತಿ ಬರ್ತಾ ಐತೆ, ನಮ್ ಮಂಜಮ್ಮನೂ ಎಮ್ಮೆಲ್ಲೆ ಆಗಬೋದು’ ಎಂದ ಗುಡ್ಡೆ.

‘ಲೇಯ್, ಮಂಜಮ್ಮ ಎಮ್ಮೆಲ್ಲೆ ಆದ್ರೆ ನಮ್ ಚಾ ತಿಂಡಿ ಗತಿ ಹೆಂಗೋ?’ ಕೊಟ್ರ ಕೇಳಿದ.

‘ಚಾದಂಗಡಿ ಮುಚ್ಚೋದು, ನಾನು ಮಂಜಮ್ಮನ ಪಿಎ ಆಗ್ತೀನಿ, ನಿಮಗೆಲ್ಲ ಕಾಂಟ್ರ್ಯಾಕ್ಟು, ನಿಗಮ–ಮಂಡಳಿ ಕೊಡಿಸ್ತೀನಿ, ಎಲ್ಲ ಉಂಡ್ಕಂಡ್ ತಿನ್ಕಂಡ್ ಚೆನ್ನಾಗಿರೋಣ...’

‘ಆಹಾ... ಆಸೆ ನೋಡು’ ಎಂದಳು ಮಂಜಮ್ಮ.

ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.