‘ಮೋದೀಜಿ, ಟ್ರಂಪು ಸಾಮ್ರಾಟರು ಬರುತ್ತಿದ್ದಾರೆ’ ಅಂದ್ರು ಅಮಾತ್ಯರು.

‘ಹೌದೇ, ಸ್ವಾಗತಿಸೋಣ ಬನ್ನಿ’ ಎಂದು ಮೋದಿ ಮಹಾರಾಜರು ಹೊರಟರು. ಟ್ರಂಪು ಸಾಮ್ರಾಟರು ಬರುವ ಮುನ್ನ ಅವರ ನಿಶಾನೆ, ಧ್ವಜ, ಪತಾಕೆ, ಛತ್ರಿ, ಚಾಮರ, ಲಾಂಛನಗಳು ಜರ್ಬಿನಿಂದ ಬಂದವು. ಸಾಮ್ರಾಟರ ಅಕ್ಕಪಕ್ಕದಲ್ಲಿ ಬರುತ್ತಿದ್ದ ಬೊಗಳುಭಟರು ‘ಜಯ ಜಯ ಟ್ರಂಪೇಶ್ವರ’ ಅಂತ ಬಹುಪರಾಕ್ ಹಾಕುತ್ತಿದ್ದರು.

‘ಸಾಮ್ರಾಟರೇ ಹೇಗಿದ್ದೀರಿ? ತಮ್ಮ ಆಗಮನ ನಮಗೆ ಸಂತಸ ತಂದಿದೆ’ ಎಂದು ಮೋದಿ ಕೈಕುಲುಕಿ ಸ್ವಾಗತಿಸಿದರು.

‘ಹೌಡೀ ಮೋಡೀಜಿ. ನನಗೆ ಶಾಂತಿ ಬೇಕು. ಹೊರ್ಮುಜ್ ಜಲಸಂಧೀಲಿ ಇಕ್ಕಟ್ಟಾಗಿ ಸೆಕೇಲಿ ಬೇಯ್ತಾ ಇವ್ನಿ. ಸುಮ್ಮನೆ ಇರಾಣ ಅಂದ್ರೆ ಆಯ್ತಾನೇ ಇಲ್ಲ’ ಸಾಮ್ರಾಟರು ಬೆವರು ಒರೆಸಿಕೊಂಡರು. ಸಾಮ್ರಾಟರ ಜೊತೆಗೆ ಬಂದಿದ್ದ ಅವರ ಇಂಪ್ಯಾಕ್ಟ್ ಪ್ಲೇಯರುಗಳು ಬಂದು ಬಂದು ಸಾಮ್ರಾಟರ ಕಿವಿ ಕಚ್ಚತಿದ್ರು. ಇದ ಕಂಡು ಮೋದಿ ಚಟಾಕಿ ಹಾರಿಸಿದರು.

‘ಸಾಮ್ರಾಟರೇ ನಿಮ್ಮ ಇಂಪ್ಯಾಕ್ಟ್ ಪ್ಲೇಯರುಗಳ ಮಾತು ಕೇಳಿಕ್ಯಂದು ಕೊಲ್ಲಿಗೆ ಹೋಗಿ ಕೊಲ್ಲಿ ಮನೆ ಮೂರಾಬಟ್ಟೆ ಮಾಡಿ ಇರಾನಿ ಮೆಟರೆ ಅಮಿಕ್ಕಂದಿದ್ದೀರಿ. ನಿಮ್ಮ ಕೆತ್ತೆಬಜೆಯಿಂದ ದೇಸದೇಸಗಳ ಜನವೆಲ್ಲಾ ಗ್ಯಾಸ್ ಟ್ರಬಲ್ಲಿಂದ ನರಳ್ತಾವೆ’ ಅಂತ ಮೋದಿ ಸಿಡಿದರು.

‘ಮೋಡೀಜಿ, ರಷ್ಯಾದಿಂದ ನೀವು ಎಣ್ಣೆ ತಕ್ಕಬೈದು ಅಂತ ಪರ್ಮಿಶನ್ ಕೊಟ್ಟುದವಿ. ಇನ್ನೇನಾಗಬೇಕು?’ ಟ್ರಂಪು ಸಾಮ್ರಾಟರು ಅಲವತ್ತುಕೊಂಡರು.

‘ಅಲ್ಲಾ ಸಾಮ್ರಾಟರೇ, ರಷ್ಯಾದಿಂದ ಎಣ್ಣೆ ತಕ್ಕಳಿ ಅಂತ ಅನುಮತಿ ಕೊಡಕ್ಕೆ ತಾವು ಯಾರು? ನೀವು ಮಾತ್ರ ತರಾವರಿ ಅಟಂಬಾಬು, ಬತ್ತೀಸು ಆಯುಧ ಮಡಿಕಂದು ಹೇಳಿದಂಗೆ ಕೇಳದಿದ್ದರೆ ಟ್ಯಾಕ್ಸಾಕ್ತೀನಿ ಅಂತ ತೆರಿಗೆ ಭಯೋತ್ಪಾದನೆ ಮಾಡ್ತೀರ. ಈಗ ಸಂಧಿ ಬುಡಸಕ್ಕೋಗಿ ತಾವೇ ಸಂಧೀಲಿ ಸಿಗಾಕ್ಕಂಡಿದ್ದೀರಿ’ ಎಂದು ಮೋದಿ ಬೇಜಾರು ಮಾಡಿಕ್ಯಂದರು.

‘ನೋಡಿ ಮೋಡೀಜಿ, ನಮ್ಮದು ಯಾವಾಗಲೂ ಆದೇಶಸಂಧಿ. ಎಲ್ಲಾದ್ರೂ ಲೋಪವಾದ್ರೆ ಆಗಮಸಂಧಿ’ ಅಂತ ಸಾಮ್ರಾಟರು ಸಂಧಿ ಬಿಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.