‘ಛೇ... ಈ ವರ್ಷ ನೊಬೆಲ್ ಶಾಂತಿ ಕಪ್ ಯಾರಿಗೆ ಕೊಡಬಕು ಅನ್ನೂದೇ ನನಗ ಚಿಂತಿಯಾಗೈತಿ’ ಎಂದು ಬೆಕ್ಕಣ್ಣ ಅಲವತ್ತುಕೊಂಡಿತು.

‘ನಿನಗೆ ಎದಕ್ಕ ಚಿಂತಿ? ನೀ ಏನ್ ನೊಬೆಲ್ ಪ್ರಶಸ್ತಿ ಮಂಡಳಿವಳಗೆ ಅದೀಯೇನಲೇ’ ಎಂದು ರೇಗಿದೆ.

‘ನನಗ ಅಂದರೆ ನನಗೇ ಅಂತಲ್ಲ... ಪಾಪದ ನೊಬೆಲ್ ಪ್ರಶಸ್ತಿ ಮಂಡಳಿಯವರಿಗೆ ಚಿಂತಿಯಾಗಿರತೈತಿ’ ಎಂದು ಮುಸಿಮುಸಿ ನಕ್ಕಿತು.

‘ಯಾಕ... ಈಗ ಶಾಂತಿ ಕಪ್ಪಿಗೆ ಯಾವ ಹೊಸ ಕ್ಯಾಂಡಿಡೇಟ್ ಬಂದಾರೆ?’ ಎಂದೆ ಕುತೂಹಲದಿಂದ.

‘ಇರಾನ್–ಅಮೆರಿಕ ಮಾತುಕತಿಗೆ ಮಧ್ಯಸ್ಥಿಕೆ ವಹಿಸ್ತಿರೋ ಪಾಕ್ ಲಿಸ್ಟ್ ವಳಗೆ ಮೊದ್ಲೇ ಐತಿ. ಯುದ್ಧ ಬ್ಯಾಡ ಅಂತಿದ್ದ ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಶಾಂತಿ ಮಾತುಕತೆಗೆ ಪಾಕಿಸ್ತಾನಕ್ಕೆ ಬಂದಾನೆ. ಅವಂಗೆ ಶಾಂತಿ ಕಪ್ ಕೊಡಬೌದಾ ಅಂತ’ ಬೆಕ್ಕಣ್ಣ ಉದ್ದಕ್ಕೆ ವಿವರಿಸಿತು.

‘ಅಮೆರಿಕದಲ್ಲೇ ತನ್ನ ಬಿಟ್ಟು ಇನ್ನೊಬ್ಬರಿಗೆ ಕೊಟ್ಟರೆ ಟ್ರಂಪಣ್ಣ ಸುಮ್ಮನೇ ಕೂರತಾನೇನು? ಅಂವಾ ನೊಬೆಲ್ ಶಾಂತಿ ಪ್ರಶಸ್ತಿ ಮಂಡಳಿ ಇರೋ ನಾರ್ವೆ ಮ್ಯಾಲೇ ಯುದ್ಧ ಸಾರತಾನೆ’ ಎಂದೆ.

‘ಟ್ರಂಪಣ್ಣನಿಗೆ ಈಗಲೇ ಅಡ್ವಾನ್ಸ್ ಶಾಂತಿ ಕಪ್ ಕೊಟ್ಟು, ಇನ್ ಯುದ್ಧ ಮಾಡಬ್ಯಾಡ ಅಂದ್ರ ಹೆಂಗಿರತೈತಿ?’ ಬೆಕ್ಕಣ್ಣ ಹೊಸ ಉಪಾಯ ಮುಂದಿಟ್ಟಿತು.

‘ಅಂವಾ ಸುಮ್ಮನಿದ್ದರೂ ಆ ನೆತನ್ಯಾಹು ಸುಮ್ಮನಿರಂಗಿಲ್ಲ. ತನ್ನ ಪೂರ್ವಜರು ಹಿಟ್ಲರ್ ಕೈಯಾಗೆ ನರಮೇಧಕ್ಕೆ ಒಳಗಾಗಿದ್ದು ಅವನಿಗೆ ಮರೆತೇ ಹೋಗಿರಬಕು’ ಎಂದೆ ಸಿಟ್ಟಿನಿಂದ.

‘ನರಮೇಧ ಹಾದುಬಂದವರು ಅವನ ಸ್ವಂತ ಕುಟುಂಬದವರು ಅಲ್ಲವಲ್ಲ... ಅವನಿಗೆ ದೊಡ್ಡದೊಂದು ಅಶಾಂತಿ ಕಪ್ ಕೊಡಬಕು!’ ಬೆಕ್ಕಣ್ಣ ಕುಟುಕಿತು.

‘ಶಾಂತಿ–ಅಶಾಂತಿ ಕಪ್ ವಿಚಾರ ಬಿಡಲೇ. ಈಗ ಪಾಕ್ ಶಾಂತಿ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಿ, ನಮ್ ವಿಶ್ವಗುರು ಪಟ್ಟಕ್ಕೂ ಕುತ್ತು ಬಂತಲ್ಲ...’ ಎಂದೆ ಯೋಚಿಸುತ್ತ.

‘ಪಾಕ್ ಹೆಚ್ಚೆಂದರೆ ಮಧ್ಯಸ್ಥ–ಗುರು ಆಗಬೌದು... ವಿಶ್ವಗುರು ಪಟ್ಟ ಯಾವಾಗಿದ್ರೂ ನಮ್ ಮೋದಿ ಮಾಮಂದೇ!’ ಬೆಕ್ಕಣ್ಣ ಮೀಸೆ ತಿರುವಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.