‘ರಾಜಕೀಯ ಕಾಲೇಜು ಶುರು ಮಾಡ್ತಾರಂತಲ್ಲಪ್ಪ, ಇದ್ಕೂ ಸಿಇಟಿ ಇರ್ತದಲ್ವಾ?’ ಕೇಳಿದ ಗುದ್ಲಿಂಗ.

‘ಇದ್ದೇ ಇರ್ತದೆ ಕಣ್ಲಾ, ಕಾಮನ್ ಅಲ್ಲ, ಕ್ರಿಮಿನಲ್ ಎನ್ಟ್ರೆನ್ಸ್ ಟೆಸ್ಟ್ ಅಂತ. ಅಂದಂಗೆ, ಇಲ್ಲೂ ಮೀಸಲಾತಿ ಇರ್ತದಾ ಅಂತ?’ ಎಂದ ಮಾಲಿಂಗ.

‘ಮತ್ತೆ? ಕ್ರಿಮಿನಲ್ ಬ್ಯಾಂಕ್ಗ್ರೌಂಡ್ ಇರೋರ ಮಕ್ಕಳಿಗೆ, ರಾಜಕೀಯದಲ್ಲಿರೋರ ಮಕ್ಳಿಗೆ ಮೀಸಲಾತಿ ಮಡುಗ್ಲೇಬೇಕಲ್ಲ! ಏನೇನು ಕಾಂಬಿನೇಷನ್ ಇರ್ತದೋ ಕಾಣೆ’.

‘ಎಲ್ರಿಗೂ ಒಂದೇ ಕಾಂಬಿನೇಷನ್ ಕಣ್ರಲಾ! ಪಿಸಿಎನ್ಪಿ! ಅಂದ್ರೆ ಪವರ್, ಕರಪ್ಷನ್, ನೆಪೋಟಿಸಮ್ ಅಂದ್ರೆ ಸ್ವಜನಪಕ್ಷಪಾತ, ಪ್ರಾಪರ್ಟಿ ಗ್ರಾಬಿಂಗ್’.

‘ಸಿಲಬಸ್ಸು, ಟೆಕ್ಸ್ಟ್ ಬುಕ್ ಎಲ್ಲಾ ಇರುತ್ತಲ್ವಾ?’ ಕುತೂಹಲದಿಂದ ಕೇಳಿದ ಕಲ್ಲೇಶಿ.

‘ರಾಜಕೀಯನೇ ಔಟ್ ಆಫ್ ಸಿಲಬಸ್ಸು! ಆದ್ರೂ ಟಿಕೆಟ್ ಗಿಟ್ಟಿಸೋ ಟೆಕ್ನಿಕ್ಸ್, ಎಣ್ಣೆ, ಸೀರೆ, ಪಂಚೆ ಹಂಚೋ ಟ್ರಿಕ್ಸ್, ಕೆರೆ, ಕಾಡು ಒತ್ತುವರಿ ಮಾಡೋದು ಎಂಗೆ, ಜೊತೆಗೆ ಗ್ಯಾರಂಟಿ ಕೊಡೋದು, ಲಕ್ಷ ಕೋಟಿ ಸಾಲ ಎತ್ತೋ ಕಲೇಲಿ ಸ್ಪೆಷಲೈಸೇಷನ್ ಇರ್ತದೆ ಕಣ್ರಲಾ...’

‘ಆಮೇಲೆ ಪರ್ಸಂಟೇಜ್ ಪಾಲಿಟಿಕ್ಸ್ ಅಂತ ಒಂದು ಮೈನ್ಬ್ರಾಂಚ್ ಐತೆ. ಇಡಿ, ಲೋಕಾಯುಕ್ತಕ್ಕೆ ಚಳ್ಳೆಹಣ್ಣು ತಿನ್ಸೋದೆಂಗೆ? ಧರಣಿ, ಮಾಡೋದು ಹೆಂಗೆ? ಇವೆಲ್ಲಾ ಇರುತ್ತೆ. ಟೆಂಪಲ್ ರನ್ನು, ನಾಟಿಕೋಳಿ ತಿನ್ನು, ಮಾಟಕ್ಕೂ ಸೈ, ಮೈಮಾಟಕ್ಕೂ ಸೈ, ಮೇಲೆ ಗರಿಗರಿ ಒಳಗೆ ಗೂಂಡಾಗಿರಿ! ಹೊರಗೆ ವೆಲ್ನೆಸ್ ಸ್ಟೇಟು, ಒಳಗೆ ರಿಯಲ್ ಎಸ್ಟೇಟು, ಇವೆಲ್ಲಾ ಕೋರ್ ಸಬ್ಜೆಕ್ಟ್ಸ್!’

‘ಜೊತೆಗೆ ಸದನದಲ್ಲಿ ಬೈದಾಡೋಕೆ ಥರ್ಡ್(ಕ್ಲಾಸ್) ಲಾಂಗ್ವೇಜೂ ಕಲಿಸ್ತಾರೆ. ಅದ್ಸರಿ, ಹೊಸ ಕಾಲೇಜುಗಳಿಗೆ ಕೋಟಿಗಟ್ಲೆ ದುಡ್ಡು ಎಲ್ಲಿಂದ ತರೋದು?’

‘ಹೊಸದು ಯಾಕ್ಲಾ ತೆಗೀಬೇಕು? ಈಗಿರೊ ಕಾಲೇಜಲ್ಲೇ ರಾಜಕೀಯ ತಾಂಡವವಾಡ್ತೈತೆ. ಒಬ್ಬೊಬ್ಬ ಮಂತ್ರಿಗೆ ಒಂದೊಂದು ಕಾಲೇಜು ಉಸ್ತುವಾರಿ ಕೊಟ್ರೆ ಸಾಕು... ಎಂಜಿನಿಯರಿಂಗ್, ಮೆಡಿಕಲ್ ಎಲ್ಲಾ ಕಾಲೇಜ್ನೂ ಅವರು ಪೊಲಿಟಿಕಲ್ ಅಡ್ಡೆ ಮಾಡಾಕ್ತಾರೆ’ ಎಂದ ಪರ್ಮೇಶಿ. ಎಲ್ಲಾ ಕಣ್ ಕಣ್ ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.