‘ಟ್ರಂಪಣ್ಣಂಗೆ ಮೈಸೂರು ಪೇಟ ಇಕ್ಕಿ ಸನ್ಮಾನ. ಅವರೆಂಡ್ರು ಮೆಲ್ಲಮ್ಮಯ್ಯ, ಮಗಳು ಈವಕ್ಕಂಗೆ ಮೈಸೂರು ಸಿಲ್ಕು ಸೀರೆ ಬಾಗಿನ ಮಡಿಲಕ್ಕಿ ಉಯ್ಯಬೇಕು! ಸಂದೇಗೆ ತಿಂಡಿಗೆ ಮೈಸೂರು ಪಾಕು, ಮಸಾಲೆ ದೋಸೆ, ಗಿರ್ಮಿಟ್, ಮಿರ್ಚಿಮಂಡಕ್ಕಿ ಖಾರ, ಕಾಪಿ. ಈಗ ರಾತ್ರಿ ಊಟದ್ದೂ ಕೇಳು’ ಅಂದ್ರು. ನನಗೆ ಕೇಳಿಸಿಕಳದು ಬುಟ್ರೆ ಬೇರೆ ದಾರಿ ಇರಲಿಲ್ಲ.
‘ರಾತ್ರಿಗೆ ಬನ್ನೂರು ಕುರಿ ಬಿರಿಯಾನಿ, ತಲೆ ಮಾಂಸ, ಮಳವಳ್ಳಿ ಕೆರೆ ಹಾವುಬತ್ತಿ ಮೀನು ಸಾರು, ಮುದ್ದೆ, ಬೋಟಿ ಪಲ್ಯ, ಕೈಮಾ ಗೊಜ್ಜು, ಮಟನ್ ಫ್ರೈ ಸಾಕಲ್ವಲಾ?’ ಅಂತ ವಿವರ ಕೊಟ್ರು.