ಮಿತವ್ಯಯ ಅಂದುದ್ದ ಮೋದಿ ಮಾವಾರು ಯಾಕೆ ಯುರೋಪಿಗೋದ್ರು ಅಂತ ಯೋಚ್ನೆ ಮಾಡ್ತಾ ಕುಂತುದ್ದೆ. ‘ಭಕ್ತ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಏನು ಬೇಕು ಕೇಳು?’ ಅಂದಂಗಾತು. ಯಾರು ಮಾತಾಡಿದ್ದು ಅಂತ ಅಕ್ಕಡೆ ಇಕ್ಕಡೆ ನೋಡಿರೆ ಟೀವಿಯಲ್ಲಿ ದೇವರು ಕಾಣ್ತಿತ್ತು.

‘ಇದೇನು ನಮ್ಮಪ್ಪ ಆಫ್ಲೈನಲ್ಲಿ ಕಾಣಿಸದು ಬುಟ್ಟು ಆನ್ಲೈನಿಗೆ ಬಂದುದ್ದಯ್?’ ಅಂತಂದೆ.

‘ಮೋದಿ ವರ್ಕ್ ಫ್ರಂ ಹೋಂ ಮಾಡಿ ಅಂದ್ರಲ್ಲೋ. ನನ್ನ ವೀಸಾ ರದ್ದಾಗಿದ್ಕೆ ಆನ್ಲೈನಲ್ಲಿ ಬಂದಿವ್ನಿ. ನೀನ್ಯಾಕೆ ಅಧಿಕಾರ ಸಿಗದಿರೋ ರಾಜಕಾರಣಿಯಂಗೆ ಯದಾರಾಗಿ ಕುಂತುದ್ದಯ್ ಬಡ್ಡೆತ್ತುದೇ’ ಅಂತು ದೇವರು.

‘ಬಸ್ಸಿಗೆ ಹತ್ತನ ಅಂದ್ರೆ ನನಗೆ ‘ಶಕ್ತಿ’ ಇಲ್ಲ ತಂದೆ. ನಡಕೋಗನ ಅಂದ್ರೆ ಫುಟ್ಪಾತು ಮ್ಯಾಲೆ ಬೈಕು, ರೋಡಲ್ಲಿ ಸ್ಟ್ರೈಕು. ಪೆಟ್ರೋಲು, ಗ್ಯಾಸು, ಡಿಜೆಲ್ಲು ರೇಟು ಜಾಸ್ತಿಯಾಗ್ಯವೆ’ ದೇವರ ಮುಂದೆ ಗೋಳಾಡಿದೆ.

‘ನಿನ್ನ ಕಾರಿಗೆ ಪೆಡಲು ಹಾಕ್ಸು, ಇಲ್ಲಾ ನಿಲ್ಸಿ ಅದರೊಳಗೆ ಸೌದೆ ತುಂಬಿಕ್ಯಳೋ’ ದೇವರು ಸಲಹೆ ಕೊಟ್ಟಿತು.

‘ಅಪ್ನೇ ಹೊಟ್ಟೆಗೂ ಎಣ್ಣಿಲ್ಲ, ತಟ್ಟೆಗೂ ಎಣ್ಣಿಲ್ಲ. ಬದುಕು ನೀಟ್ ಪೇಪರ್ ಥರ ಲೀಕಾಯ್ತಾ ಅದೆ. ಅಕ್ಕಿ, ತರಕಾರಿ, ಮಾಂಸ–ಮಡ್ಡಿ ದುಬಾರಿಯಾಗ್ಯವೆ. ಯಾಕೆ ನನಗೇ ಮೂಗೇಟು ಬೀಳ್ತಾ ಅವೆ?’ ದೇವರ ಕೇಳಿದೆ.

‘ಟ್ರಂಪಣ್ಣನೇ ಚೀನಕ್ಕೋಗಿ ರೇರ್ ಅರ್ತ್ ಮಿನರಲ್ ಕಳುಗಿಸದು ಮಾತ್ರ ನಿಲ್ಲಿಸಬ್ಯಾಡಿ ಅಂತ ಗ್ವಾಗರೆದು ಬಂದವ್ನೆ. ನಿಂದೇನ್ಲಾ ಕ್ಯಾಣ?’

‘ತಂದೆ ನನ್ನ ಇ-ಖಾತೆ ತಕ್ಕೋಕೇ ನನಗೆ ಲಕ್ಕಿಲ್ಲ. ತೆರಿಗೆ ಹೊಡೆತ ಜಾಸ್ತಿಯಾಗ್ಯದೆ. ನನ್ನ ಕಷ್ಟ ನೋಡಿ ಏನಾದರೂ ಆರ್ಟ್ ಆಫ್ ಗಿವಿಂಗ್ ಮಾಡು ತಂದೆ’ ಅಂತ ಬೇಡಿದೆ.

‘ಬಿಪಿಎಲ್ ಇಲ್ಲದ್ಕೆ ನಿನಗೆ ಹೆಸರುಬಲ ಇಲ್ಲ ಕನೋ. ನೀನು ಪ್ರಾರ್ಥನೆ ಮತ್ತು ಪ್ರಯತ್ನ ಬುಡಬ್ಯಾಡ’ ದೇವರು ಹೇಳಿ ಹೊಂಟೋತು.

‘ಸ್ವಾಮಿ ದೇವನೆ ಲೋಕಪಾಲನೆ...’ ಅಂತ ನಾನು ಶುರು ಹಚ್ಕಂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.