ಬೆಕ್ಕಣ್ಣ ಎಡಗೈಯಲ್ಲಿ ದಪ್ಪ ತೊಟ್ಟಿನ ಕಮಲದ ಹೂ ಹಿಡಿದು, ಬಲಗೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸುತ್ತಿತ್ತು.

‘ಏನಲೇ ಇದು ಹೊಸ ಅವತಾರ?’ ಕುತೂಹಲದಿಂದ ಕೇಳಿದೆ.

‘ಇನ್ಮೇಲೆ ಹಿಂಗೇ’ ಎಂದು ಮುಗುಮ್ಮಾಗಿ ನಸುನಕ್ಕಿತು.

ಒಟ್ಟುಗೂಡಿಸಿದ ಕಸವನ್ನು ಕೇಸರಿ ಬಣ್ಣದ ಕಾಗದದಲ್ಲಿ ಹಾಕಿತು. ಕಸವನ್ನು ಮಧ್ಯೆ ಇಟ್ಟು, ಬಣ್ಣದ ಕಾಗದವನ್ನು ಹಾಗೆ ಹೀಗೆ ಮಡಚಿ, ಏಳು ಕಮಲದ ಹೂ ಮಾಡಿತು! ಚಡ್ಡಾ ಮತ್ತು ಆರು ಜನ ಎಎಪಿ ಬಿಟ್ಟವರ ಹೆಸರುಗಳನ್ನು ಈ ಹೂವುಗಳಿಗೆ ಇಟ್ಟಿತು.

‘ಭಪ್ಪರೇ!’ ನಾನು ದಂಗಾಗಿಬಿಟ್ಟೆ.

‘ನೋಡು... ಇಷ್ಟುದಿನ ಪೊರಕೆಯ ಗುಣಗಾನ ಮಾಡ್ತಿದ್ದವರು ಈಗ ಹೆಂಗೆ ಸ್ವತಃ ಕಮಲದ ಹೂ ಆಗ್ಯಾವೆ! ಇದೇ ನಮ್ ಮೋದಿಮಾಮಾರ ಕರಾಮತ್ತು!’ ಎಂದು ಹೆಮ್ಮೆಯಿಂದ ಉಲಿಯಿತು.

ಪೊರಕೆಯನ್ನು ಮೂಲೆಯಲ್ಲಿ ಜೋಪಾನವಾಗಿ ಎತ್ತಿಡುತ್ತ, ‘ಮತ್ತ ನಾಳೆ ಬೇಕಾಗತೈತಿ’ ಎಂದು ಕಣ್ಣು ಮಿಟುಕಿಸಿತು.

‘ಬಂಗಾಳವಳಗೂ ಮೋದಿಮಾಮಾರು ಹಿಂಗೇ ಕರಾಮತ್ತು ನಡೆಸ್ಯಾರೇನು?’ ಕೇಳಿದೆ.

‘ಅಲ್ಲಿ ಕರಾಮತ್ತು ಸ್ವಲ್ಪ ಬ್ಯಾರೆ. ಈ ಸಲನೂ ಮಮತಾ ದೀದೀನೇ ಗೆಲ್ಲಬೌದು ಖರೇ... ಆದ್ರ ಹುಲ್ಲಲ್ಲಿ ಅರಳಿದ ಎರಡು ಹೂಗಳ ಹತ್ರಾನೆ ಕಮಲದ ಹೂ ಕೂಡ ಅರಳತೈತಿ! ನಾಕಾರು ಇ.ಡಿ. ದಾಳಿ ಆಯಿತು ಅಂದರೆ ದೀದಿಯ ಹೂಗಳು ಕಮಲದ ಹೂಗಳಾಗತಾವೆ’ ಎಂದು ಖಣಿ ಹೇಳಿತು.

‘ನಮ್ಮ ದೇಶದಾಗೆ ಅತ್ಯಂತ ಬಡ ಸಿಎಮ್ಮು ಅಂದರೆ ದೀದಿ... ಬಂಗಾಳದ ಹುಲಿ ಇ.ಡಿ. ದಾಳಿಗೆ ಹೆದರಂಗಿಲ್ಲಲೇ’ ಎಂದೆ.

‘ಇನ್ ಮ್ಯಾಗೆ ಕೇಂದ್ರದಾಗೆ ಬಹುಮತದ ಆಡಳಿತ ಪಕ್ಷ ಆರಿಸಕ್ಕೆ ಚುನಾವಣೆ ಮಾಡೂ ಅಗತ್ಯನೇ ಇಲ್ಲ. ಅದು ಹೆಂಗಿದ್ರೂ ನಮ್ ಕಮಲಕ್ಕನ ಪಕ್ಷ. ಬಹುಮತದ ವಿರೋಧ ಪಕ್ಷ ಆರಿಸಕ್ಕೆ ಚುನಾವಣೆ ಮಾಡಬಕು ಅಷ್ಟೇ’ ಎಂದು ಬೆಕ್ಕಣ್ಣ ಚುನಾವಣೆಯ ಹೊಸ ವ್ಯಾಖ್ಯಾನ ಮಾಡಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.