‘ಟ್ರಂಪಣ್ಣ ಮೃಗಾಲಯಕ್ಕೆ ಸ್ಥಳಾಂತರ!’ ಬೆಕ್ಕಣ್ಣ ಜೋರಾಗಿ ವದರಿತು.

‘ಹೌದಾ... ಎದಕ್ಕೆ? ಎಲ್ಲಿಯ ಮೃಗಾಲಯಕ್ಕೆ?’ ಎಂದೆ ಅಚ್ಚರಿಯಿಂದ.

‘ಬಾಂಗ್ಲಾ ಮೃಗಾಲಯಕ್ಕೆ!’ ಎಂದು ಸುದ್ದಿ ತೋರಿಸಿ ಪಕಪಕನೆ ನಕ್ಕಿತು.

ಬಾಂಗ್ಲಾದ ಎಮ್ಮೆಯೊಂದರ ತಲೆಗೂದಲು ಟ್ರಂಪಣ್ಣನ ಕೇಶಶೈಲಿಯನ್ನೇ ಹೋಲುತ್ತಿದ್ದರಿಂದ ‘ಟ್ರಂಪ್ ಎಮ್ಮೆ’ ಎಂದು ಭಾರೀ ಜನಪ್ರಿಯವಾಯಿತಂತೆ. ಬಾಂಗ್ಲಾ ಸರ್ಕಾರ ಅದನ್ನು ಬಕ್ರೀದ್ ಬಲಿಯಿಂದ ಬಚಾವು ಮಾಡಿ ಮೃಗಾಲಯಕ್ಕೆ ಕಳಿಸಿತು ಎಂಬುದು ಸುದ್ದಿ.

‘ಅದೃಷ್ಟವಂತ ಎಮ್ಮೆ. ಬಕ್ರೀದಿಗೆ ಬಲಿಯಾಗದು ತಪ್ಪಿತು! ಆದ್ರೆ ಇಲ್ಲಿ ಬಕ್ರೀದಿಗೆ ಹುಲೀನೆ ಬಲಿಯಾಯಿತು!’ ಬೆಕ್ಕಣ್ಣ ಮರುಗಿತು.

‘ಹೈಕಮಾಂಡ್ ಅಂದ್ರ ಏನಂತ ತಿಳಿದೀಯಲೇ... ತೆಲಿಕೆಳ
ಗಾಗಿ ನೀರೊಳಗೆ ನಿಂದ್ರು ಅಂದ್ರೂ ನಿಲ್ಲಬಕು!’ ಎಂದೆ.

‘ಭಾಳ ದೊಡ್ಡ ಪ್ರಜಾಪ್ರಭುತ್ವ ದೇಶ! ಆದ್ರೆ ಎಲ್ಲಾ ಪಕ್ಷದಾಗೂ ಹೈಕಮಾಂಡ್ ಆಜ್ಞೆಯೇ ಅಂತಿಮ, ಅವರು ಹೇಳಿದಂಗ ಕುಣೀಬಕು’ ಬೆಕ್ಕಣ್ಣ ತಲೆ ಚಚ್ಚಿಕೊಂಡಿತು.

‘ಹೂಂ ಮತ್ತ... ಪ್ರತಿಯೊಂದು ಪಕ್ಷದೊಳಗೂ ಒಬ್ಬರು ಅಥವಾ ಇಬ್ಬರು ಈ ಹೈಕಮಾಂಡಿನ ಹೈಪವರ್ ವ್ಯಕ್ತಿ ಆಗಿರತಾರೆ!’ ಎಂದೆ.

‘ಆದ್ರೂ ಕಮಲಪಕ್ಷ ಬಿಟ್ಟರೆ, ಕೈಪಕ್ಷ, ದಳಪಕ್ಷ ಇತ್ಯಾದಿ ಎಲ್ಲ ಪಕ್ಷದೊಳಗೂ ಈ ಹೈಪವರ್ ವಂಶಪಾರಂಪರ್ಯ!’ ಎಂದು ಬೆಕ್ಕಣ್ಣ ನಕ್ಕಿತು.

‘ಯಾರು ಅಧಿಕಾರಕ್ಕೆ ಬಂದ್ರೇನು... ಶ್ರೀಸಾಮಾನ್ಯನ ಬಲಿಪಶುತನವೂ ವಂಶಪಾರಂಪರ್ಯ’ ಎಂದೆ ಸಿಟ್ಟಿನಿಂದ.

‘ಅಮೆರಿಕದಲ್ಲಿ ಯಾರೇ ಆದ್ರೂ ಎರಡೇ ಸಲ ಪ್ರೆಸಿಡೆಂಟ್ ಆಗಬೌದು. ನಮ್ಮಲ್ಲೂ ಹಂಗೇ ಪಿಎಂ, ಸಿಎಂ, ಮಂತ್ರಿ ಅಥವಾ ಎಂಪಿ ಯಾವುದೇ ಹುದ್ದೆ ಆದ್ರೂ ಎರಡೇ ಸಲ ಆಗಬೌದು ಅಂತ ಕಾನೂನು ಮಾಡಬಕು’ ಬೆಕ್ಕಣ್ಣ ಗುರುಗುಟ್ಟಿತು.

‘ಅಂಥ ಕಾನೂನು ತಂದ್ರೆ ಮೊದ್ಲು ಮೋದಿ ಮಾಮಾ ಕುರ್ಚಿಯಿಂದ ಇಳಿಬೇಕಾಗತೈತಿ. ತೊಂಬತ್ನಾಲ್ಕರ ದೇಗೌಅಜ್ಜಾರಿನ್ನ ಮತ್ತೆ ರಾಜ್ಯಸಭೆಗೆ ಕಳಿಸಕ್ಕೆ ಆಗಲ್ಲ’.

ತಟ್ಟನೆ ಎಚ್ಚತ್ತುಕೊಂಡ ಬೆಕ್ಕಣ್ಣ, ‘ಇವರಿಬ್ಬರನ್ನ ಬಿಟ್ಟು, ಉಳಿದವರಿಗೆ ಕಂಡೀಶನ್ ಅಪ್ಲೈ!’ ಎಂದು ಶಾಣೇತನದ ನಗು ಬೀರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.