ಕಣ್ಮುಂದೆ ಜನಸಾಗರ. ಮುಖದ ಮೇಲೆ ಬೆಳಕೋ ಬೆಳಕು. ಕ್ಯಾಮೆರಾಗಳ ಕಣ್ಣುಗಳು ಚಕಚಕಚಕ ಹೊಡೆದುಕೊಳ್ಳುತ್ತಿವೆ. ಎದುರಿಗೆ ಟೀವಿ ಚಾನೆಲ್ಗಳ ರಾಶಿ ರಾಶಿ ಮೈಕುಗಳು.

‘ಸಾರ್, ಈ ಅಭೂತಪೂರ್ವ ಗೆಲುವು ಕಂಡು ನಿಮಗೇನನ್ನಿಸುತ್ತಿದೆ?’

‘ಇನ್ನೇನನ್ಸುತ್ತೆ ರೀ, ಆಗ್ತಿರೋ ಖುಷೀನ ಹೇಳೋಕೆ ಪದಗಳೇ ಸಿಗ್ತಿಲ್ಲ. ಎಲ್ಲ ನನ್ನ ಅಭಿಮಾನಿಗಳ ಆಶೀರ್ವಾದ’.

‘ಪಕ್ಷ ಕಟ್ಟಿ ಎರಡು ವರ್ಷಕ್ಕೇ ಇಷ್ಟು ದೊಡ್ಡ ಗೆಲುವು! ನಿಮ್ಮ ಕಾರ್ ಡ್ರೈವರ್ ಮಗನೂ ಈಗ ಶಾಸಕ! ಇನ್ನೇನು, ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸೋದೊಂದು ಬಾಕಿ’.

‘... ಹೆಸರಿನವನಾದ ನಾನು ರಾಜ್ಯದ ಮುಖ್ಯಮಂತ್ರಿಯಾಗಿ...’ ಎನ್ನುತ್ತಿದ್ದಂತೆ ಮುಖದ ಮೇಲೆ ನೀರು ಬಿತ್ತು.

‘ಏನಾಯ್ತು ರೀ ನಿಮಗೆ, ನಿದ್ದೆಗಣ್ಣಲ್ಲಿ ಏನೇನೋ ಬಡಬಡಿಸ್ತಿದೀರಿ’ ಹೆಂಡತಿ ನೀರು ಎರಚಿದಳು.

‘ಅಯ್ಯೋ ನಾನು ಇಷ್ಟು ಹೊತ್ತು ಕಂಡಿದ್ದು ಕನಸಾ... ನಾನು ಸಿಎಂ ಆಗಿದ್ದೆ ಕಣೆ’.

‘ಓಹೋ ಆಗ್ತೀರಾ, ಆಗ್ತೀರಾ... ಕೆಲವರಿಗೆ ನನಸಾಗಿದ್ದು, ಹಲವರಿಗೆ ಕನಸಲ್ಲೂ ಸಂಭವಿಸಲ್ಲ. ನನ್ನ ಗೃಹಲಕ್ಷ್ಮಿ ದುಡ್ಡು ಬಂದು ನಾಲ್ಕು ತಿಂಗಳಾಯ್ತು, ಅದೇನಾಗಿದೆ ಅಂತ ಚೆಕ್ ಮಾಡಿ ಬರೋಗಿ’.

‘ಸುಮ್ನೆ ನೀನು ತಮಿಳುನಾಡಿಗೆ ಹೋಗಿಬಿಡು, ಅಲ್ಲಿ ತಿಂಗಳು ತಿಂಗಳು ದುಡ್ಡು, ಮಗಳ ಮದುವೆಗೆ ಚಿನ್ನ, ರೇಷ್ಮೆ ಸೀರೆ, ವರ್ಷಕ್ಕೆ 6 ಸಿಲಿಂಡರ್ ಎಲ್ಲ ಕೊಡ್ತಾರೆ’.

‘ಹೌದ್ ನೋಡ್ರಿ, ಅಲ್ಲಿ ರೀಜನಲ್ ಪಾರ್ಟಿಗೆ ಜನ ಎಷ್ಟ್ ಸಪೋರ್ಟ್ ಮಾಡ್ತಾರೆ, ನಮ್ ರಾಜ್ಯದಲ್ಲಿ ಯಾಕ್ ಮಾಡಲ್ಲ’.

‘ನೀನು ಹಿಂದಿ ವಿರೋಧ ಮಾಡ್ತೀಯ, ಆದರೆ ವೋಟ್ ಮಾತ್ರ ನ್ಯಾಷನಲ್ ಪಾರ್ಟಿಗಳಿಗೇ ಹಾಕ್ತೀಯ. ಪ್ರಾದೇಶಿಕ ಪಕ್ಷ ಇನ್ನೆಲ್ಲಿಂದ ಬರುತ್ತೆ’.

‘ರೀಜನಲ್ ಪಾರ್ಟಿ ಇದ್ದ ಬಂಗಾಳದಲ್ಲೀಗ ನ್ಯಾಷನಲ್ ಪಾರ್ಟಿ ಅಧಿಕಾರಕ್ಕೆ ಬಂದಿದೆ. ಅದಕ್ಕೇನಂತೀರಿ?’

‘ಮೇಡಂ ಬದಲು ಸರ್ ಬಂದ್ರು ಅಂತೀನಿ’.

‘ಅಂದ್ರೆ?’

‘ಅಂದ್ರೆ ಎಸ್ಐಆರ್ ಅಂತ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.