ಗ್ಯಾಸ್ ಆರ್ಡರ್ ಮಾಡಿ ವಾರದ ಮೇಲಾಗಿದ್ದರೂ ಇನ್ನೂ ಬಂದಿರಲಿಲ್ಲ.

‘ಈಗ ಬಳಸ್ತಾ ಇರದು ಖಾಲಿಯಾದ್ರೆ ಅಷ್ಟೇ ಕಥೆ!’ ಎಂದೆ ಚಿಂತೆಯಿಂದ.

‘ಒಂದೇ ಹೊತ್ತು ಅಡುಗೆ ಮಾಡ್ರಿ. ಉಳಿದಂತೆ ಕೋಸುಂಬರಿ, ಹಸಿ ತರಕಾರಿ, ಹಣ್ಣುಹಂಪಲ ತಿನ್ನಿರಿ. ಆರೋಗ್ಯಕ್ಕೂ ವಳ್ಳೇದು!’ ಬೆಕ್ಕಣ್ಣ ಉಪದೇಶಿಸಿತು.

‘ಒಂದೇ ಹೊತ್ತು ಅಡುಗೆಗಾದ್ರೂ ಗ್ಯಾಸ್ ಬೇಕಲ್ಲಲೇ… ಎಲ್ಪಿಜಿ ಪೂರೈಕೆ ಕಡಿಮೆಯಾಗೈತಿ’.

‘ಎಲ್ಪಿಜಿ ಸಿಲಿಂಡರ್ ಅಭಾವ ಅಂತ ಮಂದಿ ಸುಳ್ಳೇ ವದಂತಿ ಹಬ್ಬಿಸತಿದ್ದಾರೆ. ಅಂಥೋರು ದೇಶಕ್ಕೂ ಹಾನಿ ಮಾಡತಾರೆ ಅಂತ ಮೋದಿಮಾಮಾರು ಗರಂ ಆಗ್ಯಾರೆ’ ಎಂದು ಬೆಕ್ಕಣ್ಣ ಪೇಪರು ಓದುತ್ತ ಹೇಳಿತು.

‘ಗ್ಯಾಸ್ ಏಜೆನ್ಸಿಗಳ ಮುಂದೆ ಬೆಳಗಿನಿಂದ ಕ್ಯೂ ನಿಂತು ಬಿಸಲಾಗೆ ಒಣಗಿ ಹಪ್ಪಳ ಆಗಾಕೆ ಮಂದಿಗೆ ಹುಚ್ ಹಿಡಿದೈತೇನು?’ ಎಂದೆ ನಾನೂ ಗರಂ ಆಗಿ.

ಬೆಕ್ಕಣ್ಣ ಒಳಹೋಗಿ ಅರ್ಧ ಲೋಟ ನೀರು ತಂದಿತು.

‘ನೋಡು, ಅರ್ಧ ಲೋಟ ಖಾಲಿ ಅನ್ನಬಾರದು. ಅರ್ಧ ತುಂಬೈತಿ ಅನ್ನಬಕು’ ಎಂದಿತು.

‘ಲೋಟ ಅರ್ಧ ಖಾಲಿ ಇರೂದೂ ಸತ್ಯ ತಾನೆ?’ ಎಂದೆ.

‘ಊಹೂಂ, ಅರ್ಧ ತುಂಬೈತಿ! ಸಿಲಿಂಡರ್ ಇಲ್ಲ, ಖಾಲಿ ಅನ್ನಬಾರದು. ಸಿಲಿಂಡರುಗಳು ಅದಾವು, ಒಳಗೆ ಗ್ಯಾಸ್ ತುಂಬಬೇಕಷ್ಟೆ ಅನ್ನಬಕು. ದೇಶಕ್ಕಾಗಿ ಹಿಂಗೆ ಧನಾತ್ಮಕ ಚಿಂತನೆ ಮಾಡಬಕು’ ಎಂದು ಬೆಕ್ಕಣ್ಣ ವಾದಿಸಿತು.

‘ತೆಲೀನೆ ಇಲ್ಲ, ತೆಲಿ ಖಾಲಿ ಅಂತೆಲ್ಲ ಅನ್ನಬಾರದು.
ತೆಲಿ ವಳಗೆ ಮಿದುಳು ಕಡಿಮೆ ಅಷ್ಟೇ ಅನ್ನಬಕು!’ ಎಂದು ನಕ್ಕೆ.

‘ಕರೆಕ್ಟ್! ಗ್ಯಾಸ್ ಖಾಲಿ, ಸಿಗತಾ ಇಲ್ಲ… ಇಂತಹ ಅಭಾವ ಚಿಂತನೆ ಕೈಬಿಡಬೇಕು. ಎಲ್ಪಿಜಿ ಕೊಲ್ಲಿ
ದೇಶಗಳಲ್ಲಿ ಸಮೃದ್ಧವಾಗೈತೆ… ಅಲ್ಲಿಂದ ಎಲ್ಪಿಜಿ ಬರೂತನಕ ಸೊಪ್ಪುಸದೆ, ಹಣ್ಣುಹಂಪಲ ತಿನ್ನೂಣು
ಅಂತ ಧನಾತ್ಮಕ ಆರೋಗ್ಯ ಚಿಂತನೆ ಮಾಡಬಕು! ಟ್ರಂಪಣ್ಣನ ಯುದ್ಧೋನ್ಮಾದಕ್ಕಾಗಿ ನಾವು ಜರಾ ತ್ಯಾಗ ಮಾಡೂಣು!’ ಬೆಕ್ಕಣ್ಣ ನಾಯಕನಟನಂತೆ ಭಾಷಣ ಕುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.